ಅಡ್ಡ ಪರಿಣಾಮ ಸುದ್ದಿ ಬಹಿರಂಗ ಬೆನ್ನಲ್ಲೇ ಆಸ್ಟ್ರಾಜೆನೆಕಾ ಲಸಿಕೆ ವಾಪಸ್‌

KannadaprabhaNewsNetwork | Updated : May 09 2024, 04:19 AM IST

ಸಾರಾಂಶ

‘ಆಸ್ಟ್ರಾಜೆನಿಕಾ ಲಸಿಕೆ’ಯಿಂದ ಅಡ್ಡಪರಿಣಾಮ ನಿಜ ಎಂದು ಕೋರ್ಟ್‌ಗೆ ಮಾಹಿತಿ ನೀಡಿದ ಬೆನ್ನಲ್ಲೇ, ಲಸಿಕೆ ಉತ್ಪಾದನೆ ಹಾಗೂ ಮಾರುಕಟ್ಟೆಗೆ ಬಿಡುಗಡೆ ಪ್ರಕ್ರಿಯೆ ಸ್ಥಗಿತಗೊಳಿಸುವುದಾಗಿ ಬ್ರಿಟನ್‌ ಮೂಲದ ಆಸ್ಟ್ರಾಜೆನಿಕಾ ಕಂಪನಿ ಘೋಷಿಸಿದೆ.

ನವದೆಹಲಿ: ಕೋವಿಡ್‌ ಸಾಂಕ್ರಾಮಿಕ ನಿಯಂತ್ರಣಕ್ಕೆ ತಾನು ಅಭಿವೃದ್ಧಿಪಡಿಸಿದ್ದ ‘ಆಸ್ಟ್ರಾಜೆನಿಕಾ ಲಸಿಕೆ’ಯಿಂದ ಅಡ್ಡಪರಿಣಾಮ ನಿಜ ಎಂದು ಕೋರ್ಟ್‌ಗೆ ಮಾಹಿತಿ ನೀಡಿದ ಬೆನ್ನಲ್ಲೇ, ಲಸಿಕೆ ಉತ್ಪಾದನೆ ಹಾಗೂ ಮಾರುಕಟ್ಟೆಗೆ ಬಿಡುಗಡೆ ಪ್ರಕ್ರಿಯೆ ಸ್ಥಗಿತಗೊಳಿಸುವುದಾಗಿ ಬ್ರಿಟನ್‌ ಮೂಲದ ಆಸ್ಟ್ರಾಜೆನಿಕಾ ಕಂಪನಿ ಘೋಷಿಸಿದೆ.

ಹಾಲಿ ಮಾರುಕಟ್ಟೆಯಲ್ಲಿ ಸಾಕಷ್ಟು ಲಸಿಕೆ ಸಂಗ್ರಹ ಇರುವ ಹಿನ್ನೆಲೆಯಲ್ಲಿ ಮತ್ತು ಹೊಸ ಕೋವಿಡ್‌ ತಳಿಗಳನ್ನು ನಿಗ್ರಹಿಸುವ ಸುಧಾರಿತ ಲಸಿಕೆಗಳು ಮಾರುಕಟ್ಟೆಯಲ್ಲಿ ಇರುವ ಕಾರಣ ಈ ನಿರ್ಧಾರಕ್ಕೆ ಬಂದಿರುವುದಾಗಿ ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಅದರ ಬೆನ್ನಲ್ಲೇ 27 ಯುರೋಪಿಯನ್‌ ದೇಶಗಳಿಗೆ ಸಂಬಂಧಿಸಿದ ವೈದ್ಯಕೀಯ ಏಜೆನ್ಸಿ ಕೂಡಾ ಈ ಲಸಿಕೆ ಬಳಸಲು ಇನ್ನು ಅನುಮತಿ ಇಲ್ಲ ಎಂದು ಪ್ರಕಟಣೆ ಹೊರಡಿಸಿದೆ.

ಜೊತೆಗೆ ವಿಶ್ವದ ಇತರೆ ದೇಶಗಳಲ್ಲಿನ ವೈದ್ಯಕೀಯ ನಿಯಂತ್ರಣಾ ಸಂಸ್ಥೆಗಳ ಜೊತೆಗೂಡಿ ಕೋವಿಡ್‌ ನಿಯಂತ್ರಣಕ್ಕೆ ನೆರವಾದ ಈ ಅಧ್ಯಾಯ ಮುಕ್ತಾಯಗೊಳಿಸಲು ಕಾರ್ಯಪ್ರವೃತ್ತರಾಗುತ್ತೇವೆ ಎಂದು ಆಸ್ಟ್ರಾಜೆನಿಕಾ ಹೇಳಿದೆ.ವೃದ್ಧಿಪಡಿಸಿತ್ತು. ಇದನ್ನೇ ಭಾರತದಲ್ಲಿ ಪುಣೆ ಮೂಲದ ಸೀರಂ ಇನ್‌ಸ್ಟಿಟ್ಯೂಟ್‌ ಕೋವಿಶೀಲ್ಡ್‌ ಹೆಸರಲ್ಲಿ ಭಾರತದಲ್ಲಿ ಬಿಡುಗಡೆ ಮಾಡಿತ್ತು.

 ಜೊತೆಗೆ ವಿಶ್ವದ ಇತರೆ ದೇಶಗಳಲ್ಲಿ ಬೇರೆ ಬೇರೆ ಹೆಸರಲ್ಲಿ ಬಿಡುಗಡೆಯಾಗಿತ್ತು.ಆಸ್ಟ್ರಾಜೆನಿಕಾ ಲಸಿಕೆ ಪಡೆದವರಲ್ಲಿ ಸಾಕಷ್ಟು ಅಡ್ಡಪರಿಣಾಮಗಳು ಕಂಡುಬಂದಿದೆ, ಸಾವು ಕೂಡಾ ಸಂಭವಿಸಿದೆ ಎಂದು ವಿಶ್ವದ ಹಲವು ದೇಶಗಳಲ್ಲಿ ಕೇಸು ದಾಖಲಾಗಿದೆ. ಇತ್ತೀಚೆಗೆ ಬ್ರಿಟನ್‌ನಲ್ಲಿ ಇಂಥದ್ದೇ ಪ್ರಕರಣವೊಂದರ ವಿಚಾರಣೆ ವೇಳೆ ತನ್ನ ಲಸಿಕೆ ಪಡೆದವರ ಪೈಕಿ ಅತ್ಯಂತ ವಿರಳ ಪ್ರಕರಣಗಳಲ್ಲಿ ರಕ್ತ ಹೆಪ್ಪುಗಟ್ಟುವ ಮತ್ತು ಪ್ಲೇಟ್‌ಲೇಟ್‌ ಇಳಿಕೆಯಾಗುವ ಅಡ್ಡಪರಿಣಾಮಗಳು ಕಂಡುಬರುವ ಸಾಧ್ಯತೆ ಇದೆ ಎಂದು ಕಂಪನಿ ಒಪ್ಪಿಕೊಂಡಿತ್ತು.

Share this article