ದಿಲ್ಲಿ ಮಾಲಿನ್ಯ ತಡೆಗೆ ಬೀಜಿಂಗ್‌ ಮಾಡೆಲ್‌ : ಚೀನಾದಿಂದ ಆಫರ್‌

KannadaprabhaNewsNetwork |  
Published : Nov 06, 2025, 03:15 AM ISTUpdated : Nov 06, 2025, 06:13 AM IST
China

ಸಾರಾಂಶ

ದೆಹಲಿಯಲ್ಲಿನ ವಾಯುಗುಣಮಟ್ಟ ತೀರಾ ಹದಗೆಟ್ಟು, ಅದನ್ನು ಸರಿಪಡಿಸಲು ಸರ್ಕಾರ ಹರಸಾಹಸ ಪಡೆಯುತ್ತಿರುವ ನಡುವೆಯೇ, ‘ಈ ವಿಷಯದಲ್ಲಿ ನಾವು ನಿಮಗೆ ಸಹಾಯ ಮಾಡುತ್ತೇವೆ’ ಎಂದು ಚೀನಾ ಸಹಾಯಹಸ್ತ ಚಾಚಿದೆ.

 ನವದೆಹಲಿ: ದೆಹಲಿಯಲ್ಲಿನ ವಾಯುಗುಣಮಟ್ಟ ತೀರಾ ಹದಗೆಟ್ಟು, ಅದನ್ನು ಸರಿಪಡಿಸಲು ಸರ್ಕಾರ ಹರಸಾಹಸ ಪಡೆಯುತ್ತಿರುವ ನಡುವೆಯೇ, ‘ಈ ವಿಷಯದಲ್ಲಿ ನಾವು ನಿಮಗೆ ಸಹಾಯ ಮಾಡುತ್ತೇವೆ’ ಎಂದು ಚೀನಾ ಸಹಾಯಹಸ್ತ ಚಾಚಿದೆ.

ಭಾರತ ಕೂಡ ಇದನ್ನು ಸಾಧಿಸುವ ವಿಶ್ವಾಸವಿದೆ

ಭಾರತದಲ್ಲಿರುವ ಚೀನಾ ರಾಯಭಾರಿ ಯು ಜಿಂಗ್‌ ತಮ್ಮ ಎಕ್ಸ್‌ನಲ್ಲಿ, ‘ಒಂದೊಮ್ಮೆ ಸ್ಮಾಗ್‌ (ಹೊಗೆ ಮತ್ತು ಮಂಜು) ಸಮಸ್ಯೆಯಿಂದ ಬಳಲಿದ್ದ ನಾವು ಈಗ ಅದನ್ನು ನಿವಾರಿಸಿಕೊಂಡಿದ್ದೇವೆ. ಭಾರತ ಕೂಡ ಇದನ್ನು ಸಾಧಿಸುವ ವಿಶ್ವಾಸವಿದೆ’ ಎಂದು ಬೀಜಿಂಗ್‌ ಮತ್ತು ಶಾಂಘೈ ನಗರಗಳ ಕಲುಷಿತ ಮತ್ತು ಸ್ವಚ್ಛ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಈ ಮೂಲಕ, ಭಾರತಕ್ಕೂ ಈ ವಿಷಯದಲ್ಲಿ ಸಹಾಯ ಮಾಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಚೀನಾ ಮಾಡಿದ್ದೇನು?:

ವಿಪರೀತವಾಗಿದ್ದ ವಾಯುಮಾಲಿನ್ಯವನ್ನು ತಡೆಗಟ್ಟಲು ಚೀನಾ ಕಾರ್ಖಾನೆಗಳ ಸ್ಥಳಾಂತರ, ಹಳೆ ವಾಹನಗಳ ಬಳಕೆಗೆ ಕಡಿವಾಣ, ಇದ್ದಿಲಿನ ಬದಲಿಗೆ ನೈಸರ್ಗಿಕ ಅನಿಲ ಬಳಕೆಯಂತಹ ಕ್ರಮಗಳನ್ನು ಕೈಗೊಂಡಿತ್ತು. ಇದರಿಂದಾಗಿ ಪರಿಸ್ಥಿತಿ ತಕ್ಕಮಟ್ಟಿಗೆ ಸುಧಾರಿಸಿತ್ತು.

ಬೀಜಿಂಗ್‌ನಲ್ಲಿ ವಾಯುಮಾಲಿನ್ಯ ಅಳೆಯುವ ಪಿಎಂ 2.5 ಮಟ್ಟ 900ಕ್ಕೆ ತಲುಪಿತ್ತು. ಇದು ಗುಣಮಟ್ಟದ ಗಾಳಿಗಿಂತ 30 ಪಟ್ಟು ಮಲೀನ

ಇದರ ತಡೆಗೆ ಕಲ್ಲಿದ್ದಲು ಆಧರಿತ ಕೈಗಾರಿಕೆ ಸ್ಥಗಿತ, ದೊಡ್ಡ ಕೈಗಾರಿಕೆಗಳ ಸ್ಥಳಾಂತರ, ಸಾರ್ವಜನಿಕ ಸಾರಿಗೆಗೆ ಒತ್ತು ನೀಡಿದ್ದ ಚೀನಾ

ಕಬ್ಬಿಣ, ಉಕ್ಕಿನ ಉತ್ಪಾದನೆದಲ್ಲಿ ಭಾರೀ ಕಡಿತ ಮಾಡಿ, 12 ಪ್ರಾಂತ್ಯಗಳಲ್ಲಿ 3500 ಕೋಟಿ ಮರಗಳನ್ನು ನೆಡುವ ಯೋಜನೆ ರೂಪಿಸಿತ್ತು

ವಾಯುಮಾಲಿನ್ಯಕ್ಕೆ ಕಾರಣವಾಗುವ ವಾಹನಗಳ ಬಳಕೆ ಸಂಪೂರ್ಣವಾಗಿ ನಿಷೇಧ, ಮೆಟ್ರೋ ರೈಲು ಸೇವೆಗಳಲ್ಲಿ ಹೆಚ್ಚಳ ಮಾಡಿತ್ತು

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.
Read more Articles on

Recommended Stories

ಇರಾನ್‌ ಮೇಲೆ ದಾಳಿಗೆ ಅಮೆರಿಕ ಸೇನೆ ಸಿದ್ಧತೆ?
ಭಾರತದ ಮೇಲೆ ದಾಳಿಗಾಗಿ 1000 ಉಗ್ರರು ರೆಡಿ: ಅಜರ್‌