ಯುರೋಪ್‌ ನಾಯಕರ ಶಾಲೆ ಮಕ್ಕಳಂತೆ ಕೂರಿಸಿದ ಟ್ರಂಪ್‌ !

Published : Aug 21, 2025, 05:51 AM IST
Trump Zelenksyy meeting

ಸಾರಾಂಶ

ರಷ್ಯಾ-ಉಕ್ರೇನ್‌ ಕದನ ವಿರಾಮ ಮಾತುಕತೆಗಾಗಿ ತಮ್ಮ ಗೃಹ ಕಚೇರಿ ಶ್ವೇತಭವನಕ್ಕೆ ಆಗಮಿಸಿದ್ದ ಉಕ್ರೇನ್‌ ಅಧ್ಯಕ್ಷ ಜೆಲೆನ್ಸ್ಕಿಮತ್ತು ಹಲವು ಯುರೋಪ್‌ ದೇಶಗಳ ಅಧ್ಯಕ್ಷರು ಮತ್ತು ಪ್ರಧಾನಿಗಳನ್ನು ತಮ್ಮ ಎದುರು ಅಮೆರಿಕ ಅಧ್ಯಕ್ಷ ಟ್ರಂಪ್‌ ಕೂರಿಸಿದ ರೀತಿ ಜಾಗತಿಕ ಮಟ್ಟದಲ್ಲಿ ಭಾರೀ ಟ್ರೋಲ್‌

ನವದೆಹಲಿ: ರಷ್ಯಾ-ಉಕ್ರೇನ್‌ ಕದನ ವಿರಾಮ ಮಾತುಕತೆಗಾಗಿ ತಮ್ಮ ಗೃಹ ಕಚೇರಿ ಶ್ವೇತಭವನಕ್ಕೆ ಆಗಮಿಸಿದ್ದ ಉಕ್ರೇನ್‌ ಅಧ್ಯಕ್ಷ ಜೆಲೆನ್ಸ್ಕಿಮತ್ತು ಹಲವು ಯುರೋಪ್‌ ದೇಶಗಳ ಅಧ್ಯಕ್ಷರು ಮತ್ತು ಪ್ರಧಾನಿಗಳನ್ನು ತಮ್ಮ ಎದುರು ಅಮೆರಿಕ ಅಧ್ಯಕ್ಷ ಟ್ರಂಪ್‌ ಕೂರಿಸಿದ ರೀತಿ ಜಾಗತಿಕ ಮಟ್ಟದಲ್ಲಿ ಭಾರೀ ಟ್ರೋಲ್‌ಗೆ ತುತ್ತಾಗಿದೆ.

ಸಭೆಯಲ್ಲಿ ಜೆಲೆನ್ಸ್‌ಕಿ ಅವರೊಂದಿಗೆ ಬ್ರಿಟನ್‌ ಪ್ರಧಾನಿ ಕೀರ್ ಸ್ಟಾರ್ಮರ್, ಫ್ರಾನ್ಸ್‌ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ಜರ್ಮನ್ ಚಾನ್ಸೆಲರ್ ಫ್ರೆಡ್ರಿಕ್ ಮೆರ್ಜ್, ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ, ಫಿನ್ಲೆಂಡ್ ಅಧ್ಯಕ್ಷ ಅಲೆಕ್ಸಾಂಡರ್ ಸ್ಟಬ್, ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್, ನ್ಯಾಟೋ ಪ್ರಧಾನ ಕಾರ್ಯದರ್ಶಿ ಮಾರ್ಕ್ ರುಟ್ಟೆ ಕೂಡ ಇದ್ದರು.

ಮಾತುಕತೆ ವೇಳೆ ಟ್ರಂಪ್‌ ಮಾತ್ರ ಒಂದೆಡೆ ಕುರ್ಚಿಯಲ್ಲಿ ಕುಳಿತುಕೊಂಡಿದ್ದರೆ, ಉಳಿದೆಲ್ಲಾ ಜಾಗತಿಕ ನಾಯಕರನ್ನು ತಮ್ಮ ಎದುರು ಸಾಲಾಗಿ ಕೂರಿಸಿದ್ದ ರೀತಿ ಟೀಕೆಗೆ ತುತ್ತಾಗಿದೆ. ‘ಟ್ರಂಪ್‌ರ ಈ ಸರ್ವಾಧಿಕಾರಿ ವರ್ತನೆ ಜಾಗತಿಕ ನಾಯಕರಿಗೆ ಮುಜುಗರ ಉಂಟುಮಾಡಿದೆ. ಅವರನ್ನೆಲ್ಲಾ ಅಶಿಸ್ತು ತೋರಿದ ಶಾಲೆ ಮಕ್ಕಳಂತೆ ನಡೆಸಿಕೊಳ್ಳಲಾಯಿತು. ಸಮಾನ ಗೌರವಯುತ ಸ್ಥಾನದಲ್ಲಿರುವವರನ್ನು ಆ ಮೂಲಕ ತುಚ್ಛೀಕರಿಸಲಾಯಿತು’ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.
Read more Articles on

Recommended Stories

ಮೋದಿ-ಪುಟಿನ್‌ ಸೆಲ್ಫಿ ತೋರಿಸಿ ಟ್ರಂಪ್‌ ವಿರುದ್ಧ ಸಂಸದೆಯ ಕಿಡಿ
ಎಐ ನಿರ್ಮಾತೃಗಳಿಗೆ 2025ರ ಟೈಮ್ ವರ್ಷದ ವ್ಯಕ್ತಿ ಗೌರವ!