ಚೀನಾ ಮೇಲೆ ಶೇ.125 ಟ್ಯಾಕ್ಸ್‌, 75 ದೇಶಗಳಿಗೆ 90 ದಿನ ಬ್ರೇಕ್‌

KannadaprabhaNewsNetwork |  
Published : Apr 10, 2025, 02:01 AM IST
ಡೊನಾಲ್ಡ್‌ ಟ್ರಂಪ್‌ | Kannada Prabha

ಸಾರಾಂಶ

ಅಮೆರಿಕಕ್ಕೆ ಆಮದಾಗುವ ವಿದೇಶಿ ಉತ್ಪನ್ನಗಳ ಮೇಲೆ ಯದ್ವಾತದ್ವಾ ತೆರಿಗೆ ಹಾಕಿ ಇಡೀ ವಿಶ್ವಕ್ಕೇ ಶಾಕ್‌ ನೀಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಬುಧವಾರ ತಡರಾತ್ರಿ, ಸುಮಾರು 75 ದೇಶಗಳ ಮೇಲೆ ಹೇರಿದ್ದ ತೆರಿಗೆಗೆ 90 ದಿನಗಳ ಮಟ್ಟಿಗೆ ತಡೆ ನೀಡಿರುವುದಾಗಿ ಘೋಷಿಸಿದ್ದಾರೆ. ಆದರೆ ಚೀನಾ ಮೇಲಿನ ತೆರಿಗೆಯನ್ನು ಶೇ.104ರಿಂದ 125ಕ್ಕೆ ಹೆಚ್ಚಿಸುವುದಾಗಿ ಪ್ರಕಟಿಸಿದ್ದಾರೆ. ಇದು ತೆರಿಗೆ ಹೇರಿಕೆಗೆ ಒಳಪಟ್ಟ ದೇಶಗಳ ಮೇಲೆ ಒತ್ತಡ ಹೇರಲು ಟ್ರಂಪ್‌ ರೂಪಿಸಿದ ರಣತಂತ್ರ ಇರಬಹುದು ಎಂದು ವಿಶ್ಲೇಷಿಸಲಾಗಿದೆ.

ವಿದೇಶಗಳ ಮೇಲೆ ಒತ್ತಡ । ಅಮೆರಿಕ ಅಧ್ಯಕ್ಷ ಟ್ರಂಪ್‌ ರಣತಂತ್ರ

ತೆರಿಗೆ ಹೊಡೆತದಿಂದ ಪಾರಾದ ದೇಶಗಳಲ್ಲಿ ಭಾರತಕ್ಕೂ ಸ್ಥಾನ?

---

ವಾಷಿಂಗ್ಟನ್‌: ಅಮೆರಿಕಕ್ಕೆ ಆಮದಾಗುವ ವಿದೇಶಿ ಉತ್ಪನ್ನಗಳ ಮೇಲೆ ಯದ್ವಾತದ್ವಾ ತೆರಿಗೆ ಹಾಕಿ ಇಡೀ ವಿಶ್ವಕ್ಕೇ ಶಾಕ್‌ ನೀಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಬುಧವಾರ ತಡರಾತ್ರಿ, ಸುಮಾರು 75 ದೇಶಗಳ ಮೇಲೆ ಹೇರಿದ್ದ ತೆರಿಗೆಗೆ 90 ದಿನಗಳ ಮಟ್ಟಿಗೆ ತಡೆ ನೀಡಿರುವುದಾಗಿ ಘೋಷಿಸಿದ್ದಾರೆ. ಆದರೆ ಚೀನಾ ಮೇಲಿನ ತೆರಿಗೆಯನ್ನು ಶೇ.104ರಿಂದ 125ಕ್ಕೆ ಹೆಚ್ಚಿಸುವುದಾಗಿ ಪ್ರಕಟಿಸಿದ್ದಾರೆ. ಇದು ತೆರಿಗೆ ಹೇರಿಕೆಗೆ ಒಳಪಟ್ಟ ದೇಶಗಳ ಮೇಲೆ ಒತ್ತಡ ಹೇರಲು ಟ್ರಂಪ್‌ ರೂಪಿಸಿದ ರಣತಂತ್ರ ಇರಬಹುದು ಎಂದು ವಿಶ್ಲೇಷಿಸಲಾಗಿದೆ.

ಸದ್ಯಕ್ಕೆ ತೆರಿಗೆ ಹೊಡೆತದಿಂದ ಪಾರಾದ ದೇಶಗಳ ಹೆಸರನ್ನು ಟ್ರಂಪ್‌ ಹೇರಿಲ್ಲ. ಆದರೆ ಆ ದೇಶಗಳಲ್ಲಿ ಅಮೆರಿಕ ಜತೆ ವ್ಯಾಪಾರ ಒಪ್ಪಂದ ಮಾತುಕತೆಯಲ್ಲಿ ತೊಡಗಿದ್ದ ಭಾರತ ಕೂಡ ಇದೆ ಎಂದು ಭಾವಿಸಲಾಗಿದೆ. ಭಾರತದ ಮೇಲೆ ಟ್ರಂಪ್‌ ಶೇ.26 ತೆರಿಗೆ ಹೇರಿದ್ದರು.

