ಪಾಕ್‌ ಯುವತಿಗೆ ಭಾರತೀಯ ಹೃದಯ

KannadaprabhaNewsNetwork |  
Published : Apr 26, 2024, 12:51 AM ISTUpdated : Apr 26, 2024, 04:27 AM IST
HEART TRANSPLANT

ಸಾರಾಂಶ

ಭಾರತ ಮತ್ತು ಪಾಕಿಸ್ತಾನದ ನಡುವೆ ವೈಷಮ್ಯ ಮುಂದುವರೆದಿರುವ ನಡುವೆಯೇ ಎರಡೂ ದೇಶಗಳ ಹೃದಯ ಬೆಸೆದಂಥ ಘಟನೆ ಚೆನ್ನೈನಲ್ಲಿ ನಡೆದಿದೆ.

ಚೆನ್ನೈ: ಭಾರತ ಮತ್ತು ಪಾಕಿಸ್ತಾನದ ನಡುವೆ ವೈಷಮ್ಯ ಮುಂದುವರೆದಿರುವ ನಡುವೆಯೇ ಎರಡೂ ದೇಶಗಳ ಹೃದಯ ಬೆಸೆದಂಥ ಘಟನೆ ಚೆನ್ನೈನಲ್ಲಿ ನಡೆದಿದೆ. ಕಳೆದ 5 ವರ್ಷಗಳಿಂದ ಹೃದಯ ಸಮಸ್ಯೆಗೆ ತುತ್ತಾಗಿ ಜೀವನ್ಮರಣದ ಹೋರಾಟ ನಡೆಸುತ್ತಿದ್ದ ಪಾಕಿಸ್ತಾನದ ಆಯೇಷಾ (19) ಎಂಬ ಯುವತಿಗೆ ಭಾರತದ 69 ವರ್ಷದ ವೃದ್ಧನ ಹೃದಯವನ್ನು ಯಶಸ್ವಿಯಾಗಿ ಅಳವಡಿಸಲಾಗಿದೆ.

35 ಲಕ್ಷ ರು. ವೆಚ್ಚದ ಈ ಹೃದಯ ಕಸಿ ಶಸ್ತ್ರಚಿಕಿತ್ಸೆ ವೆಚ್ಚ ಭರಿಸಲಾಗದ ಯುವತಿ ಕುಟುಂಬಕ್ಕೆ ಸ್ಥಳೀಯ ಸರ್ಕಾರೇತರ ಸಂಸ್ಥೆಯೊಂದು ಜನರಿಂದ ಹಣ ಸಂಗ್ರಹಿಸಿ ನೀಡುವ ಮೂಲಕ ಜೀವದಾನ ನೀಡಿದೆ.

ಆಯೇಷಾಗೆ 2019ರಲ್ಲಿ ಮೊದಲ ಬಾರಿ ಹೃದಾಯಾಘಾತವಾಗಿತ್ತು. ಆಗ ಭಾರತಕ್ಕೆ ಬಂದಿದ್ದ ಆಕೆಗೆ ಹೃದಯದ ಕಸಿ ಶಸ್ತ್ರಚಿಕಿತ್ಸೆಗೆ ಸಲಹೆ ನೀಡಲಾಗಿತ್ತು. ಆದರೆ ಹಾಲಿ ಭಾರತದ ನಿಯಮಗಳ ಅನ್ವಯ, ಲಭ್ಯವಿರುವ ಯಾವುದೇ ದಾನಿಯ ಹೃದಯ ಸ್ವೀಕರಿಸಲು ಯಾವುದೇ ಭಾರತೀಯರು ಮುಂದೆ ಬರದೇ ಇದ್ದಾಗ ಮಾತ್ರವೇ ಅದನ್ನು ಹೊರ ದೇಶದವರಿಗೆ ನೀಡಬಹುದು. ಹೀಗಾಗಿ ಆಯೇಷಾ ಹೆಸರನ್ನು ಕಾಯುವಿಕೆ ಪಟ್ಟಿಗೆ ಸೇರಿಸಲಾಗಿತ್ತು.

ಈ ಅವಧಿಗೆಂದು ಆಕೆಯ ಹೃದಯಕ್ಕೆ ವೈದ್ಯರು ತಾತ್ಕಾಲಿಕವಾಗಿ ಉಪೊಕರಣ ಅಳವಡಿಸಿದ್ದು. ಇತ್ತೀಚೆಗೆ ಅದು ಕೂಡಾ ವಿಫಲವಾಗಿತ್ತು. ಈ ನಡುವೆ ಆಕೆಯ ಮತ್ತೊಂದು ಭಾಗದ ಕವಾಟ ಕೂಡಾ ಸಮಸ್ಯೆಗೆ ತುತ್ತಾದ ಕಾರಣ ಆಕೆ ಜೀವಕ್ಕೆ ಆಪತ್ತು ಉಂಟಾಗಿತ್ತು.

ಇದರ ನಡುವೆ ಇತ್ತೀಚೆಗೆ ಮೃತ 69 ವರ್ಷದ ವ್ಯಕ್ತಿಯೊಬ್ಬರ ಹೃದಯವನ್ನು ಅವರ ವಯಸ್ಸಿನ ಕಾರಣ ನೀಡಿ ಯಾರೂ ಸ್ವೀಕರಿಸಲು ಮುಂದೆ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಆಯೇಷಾ ಅದಷ್ಟು ಖುಲಾಯಿಸಿ ಆಕೆಗೆ ವೃದ್ಧನ ಹೃದಯ ಅಳವಡಿಸಲು ವೈದ್ಯರು ನಿರ್ಧರಿಸಿದ್ದರು.

ವೃದ್ಧನ ಹೃದಯ ಉತ್ತಮವಾಗಿದ್ದ ಕಾರಣ, ಚೆನ್ನೈನ ಆಡ್ಯಾರ್‌ ಆಸ್ಪತ್ರೆಯ ವೈದ್ಯರು ಕೆಲ ತಿಂಗಳ ಹಿಂದೆ ಆಕೆಗೆ ಯಶಸ್ವಿ ಶಸ್ತ್ರಚಿಕಿತ್ಸೆ ನೀಡಿದ್ದಾರೆ. ಶಸ್ತ್ರಚಿಕಿತ್ಸೆ ಬಳಿಕ ಆಯೇಷಾ ಪೂರ್ಣವಾಗಿ ಚೇತರಿಸಿಕೊಂಡಿದ್ದು, ಪ್ಯಾಷನ್‌ ಡಿಸೈನರ್‌ ಆಗುವ ಕನಸಿನೊಂದಿಗೆ ಪಾಕಿಸ್ತಾನಕ್ಕೆ ಮರಳಿದ್ದಾಳೆ.

PREV

Recommended Stories

ಪಿಒಕೆನಲ್ಲಿ ಪಹಲ್ಗಾಂ ಉಗ್ರನ ಸಾಂಕೇತಿಕ ಅಂತ್ಯಕ್ರಿಯೆ!
ಶ್ವೇತಭವನ ವಕ್ತಾರೆಯ ತುಟಿ, ಸೌಂದರ್ಯ ಹೊಗಳಿದ ಟ್ರಂಪ್!