ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಅಮೆರಿಕದಲ್ಲಿ ಗುಂಡಿನ ದಾಳಿಗೆ 16 ಮಂದಿ ಬಲಿ

KannadaprabhaNewsNetwork | Published : Oct 27, 2023 12:30 AM

ರೆಸ್ಟೋರೆಂಟ್‌ ಮೇಲೆ ಅಮೆರಿಕ ಸೇನೆಯ ಬಂದೂಕು ತರಬೇತುದಾರನಿಂದ ದಾಳಿ

ಲೆವಿಸ್ಟನ್‌: ಬಂದೂಕುಧಾರಿಯೊಬ್ಬ ರೆಸ್ಟೋರೆಂಟ್ ಮೇಲೆ ಗುಂಡಿನ ದಾಳಿ ನಡೆಸಿ 16 ಜನರನ್ನು ಹತ್ಯೆಗೈದ ಭೀಕರ ಘಟನೆ ಬುಧವಾರ ಅಮೆರಿಕದ ಲೆವಿಸ್ಟನ್‌ ಮೈನೇಯಲ್ಲಿ ನಡೆದಿದೆ. ಈ ವರ್ಷದ ನಡೆದ ಅತ್ಯಂತ ಭೀಕರ ಸಾಮೂಹಿಕ ದಾಳಿಯ ಹಿಂದೆ, ಅಮೆರಿಕದ ಮೀಸಲು ಸೇನೆಪಡೆಯ ಬಂದೂಕು ತರಬೇತಿದಾರನ ಕೈವಾಡದ ಶಂಕೆ ವ್ಯಕ್ತವಾಗಿದೆ. ದಾಳಿ ಬಳಿಕ ಆರೋಪಿ ಪರಾರಿಯಾಗಿದ್ದು ಆತನಿಗಾಗಿ ಹುಡುಕಾಟ ನಡೆದಿದೆ. ಬುಧವಾರ ಸಂಜೆ 7 ಗಂಟೆ ವೇಳೆಗೆ ರೆಸ್ಟೋರೆಂಟ್‌ಗೆ ನುಗ್ಗಿದ ರಾಬರ್ಟ್‌ ಕಾರ್ಡ್‌ (40) ಎಂಬಾತ ಏಕಾಏಕಿ ಗುಂಡಿನ ದಾಳಿ 16 ಜನರನ್ನು ಬಲಿ ಪಡೆದಿದ್ದಾನೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ. ದಾಳಿಯ ಬಳಿಕ ಕಾರ್ಡ್‌ ಸ್ಥಳದಿಂದ ಪರಾರಿಯಾಗಿದ್ದು, ಆತನಿಗಾಗಿ ಭಾರೀ ಹುಡುಕಾಟ ನಡೆಸಲಾಗುತ್ತಿದೆ. ರಾಬರ್ಟ್‌ ಮಾನಸಿಕ ರೋಗಿಯಾಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ==== ಯಾರು ಈ ಮಾರಕ ಕೊಲೆಗಾರ ಸಾಮೂಹಿಕ ಗುಂಡಿನ ದಾಳಿ ನಡೆಸಿ 22 ಜನರನ್ನು ಕೊಲೆ ಮಾಡಿದ ಸೈಕೋ ಕಿಲ್ಲರ್‌ ರಾಬರ್ಟ್‌, ಅಮೆರಿಕ ಸೇನೆಯ ಮೀಸಲು ಪಡೆಯ ಮಾಜಿ ಮಾಜಿ ಬಂದೂಕು ತರಬೇತುದಾರ. ಈತ ಮಾನಸಿಕ ಸ್ವಾಸ್ಥ್ಯ ಕಳೆದುಕೊಂಡಿದ್ದಾನೆ ಎನ್ನಲಾಗಿದೆ. ರಾಬರ್ಟ್ ವಿರುದ್ಧ ಈ ಹಿಂದೆಯೂ ಅನೇಕ ಗಂಭೀರ ಆರೋಪ ಕೇಳಿಬಂದಿತ್ತು.. ತನ್ನ ಇಬ್ಬರು ಪತ್ನಿಯರಿಂದ ವಿಚ್ಛೇದನ ಪಡೆದಿರುವ ರಾಬರ್ಟ್‌ಗೆ ಮೂವರು ಮಕ್ಕಳಿದ್ದಾರೆ.