ಲಂಡನ್: ಬ್ರಿಟನ್‌ನ ಯುವರಾಣಿ ಕೇಟ್ ಮಿಡ್ಲಟನ್ ಕೆಲ ಸಮಯದಿಂದ ಎಲ್ಲೂ ಬಹಿರಂಗವಾಗಿ ಕಾಣಿಸಿಕೊಳ್ಳದೇ ಇರುವ ಕುರಿತು ನಾನಾ ವದಂತಿಗಳು ಹಬ್ಬಿರುವ ನಡುವೆಯೇ, ಕೇಟ್‌ರ ಪತ್ನಿ, ಬ್ರಿಟನ್‌ನ ಯುವರಾಜ ವಿಲಿಯಮ್ಸ್, ಮಾಜಿ ಮಾಡೆಲ್ ರೋಸ್ ಹ್ಯಾನ್ಬರಿ ಜೊತೆ ಲವ್ವಿಡವ್ವಿ ನಡೆಸಿದ್ದಾರೆ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ.
ಅಮೆರಿಕದ ಖ್ಯಾತ ಲೇಖಕ, ಟೀವಿ ಆ್ಯಂಕರ್ ಸ್ಟೆಫನ್ ಕಾಲಬರ್ಟ್ ಈ ಕುರಿತು ನೀಡಿರುವ ಸ್ಫೋಟಕ ಹೇಳಿಕೆ ಬ್ರಿಟನ್‌ನಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದೆ. ರೋಸ್, ವಿಲಿಯಮ್ಸ್ ಮತ್ತು ಕೇಟ್ ಇಬ್ಬರಿಗೂ ಸ್ನೇಹಿತೆ.
ಒಂದು ಸಮಯದಲ್ಲಿ ನೆರೆಮನೆಯಾಗಿದ್ದಾಕೆ. ವಿಲಯಮ್ಸ್ ಮತ್ತು ರೋಸ್ ನಡುವೆ ಸಂಬಂಧ ಕುರಿತು 2019ರಲ್ಲೇ ಸುದ್ದಿ ಹಬ್ಬಿತ್ತಾದರೂ ಬಳಿಕ ತಣ್ಣಗಾಗಿತ್ತು.
ಇದೀಗ ಜೋಡಿ ಮತ್ತೆ ಕದ್ದುಮಚ್ಚಿ ಪ್ರೇಮ ಮುಂದುವರೆಸಿದೆ. ಇದು ವಿಲಿಯಮ್ಸ್ ಮತ್ತು ಕೇಟ್ ದಾಂಪತ್ಯದಲ್ಲಿ ಬಿರುಕಿಗೆ ಕಾರಣವಾಗಿದೆ ಎಂದು ಸ್ಟೆಫನ್ ತಮ್ಮ ಟೀವಿ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ಆದರೆ ಇದೆಲ್ಲಾ ಸುಳ್ಳು ಆರೋಪಗಳು ಹಾಗೂ ಗಾಳಿ ಸುದ್ದಿ ಎಂದು ರೋಸ್ ಸ್ಪಷ್ಟನೆ ನೀಡಿದ್ದಾರೆ.