ಭಾರತ ವಿರೋಧಿ ನಿಲುವುಗಳಿಂದ ಕುಖ್ಯಾತಿ ಹೊಂದಿರುವ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ ರಾಜೀನಾಮೆ

KannadaprabhaNewsNetwork | Updated : Jan 07 2025, 04:03 AM IST

ಸಾರಾಂಶ

ಭಾರತ ವಿರೋಧಿ ನಿಲುವುಗಳಿಂದ ಹಾಗೂ ಖಲಿಸ್ತಾನಿ ಉಗ್ರರ ಪರ ನಿಲುವುಗಳಿಂದ ಕುಖ್ಯಾತಿ ಹೊಂದಿರುವ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ ಸೋಮವಾರ ಹಠಾತ್‌ ರಾಜೀನಾಮೆ ಘೋಷಿಸಿದ್ದಾರೆ.

ಒಟ್ಟಾವ: ಭಾರತ ವಿರೋಧಿ ನಿಲುವುಗಳಿಂದ ಹಾಗೂ ಖಲಿಸ್ತಾನಿ ಉಗ್ರರ ಪರ ನಿಲುವುಗಳಿಂದ ಕುಖ್ಯಾತಿ ಹೊಂದಿರುವ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ ಸೋಮವಾರ ಹಠಾತ್‌ ರಾಜೀನಾಮೆ ಘೋಷಿಸಿದ್ದಾರೆ. ಲಿಬರಲ್‌ ಪಕ್ಷದ ಅಧ್ಯಕ್ಷ ಹುದ್ದೆ ಹಾಗೂ ಪ್ರಧಾನಿ ಹುದ್ದೆಗೆ ತಾವು ರಾಜೀನಾಮೆ ನೀಡುತ್ತಿರುವುದಾಗಿ ಪ್ರಕಟಿಸಿರುವ ಅವರು, ಉತ್ತರಾಧಿಕಾರಿ ಆಯ್ಕೆ ಆದ ಬಳಿಕ ಅಧಿಕೃತವಾಗಿ ತ್ಯಾಗಪತ್ರ ಸಲ್ಲಿಸುವುದಾಗಿ ತಿಳಿಸಿದ್ದಾರೆ.

ಸೋಮವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಕ್ಷದೊಳಗೆ ಆಂತರಿಕ ಕದನಗಳು ಇದ್ದವು. ಅಲ್ಲದೆ ಮುಂದಿನ ಚುನಾವಣೆಯಲ್ಲಿ ತಾವು ಮತ್ತೆ ಪ್ರಧಾನಿ ಹುದ್ದೆಗೆ ಸ್ಪರ್ಧಿಸುವ ಅವಕಾಶವಿಲ್ಲ ಎಂದು ಅರಿವಾಯಿತು.

ಇದು ಪಕ್ಷದ ಮುಖ್ಯಸ್ಥ ಮತ್ತು ಕೆನಡಾದ ಪ್ರಧಾನಿ ಸ್ಥಾನದಿಂದ ಕೆಳಗಿಳಿಯುವ ನಿರ್ಧಾರವನ್ನು ತೆಗೆದುಕೊಳ್ಳಲು ಕಾರಣ ವಾಯಿತು’ ಎಂದರು. ‘ಆ​ದರೂ ನಾನೊಬ್ಬ ಹೋರಾಟ​ಗಾರ. ಕೆನಡಾ ಪರ ಹೋರಾ​ಡಿ​ದ್ದೇ​ನೆ’ ಎಂದು ತಮ್ಮನ್ನು ತಾವು ಹೊಗ​ಳಿ​ಕೊಂಡ​ರು.ಇದಲ್ಲದೆ, ತಮ—್ಮ ಉತ್ತರಾಧಿಕಾರಿಯ ಆಯ್ಕೆಗೆ ಬೇಗ ಅನ್ವೇಷಣೆ ನಡೆಸುವಂತೆ ಅವರು ಲಿಬರಲ್‌ ಪಕ್ಷಕ್ಕೆ ಮನವಿ ಮಾಡಿದರು,