‘ಅಮೆರಿಕ ತೆರಿಗೆ ಹೇರಿದ ಬಳಿಕ ಸುಮಾರು 75 ದೇಶಗಳು, ತಮ್ಮ ತಪ್ಪುಗಳನ್ನು ಸರಿಪಡಿಸಿಕೊಂಡು ಅಮೆರಿಕದ ಜತೆ ಸಂಧಾನಕ್ಕೆ ಆಗಮಿಸಿವೆ. ಹೀಗಾಗಿ ನಾನು ಅವುಗಳ ಮೇಲೆ 90 ದಿನ ತೆರಿಗೆ ಹೇರಿಕೆ ಮುಂದೂಡಲು ನಿರ್ಧರಿಸಿದ್ದೇನೆ. ಅವುಗಳ ಮೇಲೆ ಶೇ.10 ಮೂಲ ಆಮದು ತೆರಿಗೆ ಮಾತ್ರ ಮುಂದುವರಿಯಲಿದೆ. ಆದರೆ ಚೀನಾ ಮಾತ್ರ ಸುಮ್ಮನಿರದೇ ನಮ್ಮ ಮೇಲೆ ಪ್ರತಿತೆರಿಗೆ ಹೇರಿದೆ. ಹೀಗಾಗಿ ಚೀನಾ ಮೇಲಿನ ತೆರಿಗೆಯನ್ನು ಕೂಡಲೇ ಜಾರಿಗೆ ಬರುವಂತೆ ಶೇ.125ಕ್ಕೆ ಹೆಚ್ಚಿಸಿದ್ದೇನೆ’ ಎಂದು ತಮ್ಮ ಟ್ರುತ್‌ ಸೋಷಿಯಲ್‌ ಮೀಡಿಯಾದಲ್ಲಿ ಹೇಳಿದ್ದಾರೆ.

ಮೊನ್ನೆಯೇ ಅನುಮಾನವಿತ್ತು:

ಈ ರೀತಿ ಅವರು ತೆರಿ​ಗೆಗೆ 90 ದಿನ ಬ್ರೇಕ್‌ ಹಾಕ​ಲಿ​ದ್ದಾರೆ ಎಂದು ಮೊನ್ನೆ ವರ​ದಿ​ಯಾ​ಗಿತ್ತು. ಆದರೆ ಶ್ವೇತಭವನ ಅದನ್ನು ನಿರಾ​ಕ​ರಿ​ಸಿತ್ತು. ಟ್ರಂಪ್‌ ಕೂಡ ತಾವು ತೆರಿ​ಗೆ​ಯಿಂದ ಹಿಂದೆ ಸರಿ​ಯಲ್ಲ ಎಂದಿ​ದ್ದ​ರು. ಬಳಿಕ ಬುಧ​ವಾ​ರ​ದಿಂದಲೇ ಅನ್ವ​ಯ ಆಗು​ವಂತೆ ಪರಿ​ಷ್ಕೃತ ತೆರಿ​ಗೆ​ಗಳು ವಿಶ್ವಾ​ದ್ಯಂತ ಜಾರಿಗೆ ಬಂದಿ​ದ್ದವು. ಇದ​ರಿಂದ ವಿಶ್ವದ ಷೇರು ಮಾರು​ಕ​ಟ್ಟೆ​ಗ​ಳು ಭಾರಿ ಪ್ರಮಾ​ಣ​ದಲ್ಲಿ ಕುಸಿ​ದಿ​ದ್ದ​ವು. ಅಲ್ಲದೆ, ಚೀನಾ ಸಡ್ಡು ಹೊಡೆದು ಶೇ.84 ಪ್ರತಿ​ತೆ​ರಿಗೆ ಘೋಷಿ​ಸಿ​ದ್ದ​ರಿಂದ ವಿಶ್ವ​ದಲ್ಲಿ ವ್ಯಾಪಾರ ಕದನ ಆರಂಭ​ವಾ​ಗಿ​ತ್ತು.

--

PREV

Recommended Stories

ರಷ್ಯಾದಿಂದ ಭಾರತ ತೈಲ ಖರೀದಿ ಸ್ಥಗಿತ: ಟ್ರಂಪ್‌ ಸ್ವಯಂ ಘೋಷಣೆ
ಟ್ರಂಪ್‌ಗೆ ನೊಬೆಲ್‌ ಶಾಂತಿ ಪ್ರಶಸ್ತಿ ಕೊಡಿ : ಶ್ವೇತ ಭವನ ಕಾರ್ಯದರ್ಶಿ