ಇರಾನ್‌ ವಿರುದ್ಧ ಅಮೆರಿಕದಿಂದ ‘ಡಾರ್ಕ್‌ ಈಗಲ್‌’ ಪರಮಾಸ್ತ್ರ?

Published : May 01, 2026, 08:10 AM IST
Donald Trump

ಸಾರಾಂಶ

ಹಾರ್ಟ್‌ಅಟ್ಯಾಕ್‌ ಅಸ್ತ್ರ ಬಳಸುವುದಾಗಿ ಇರಾನ್‌ ಧಮಕಿ ಹಾಕಿದ ಹೊತ್ತಿನಲ್ಲೇ, ಇದುವರೆಗೂ ಬಳಸದ ‘ಡಾರ್ಕ್ ಈಗಲ್‌’ ಎಂಬ ದೂರಸಾಮರ್ಥ್ಯದ ಕ್ಷಿಪಣಿಯನ್ನು ಇರಾನ್‌ ಮೇಲೆ ಬಳಸಲು ಅಮೆರಿಕ ಸೇನಾ ಪಡೆ ಮುಂದಾಗಿದೆ.

 ವಾಷಿಂಗ್ಟನ್‌: ಹಾರ್ಟ್‌ಅಟ್ಯಾಕ್‌ ಅಸ್ತ್ರ ಬಳಸುವುದಾಗಿ ಇರಾನ್‌ ಧಮಕಿ ಹಾಕಿದ ಹೊತ್ತಿನಲ್ಲೇ, ಇದುವರೆಗೂ ಬಳಸದ ‘ಡಾರ್ಕ್ ಈಗಲ್‌’ ಎಂಬ ದೂರಸಾಮರ್ಥ್ಯದ ಕ್ಷಿಪಣಿಯನ್ನು ಇರಾನ್‌ ಮೇಲೆ ಬಳಸಲು ಅಮೆರಿಕ ಸೇನಾ ಪಡೆ ಮುಂದಾಗಿದೆ.

ಕೂಡಲೇ ಈ ಕ್ಷಿಪಣಿ ವ್ಯವಸ್ಥೆಯನ್ನು ಮಧ್ಯಪ್ರಾಚ್ಯಕ್ಕೆ ರವಾನಿಸುವಂತೆ ಸೆಂಟ್‌ಕಾಮ್‌ (ಸೆಂಟ್ರಲ್‌ ಕಮಾಂಡ್‌) ಅಮೆರಿಕದ ರಕ್ಷಣಾ ಇಲಾಖೆಗೆ ಕೋರಿಕೆ ಸಲ್ಲಿಸಿದೆ.

ಹೊಸ ಅಸ್ತ್ರ ಏಕೆ?:

