ವಾಷಿಂಗ್ಟನ್: ಡೊನಾಲ್ಡ್ ಟ್ರಂಪ್ ತಮ್ಮ ವಿಜಯ ಭಾಷಣ ಮಾಡುವ ವೇಳೆ, ಭಾಷಣವನ್ನು ಅರ್ಧದಲ್ಲೇ ನಿಲ್ಲಿಸಿ ತನ್ನ ಪತ್ನಿ ಮೆಲಾನಿಯಾ ಟ್ರಂಪ್ ಅವರಿಗೆ ಚುಂಬಿಸಿದ ಪ್ರಸಂಗ ನಡೆಯಿತು.
==
4 ವರ್ಷ ‘ವನವಾಸ’ದಿಂದ ಟ್ರಂಪ್ ಪುಟಿದೇಳಲು ಕಾರಣ ಇವು..- ವಲಸೆ ವಿರೋಧಿ ನೀತಿ, ಬಲಪಂಥೀಯ ಧೋರಣೆ, ಇರಾನ್, ರಷ್ಯಾ ವಿರುದ್ಧ ಕಠಿಣ ನಿಲುವುವಾಷಿಂಗ್ಟನ್: 4 ವರ್ಷ ಹಿಂದೆ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಸೋತಾಗ ಅವರು ಇನ್ನು ಮೇಲೇಳುವುದು ಅಸಾಧ್ಯ ಎಂದು ಹಲವರು ಅಂದುಕೊಂಡಿದ್ದುಂಟು. ಆದರೆ ಎಲ್ಲರ ನಿರೀಕ್ಷೆ ಮೀರಿ ಟ್ರಂಪ್ ಗೆದ್ದಿದ್ದಾರೆ. ಅದಕ್ಕೆ ಕಾರಣ ಇಲ್ಲಿವೆ.- ಡೊನಾಲ್ಡ್ ಟ್ರಂಪ್ ಅವರು ವಲಸೆ ವಿರೋಧಿ ನೀತಿ ಹೊಂದಿದ್ದು ಅಕ್ರಮ ವಲಸಿಗರನ್ನು ನಿಯಂತ್ರಿಸುವ ನೀತಿ ಪ್ರಕಟಿಸುವುದಾಗಿ ಹೇಳಿದ್ದರು. ಇದು ಅವರಿಗೆ ವರದಾನ ಆಗಿದ್ದು, ಅಮೆರಿಕನ್ನರು ಭಾರಿ ಸಂಖ್ಯೆಯಲ್ಲಿ ಅವರಿಗೆ ಮತ ಚಲಾಯಿಸಿದ್ದಾರೆ- ಅಮೆರಿಕದ ಆರ್ಥಿಕತೆ ಬೈಡೆನ್ ಅವಧಿಯಲ್ಲಿ ಹಾಳಾಗಿದೆ ಎಂದು ಟ್ರಂಪ್ ಪ್ರಚಾರ ಮಾಡಿ, ತಮ್ಮ ಅವಧಿಯ ಆರ್ಥಿಕತೆಯ ಅಂಕಿ ಅಂಶ ಉಲ್ಲೇಖಿಸಿದ್ದರು. ಇದು ಅವರಿಗೆ ಪ್ಲಸ್ ಪಾಯಿಂಟ್ ಆಗಿದೆ.- ಇಸ್ರೇಲ್-ಹಮಾಸ್-ಹಿಜ್ಬುಲ್ಲಾ ಯುದ್ಧ ಹಾಗೂ ರಷ್ಯಾ-ಉಕ್ರೇನ್ ಯುದ್ಧ ವಿಚಾರದಲ್ಲಿ ಅವರು ಇಸ್ರೇಲ್ ಹಾಗೂ ಉಕ್ರೇನ್ ಪರ ತಳೆದ ನಿಲುವು ಅವರಿಗೆ ವರವಾಗಿದೆ. ಕಮಲಾ ಹ್ಯಾರಿಸ್ ಇಸ್ರೇಲ್ ವಿರೋಧಿ ಎಂದೂ ಟ್ರಂಪ್ ಪ್ರಚಾರ ಮಾಡಿದ್ದುಂಟು. ಹೀಗಾಗಿ ಇಸ್ರೇಲ್ ಮೂಲದವರು ಟ್ರಂಪ್‌ಗೆ ಹೆಚ್ಚು ಮತ ಹಾಕಿದ್ದಾರೆ- ಟ್ರಂಪ್ ಅವರ ಹತ್ಯೆಗೆ ಚುನಾವಣೆ ವೇಳೆ 2 ಬಾರಿ ಯತ್ನ ನಡೆದವು. ಇವು ಅವರಿಗೆ ಅನುಕಂಪದ ಮತ ಬರಲು ಕಾರಣವಾಯಿತು.- ಟ್ರಂಪ್ ಅವರು ಬಲಪಂಥೀಯ ನಿಲುವು ತಳೆದು ಹಿಂದೂಗಳ ಪರ ಹೆಚ್ಚು ಮಾತನಾಡಿದರು ಹಾಗೂ ಕಮಲಾ ಎಡಪಂಥೀಯ ಮಹಿಳೆ ಎಂದು ಪ್ರಚಾರ ಮಾಡಿದರು. ಇದು ಕಮಲಾ ಭಾರತೀಯರಾದರೂ, ಭಾರತೀಯ ಮೂಲದವರು ಟ್ರಂಪ್ ಪರ ಹೆಚ್ಚು ಮತ ಹಾಕಲು ಕಾರಣವಾಯಿತು.- ಬೈಡೆನ್ ಅವರಿಗೆ ವಯಸ್ಸಾದ ಕಾರಣ ಅವರು ಕೊನೇ ಕ್ಷಣದಲ್ಲಿ ಸ್ಪರ್ಧೆಯಿಂದ ಹಿಂದೆ ಸರಿದರು ಹಾಗೂ ಕಮಲಾ ಹ್ಯಾರಿಸ್ ಕೊನೇ ಕ್ಷಣದಲ್ಲಿ ಟ್ರಂಪ್ ವಿರುದ್ಧ ಸ್ಪರ್ಧೆಗೆ ನಿಂತರು. ಕಮಲಾಗೆ ಸಿದ್ಧತೆಗೆ ಸಾಕಷ್ಟು ಸಮಯ ಸಿಗದೇ ಇದ್ದುದೂ ಟ್ರಂಪ್ ಜಯಕ್ಕೆ ಕಾರಣ.