3 ಇರಾನ್‌ ಶಾಂತಿ ಪ್ರಸ್ತಾಪಗಳಿಗೆ ಟ್ರಂಪ್‌ ನಕಾರ

Published : Apr 29, 2026, 07:46 AM IST
Donald Trump

ಸಾರಾಂಶ

ಮಧ್ಯಪ್ರಾಚ್ಯ ಯುದ್ಧ ಸ್ಥಗಿತ ಸಂಬಂಧ ಮೂರು ಹಂತದ ಚರ್ಚೆಯ ಪ್ರಸ್ತಾವದ ಬಗ್ಗೆ ಅಮೆರಿಕ ನಕಾರಾತ್ಮಕ ಪ್ರತಿಕ್ರಿಯೆ ನೀಡಿದೆ. ಹೀಗಾಗಿ ಉಭಯ ದೇಶಗಳ ನಡುವೆ ಸಂಧಾನ ಮಾತುಕತೆಯ ಆಸೆ ಮತ್ತೆ ದೂರವಾಗಿದ್ದು, ಯುದ್ಧ ಆರಂಭದ ಕಾರ್ಮೋಡ ಕವಿಯುವಂತೆ ಮಾಡಿದೆ.

ದುಬೈ: ಮಧ್ಯಪ್ರಾಚ್ಯ ಯುದ್ಧ ಸ್ಥಗಿತ ಸಂಬಂಧ ಮೂರು ಹಂತದ ಚರ್ಚೆಯ ಪ್ರಸ್ತಾವದ ಬಗ್ಗೆ ಅಮೆರಿಕ ನಕಾರಾತ್ಮಕ ಪ್ರತಿಕ್ರಿಯೆ ನೀಡಿದೆ. ಹೀಗಾಗಿ ಉಭಯ ದೇಶಗಳ ನಡುವೆ ಸಂಧಾನ ಮಾತುಕತೆಯ ಆಸೆ ಮತ್ತೆ ದೂರವಾಗಿದ್ದು, ಯುದ್ಧ ಆರಂಭದ ಕಾರ್ಮೋಡ ಕವಿಯುವಂತೆ ಮಾಡಿದೆ.

ಹೋರ್ಮುಜ್‌ನಲ್ಲಿ ಅಮೆರಿಕ ತನ್ನ ಹಡಗಿಗೆ ಹೇರಿರುವ ತಡೆಯನ್ನು ಹಿಂಪಡೆದರೆ ತಾನು ಕೂಡಾ ಹೋರ್ಮುಜ್‌ ತಡೆ ತೆರವುಗೊಳಿಸುವ ಪ್ರಸ್ತಾಪವನ್ನು ಇರಾನ್‌ ಮುಂದಿಟ್ಟಿತ್ತು. ಜೊತೆಗೆ ಮೂರು ಹಂತದ ಚರ್ಚೆಯ ಪ್ರಸ್ತಾಪ ಮಾಡಿತ್ತು. ಆದರೆ ಈ ಪೈಕಿ ಅಣ್ವಸ್ತ್ರ ವಿಷಯವನ್ನು ಕೊನೆಯ ಹಂತಕ್ಕೆ ಸೇರಿಸಿದ್ದು ಅಮೆರಿಕದ ತಿರಸ್ಕಾರಕ್ಕೆ ಕಾರಣವಾಗಿದೆ.

ಇರಾನ್‌ ಅಣ್ವಸ್ತ್ರ ಶಕ್ತವಾಗುವುದನ್ನು ತಡೆಯುವ ಉದ್ದೇಶ ಹೊಂದಿದೆ

ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಮೆರಿಕದ ವಿದೇಶಾಂಗ ಸಚಿವ ಮಾರ್ಕ್‌ ರುಬಿಯೋ, ‘ನಾವು ಯಾವುದೇ ಒಪ್ಪಂದ ಮಾಡಿಕೊಂಡರೂ ಅದು ಯಾವುದೇ ಹಂತದಲ್ಲೂ ಇರಾನ್‌ ಅಣ್ವಸ್ತ್ರ ಶಕ್ತವಾಗುವುದನ್ನು ತಡೆಯುವ ಉದ್ದೇಶ ಹೊಂದಿದೆ’ ಎಂದು ಹೇಳಿದ್ದಾರೆ. ಈ ಮೂಲಕ ಪರೋಕ್ಷವಾಗಿ ಇರಾನ್‌ನ ಪ್ರಸ್ತಾವ ತಿರಸ್ಕರಿಸಿದ್ದಾರೆ.

ಇರಾನ್‌ ಪತನದತ್ತ:

ಈ ನಡುವೆ ಹೋರ್ಮುಜ್‌ ಜಲಸಂಧಿ ಮುಚ್ಚಿರುವ ಕಾರಣ ದೇಶ ಪತನದ ಅಂಚಿಗೆ ತಲುಪಿದೆ ಎಂದು ಸ್ವತಃ ಇರಾನ್‌ ನಮಗೆ ಮಾಹಿತಿ ನೀಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ. ಈ ಕುರಿತು ಟ್ರುತ್‌ ಸೋಷಿಯಲ್‌ನಲ್ಲಿ ಮಂಗಳವಾರ ಪೋಸ್ಟ್‌ ಹಾಕಿರುವ ಟ್ರಂಪ್‌, ‘ನಾವು ಆದಷ್ಟು ಬೇಗ ಹೋರ್ಮುಜ್ ಜಲಸಂಧಿಯನ್ನು ಇರಾನ್‌ ಹಡಗಿಗೆ ಮುಕ್ತಗೊಳಿಸಬೇಕು ಎಂದು ಅವರು ಬಯಸಿದ್ದಾರೆ. ಜೊತೆಗೆ ನಮ್ಮ ನಾಯಕತ್ವದಲ್ಲಿನ ಬಿಕ್ಕಟ್ಟಿನ ಬಗ್ಗೆ ನಾವು ಆದಷ್ಟು ಬೇಗ ಪರಿಹಾರ ಕಂಡುಕೊಂಡು ಅಮೆರಿಕದ ಜೊತೆಗೆ ಸಂಧಾನಕ್ಕೆ ಮುಂದಾಗುತ್ತೇವೆ’ ಎಂಬ ಸಂದೇಶ ರವಾನಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಆದರೆ ಆದರೆ ಯಾರು ಯಾರ ಬಳಿ ಹೀಗೆ ಹೇಳಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಿಲ್ಲ.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.
Read more Articles on

Recommended Stories

ಇರಾನ್‌ ವಿರುದ್ಧ ಅಮೆರಿಕದಿಂದ ‘ಡಾರ್ಕ್‌ ಈಗಲ್‌’ ಪರಮಾಸ್ತ್ರ?
ಅಮೆರಿಕ, ಇಸ್ರೇಲ್‌ಗೆ ಇರಾನ್‌ ಹಾರ್ಟ್‌ ಅಟ್ಯಾಕ್‌ ಅಸ್ತ್ರ ಧಮಕಿ