ಇದಲ್ಲದೆ, ಮಾ.24ರವರೆಗೆ ಸಂಸತ್‌ ಅಧಿವೇಶನ ಕರೆಯದಂತೆ ಗವರ್ನರ್‌ ಜನರಲ್‌ ಅವರಿಗೆ ಟ್ರುಡೋ ಕೋರಿದ್ದಾರೆ. ಇದರಿಂದಾಗಿ ಜ.27ರಿಂದ ಆರಂಭವಾಗುವ ಅಧಿವೇಶನ ನಡೆಯುವುದಿಲ್ಲ. ಇದು ಹೊಸ ಪ್ರಧಾನಿ ಆಯ್ಕೆ ಆಗಲು ಸಹಾಯ ಮಾಡಲಿದೆ ಎಂದು ಮೂಲಗಳು ಹೇಳಿವೆ.

ಕರ್ನಿ ಪ್ರಧಾ​ನಿ?: ಟ್ರುಡೋ ಉತ್ತರಾಧಿಕಾರಿ ಆಗಿ ಮಾಜಿ ಬ್ಯಾಂಕ​ರ್‌, ಲಿಬ​ರಲ್‌ ನಾಯಕ ಮಾರ್ಕ್ ಕರ್ನಿ ಆಯ್ಕೆ ಅಗುವ ಸಾಧ್ಯತೆ ಇದೆ.

ಅಕ್ಟೋಬರ್‌ನಲ್ಲಿ ಚುನಾವಣೆ: ಇದೇ ವರ್ಷದ ಅಕ್ಟೋಬರ್‌ನಲ್ಲಿ ಕೆನಡಾ ಸಂಸತ್‌ ಚುನಾವಣೆ ನಡೆಯಬೇಕಿದೆ. ಇತ್ತೀಚಿನ ಚುನಾ ವಣಾ ಸಮೀಕ್ಷೆಗಳ ಅನ್ವಯ ಪೊಯ್ಲಿವರ್ಸ್‌ ನಾಯಕತ್ವದ ಕನ್ಸರ್ವೇಟಿವ್‌ ಪಕ್ಷ ಅಧಿಕಾರ ಹಿಡಿವ ಸಾಧ್ಯತೆ ಇದೆ. ಹೀಗಾಗಿ ಅಷ್ಟರೊಳಗೆ ಟ್ರುಡೋ ಬದಲು ಬೇರೆ ಜನಪ್ರಿಯ ನಾಯಕನ ಆಯ್ಕೆ ಮಾಡುವ ಇರಾದೆ ಲಿಬರಲ್‌ ಪಕ್ಷದ್ದು.

ಭಾರತ ವಿರೋಧಿ: ಟ್ರುಡೋ ಕೆನಡಾದಲ್ಲಿ ನಡೆದ ಖಲಿಸ್ತಾನಿ ಉಗ್ರ ನಿಜ್ಜರ್‌ ಹತ್ಯೆಗೆ ಭಾರತ ವೇ ಕಾರಣ ಎಂದು ಆರೋಪಿಸಿದ್ದರು. ಖಲಿಸ್ತಾನಿ ಉಗ್ರರ ಪರ ಹೇಳಿಕೆ ನೀಡತೊ ಡಗಿದರು ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹಲವು ಹೇಳಿಕೆ ನೀಡಿದರು. ಕೆನ​ಡಾ​ದ​ಲ್ಲಿನ ಹಿಂದೂ​ಗ​ಳಿ​ಗೆ ಲಗಾಮು ಹಾಕುವ ಯತ್ನ ಮಾಡಿ​ದರು. ಇದು ಕೆನಡಾ ಜನ, ಸ್ವಪ​ಕ್ಷೀಯರ ವಿರೋ​ಧಕ್ಕೆ ಕಾರಣ ಆಯಿತು. ಹೀಗಾಗಿ ಇತ್ತೀ​ಚಿ​ನ ಸಮೀ​ಕ್ಷೆ​ಯಲ್ಲಿ 9 ವರ್ಷ​ದಿಂದ ಅಧಿ​ಕಾ​ರ​ದಲ್ಲಿದ್ದ ಟ್ರುಡೋ ಜನಪ್ರಿಯತೆ ಕುಸಿ​ದಿ​ತ್ತು.

Share this article