ಬ್ಯಾಲಿಸ್ಟಿಕ್‌ ಕ್ಷಿಪಣಿಗಳನ್ನು ಹಾರಿಸುವ ತನ್ನ ಲಾಂಚರ್‌ಗಳನ್ನು ಇದೀಗ ಇರಾನ್‌ ದೂರದೂರದ ಪ್ರದೇಶಗಳಿಗೆ ಸ್ಥಳಾಂತರಿಸಿದೆ. ಹೀಗಾಗಿ ಸದ್ಯ ಮಧ್ಯಪ್ರಾಚ್ಯದ ಅಮೆರಿಕದ ಸೇನಾನೆಲೆಗಳಲ್ಲಿ ಇರುವ ಯಾವುದೇ ಕ್ಷಿಪಣಿಗಳು ಇರಾನ್‌ನ ಕ್ಷಿಪಣಿ ಲಾಂಚರ್‌ ಧ್ವಂಸಪಡಿಸುವ ಸ್ಥಿತಿಯಲ್ಲಿ ಇಲ್ಲ. ಹೀಗಾಗಿ ಅಂಥ ಸಾಮರ್ಥ್ಯ ಹೊಂದಿರುವ ಕ್ಷಿಪಣಿ ಮತ್ತು ಅದಕ್ಕೆ ಬೇಕಾದ ‘ಡಾರ್ಕ್‌ ಈಗಲ್‌’ ವ್ಯವಸ್ಥೆ ರವಾನಿಸುವಂತೆ ರಕ್ಷಣಾ ಇಲಾಖೆಗೆ ಕೋರಿಕೆ ಸಲ್ಲಿಸಲಾಗಿದೆ. ಒಂದು ವೇಳೆ ಕ್ಷಿಪಣಿ ಬಳಕೆಯಾದರೆ ಅದು ಅಮೆರಿಕ ಸೇನೆ ಅತ್ಯಾಧುನಿಕವಾದ ಈ ಕ್ಷಿಪಣಿ ಬಳಸಿದ ಮೊದಲ ಉದಾಹರಣೆಯಾಗಲಿದೆ. ಜೊತೆಗೆ ಒಂದು ವೇಳೆ ಯುದ್ಧ ಪುನಾರಂಭವಾದರೆ ಇರಾನ್‌ ವಿರುದ್ಧ ಅಮೆರಿಕ ಸೇನೆಯ ಬಲವನ್ನು ಗಮನಾರ್ಹವಾಗಿ ಹೆಚ್ಚಿಸಲಿದೆ.

- ‘ಡಾರ್ಕ್‌ ಈಗಲ್‌’ ಎಂಬುದು ಅಮೆರಿಕದ ಪ್ರಸಿದ್ಧ ಲಾಕ್‌ಹೀಡ್‌ ಮಾರ್ಟಿನ್‌ ಸಂಸ್ಥೆ ತಯಾರಿಸಿರುವ ಕ್ಷಿಪಣಿ

- ಗಂಟೆಗೆ 6000 ಕಿ.ಮೀ. ವೇಗದಲ್ಲಿ 2700 ಕಿ.ಮೀ ದೂರ ಸಾಗಿ ಶತ್ರುಪಡೆಯ ಗುರಿಯನ್ನು ಧ್ವಂಸಮಾಡಬಲ್ಲದು

- ಶತ್ರುದೇಶಗಳು ಬ್ಯಾಲಿಸ್ಟಿಕ್‌ ಕ್ಷಿಪಣಿ ದಾಳಿ ತಡೆಯಲು ಹೊಂದಿರುವ ವ್ಯವಸ್ಥೆಯನ್ನೇ ಭೇದಿಸಿ ಮುನ್ನುಗ್ಗಬಲ್ಲದು

- ಪ್ರತಿಕ್ಷಿಪಣಿಗೆ ಅಂದಾಜು 150 ಕೋಟಿ ರು. ವೆಚ್ಚವಾಗುತ್ತದೆ. ಪ್ರಸಕ್ತ ಅಮೆರಿಕದ ಬಳಿ ಇಂಥ 8 ಕ್ಷಿಪಣಿಗಳು ಇವೆ

- ಆದರೆ ಒಮ್ಮೆಯೂ ಈ ಕ್ಷಿಪಣಿಗಳನ್ನು ಅಮೆರಿಕ ಬಳಸಿಲ್ಲ. ಇರಾನ್‌ ಮೇಲೆ ಪ್ರಯೋಗಕ್ಕೆ ಈಗ ತಯಾರಿ: ವರದಿ

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.
Read more Articles on

Recommended Stories

ಅಮೆರಿಕ, ಇಸ್ರೇಲ್‌ಗೆ ಇರಾನ್‌ ಹಾರ್ಟ್‌ ಅಟ್ಯಾಕ್‌ ಅಸ್ತ್ರ ಧಮಕಿ
ಇರಾನ್‌ ಮೇಲೆ ಭರ್ಜರಿ ಚುಟುಕು ದಾಳಿಗೆ ಅಮೆರಿಕ ಸಿದ್ಧತೆ?