ಹಾಂಕಾಂಗ್‌ 8 ಕಟ್ಟಡದಲ್ಲಿ ಅಗ್ನಿ ಅವಘಡ : 36 ಸಾವು

Published : Nov 27, 2025, 05:17 AM IST
Hong Kong Fire

ಸಾರಾಂಶ

ಹಾಂಕಾಂಗ್‌ನಲ್ಲಿ 8 ಜನವಸತಿ ಕಟ್ಟಡಗಳಲ್ಲಿ ಬುಧವಾರ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಘಟನೆಯಲ್ಲಿ 36 ಜನರು ಸಾವನ್ನಪ್ಪಿದ್ದು, 700ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ. ಘಟನಾ ಸ್ಥಳದಿಂದ 279 ಜನರು ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರುವ ಭೀತಿ ಉಂಟಾಗಿದೆ.

ಹಾಂಕಾಂಗ್‌: ಹಾಂಕಾಂಗ್‌ನಲ್ಲಿ 8 ಜನವಸತಿ ಕಟ್ಟಡಗಳಲ್ಲಿ ಬುಧವಾರ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಘಟನೆಯಲ್ಲಿ 36 ಜನರು ಸಾವನ್ನಪ್ಪಿದ್ದು, 700ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ. ಘಟನಾ ಸ್ಥಳದಿಂದ 279 ಜನರು ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರುವ ಭೀತಿ ಉಂಟಾಗಿದೆ.

ನ್ಯೂ ಟೆರಿಟರಿಸ್‌ನ ತೈ ಪೋ ಜಿಲ್ಲೆಯ 8 ವಸತಿ ಸಂಕೀರ್ಣ

ನ್ಯೂ ಟೆರಿಟರಿಸ್‌ನ ತೈ ಪೋ ಜಿಲ್ಲೆಯ 8 ವಸತಿ ಸಂಕೀರ್ಣದಲ್ಲಿ 2000 ಮನೆಗಳಿದ್ದು, ಇದರಲ್ಲಿ 4800ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. 1980ರಲ್ಲಿ ನಿರ್ಮಿಸಿದ ಈ ಕಟ್ಟಡಗಳ ನವೀಕರಣ ನಡೆಯುತ್ತಿದ್ದು, ಈ ವೇಳೆ ಭಾರೀ ಅಗ್ನಿ ಅವಘಡ ಸಂಭವಿಸಿದೆ. ನವೀಕರಣ ವೇಳೆ ಬಳಸಿದ ಬಿದಿರಿನಲ್ಲಿ ಮೊದಲಿಗೆ ಬೆಂಕಿ ಕಾಣಿಸಿದ್ದು, ಅದು ಕೆಲವೇ ಹೊತ್ತಿನಲ್ಲಿ ಎಲ್ಲೆಡೆ ಹಬ್ಬಿ ಮುಗಿಲೆತ್ತರಕ್ಕೆ ಬೆಂಕಿಯ ಜ್ವಾಲೆಗಳು ಹಬ್ಬಿತು.

128 ಅಗ್ನಿ ಶಾಮಕ ವಾಹನಗಳು

ವಿಚಾರ ತಿಳಿಯುತ್ತಿದ್ದಂತೆ ಪೊಲೀಸರು, ಅಗ್ನಿಶಾಮಕ ದಳ ಸ್ಥಳಕ್ಕಾಗಮಿಸಿದ್ದು ಬೆಂಕಿ ನಂದಿಸುವಲ್ಲಿ. 128 ಅಗ್ನಿ ಶಾಮಕ ವಾಹನಗಳು, 57 ಅಂಬ್ಯುಲೆನ್ಸ್‌ಗಳು ರಕ್ಷಣಾ ಕಾರ್ಯದಲ್ಲಿ ತೊಡಗಿವೆ. ಕೆಲ ಸಮುಚ್ಚಯದಲ್ಲಿ ವೃದ್ಧರೇ ಹೆಚ್ಚಿನ ಸಂಖ್ಯೆಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

ಇದು ಹಾಂಕಾಂಗ್‌ನಲ್ಲಿ ಇತ್ತೀಚಿನ ವರ್ಷಗಳಲ್ಲಿ ನಡೆದ ಎರಡನೇ ಅತಿದೊಡ್ಡ ಅಗ್ನಿ ದುರಂತ. 1996ರ ನವೆಂಬರ್‌ಲ್ಲಿ ಕೌಲೂನ್‌ನಲ್ಲಿ ನಡೆದ ಅಗ್ನಿ ಅವಘಢವಿಂದರಲ್ಲಿ 41 ಮಂದಿ ಸಾವನ್ನಪ್ಪಿದ್ಆರೆ.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.
Read more Articles on

Recommended Stories

ಗಗನಯಾತ್ರಿ ಸುನಿತಾ ವಿಲಿಯಮ್ಸ್‌ ನಿವೃತ್ತಿ - 27 ವರ್ಷಗಳ ಬಳಿಕ ನಾಸಾದ ವೃತ್ತಿಗೆ ವಿದಾಯ
ಗ್ರೀನ್‌ಲ್ಯಾಂಡ್‌ನ ಬಳಿಕ ಹಿಂದು ಹಿಂದೂ ಮಹಾಸಾಗರಕ್ಕೆ ಟ್ರಂಪ್‌ ಕಣ್ಣು