ಪಹಲ್ಗಾಂ ದಾಳಿ ನಡೆಸಿದ್ದು ಉಗ್ರರಲ್ಲ: ಅಮೆರಿಕ ಕ್ಯಾತೆ!

KannadaprabhaNewsNetwork |  
Published : Nov 21, 2025, 01:45 AM ISTUpdated : Nov 21, 2025, 06:16 AM IST
India

ಸಾರಾಂಶ

 ‘ಏ.22ರಂದು ನಡೆದ ಪಹಲ್ಗಾಂ ದಾಳಿ ಭಾರತದೊಳಗಿನ ಬಂಡಾಯದಿಂದ ನಡೆದದ್ದು ಮತ್ತು ಬಳಿಕ ಉಭಯ ದೇಶಗಳ ನಡುವೆ ಯುದ್ಧದಲ್ಲಿ ಪಾಕಿಸ್ತಾನವೇ ಮೇಲುಗೈ ಸಾಧಿಸಿತ್ತು’ ಎಂದು ಅಮೆರಿಕ ಆಘಾತಕಾರಿ ವರದಿಯೊಂದನ್ನು ಬಿಡುಗಡೆ ಮಾಡಿದೆ.

 ನವದೆಹಲಿ: ಭಾರತ-ಪಾಕ್‌ ನಡುವಿನ ಸಂಘರ್ಷವನ್ನು ನಿಲ್ಲಿಸಿದ್ದು ತಾನೇ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನಿರಂತರವಾಗಿ ಸುಳ್ಳು ಹೇಳುತ್ತಿರುವ ನಡುವೆಯೇ, ‘ಏ.22ರಂದು ನಡೆದ ಪಹಲ್ಗಾಂ ದಾಳಿ ಭಾರತದೊಳಗಿನ ಬಂಡಾಯದಿಂದ ನಡೆದದ್ದು ಮತ್ತು ಬಳಿಕ ಉಭಯ ದೇಶಗಳ ನಡುವೆ ಯುದ್ಧದಲ್ಲಿ ಪಾಕಿಸ್ತಾನವೇ ಮೇಲುಗೈ ಸಾಧಿಸಿತ್ತು’ ಎಂದು ಅಮೆರಿಕ ಆಘಾತಕಾರಿ ವರದಿಯೊಂದನ್ನು ಬಿಡುಗಡೆ ಮಾಡಿದೆ.

ಅದರ ಬೆನ್ನಲ್ಲೇ ವರದಿ ಕುರಿತು ಕಳವಳ ವ್ಯಕ್ತಪಡಿಸಿರುವ ಕಾಂಗ್ರೆಸ್‌, ಇದು ಪ್ರಧಾನಿ ನರೇಂದ್ರ ಮೋದಿ ಅವರ ರಾಜತಾಂತ್ರಿಕತೆ ವೈಫಲ್ಯ ಎಂದು ಕಿಡಿಕಾರಿದೆ.

ವರದಿಯಲ್ಲೇನಿದೆ?:

ಅಮೆರಿಕ-ಚೀನಾ ಆರ್ಥಿಕ ಮತ್ತು ಭದ್ರತಾ ಪರಿಶೀಲನಾ ಆಯೋಗವು ಅಮೆರಿಕ ಸಂಸತ್ತಿಗೆ ತನ್ನ ವಾರ್ಷಿಕ ವರದಿ ಸಲ್ಲಿಸಿದೆ. ಅದರಲ್ಲಿ, ‘2025ರ ಮೇ 7-10ರಂದು ಪಾಕಿಸ್ತಾನ ಮತ್ತು ಭಾರತದ ನಡುವಿನ ಸಂಘರ್ಷದಲ್ಲಿ ಚೀನಾದ ಪಾತ್ರವು ಜಾಗತಿಕ ಗಮನ ಸೆಳೆಯಿತು. ಏಕೆಂದರೆ ಪಾಕಿಸ್ತಾನಿ ಸೇನೆಯು ಚೀನಾದ ಶಸ್ತ್ರಾಸ್ತ್ರಗಳನ್ನು ಅವಲಂಬಿಸಿತ್ತು. 26 ನಾಗರಿಕರನ್ನು ಬಲಿಪಡೆದ ಪಹಲ್ಗಾಂ ಬಂಡಾಯ ದಾಳಿಗೆ ಭಾರತ ಪ್ರತಿಕ್ರಿಯಿಸಿದ್ದರಿಂದ ಯುದ್ಧ ಆರಂಭವಾಯಿತು. 4 ದಿನಗಳ ಸಂಘರ್ಷದಲ್ಲಿ ಭಾರತದ ಮೇಲೆ ಪಾಕಿಸ್ತಾನ ಯಶಸ್ಸು ಸಾಧಿಸಿತು’ ಎಂದು ವಿವರಿಸಲಾಗಿದೆ.

ಕಾಂಗ್ರೆಸ್‌ ಕಿಡಿ:

ಅಮೆರಿಕ ವರದಿಯ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌, ‘ಒಂದೆಡೆ ಯುದ್ಧ ನಿಲ್ಲಿಸಿದ್ದು ತಾನೇ ಎಂದು ಟ್ರಂಪ್‌ ಹೇಳುತ್ತಿದ್ದರೆ, ಇನ್ನೊಂದೆಡೆ ಅಮೆರಿಕ ವರದಿಯಲ್ಲಿ, ಪಹಲ್ಗಾಂ ದಾಳಿಯನ್ನು ಬಂಡಾಯ ಎಂದು ಉಲ್ಲೇಖಿಸಿ, ಪಾಕಿಸ್ತಾನವೇ ಗೆದ್ದಿದ್ದಾಗಿ ತಿಳಿಸಲಾಗಿದೆ. ಪ್ರಧಾನಿ ಮೋದಿ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ರಾಜತಾಂತ್ರಿಕತೆ ಮತ್ತೊಂದು ತೀವ್ರ ಹಿನ್ನಡೆಯನ್ನು ಅನುಭವಿಸಿದೆ’ ಎಂದು ಆಕ್ರೋಶ ಹೊರಹಾಕಿದ್ದಾರೆ.

ಏನಿದು ಹೊಸ ಆಟ?

- ಅಮೆರಿಕ- ಚೀನಾ ಆರ್ಥಿಕ, ಭದ್ರತಾ ಪರಿಶೀಲನಾ ಆಯೋಗದಿಂದ ಸಂಸತ್ತಿಗೆ ವಾರ್ಷಿಕ ವರದಿ ಸಲ್ಲಿಕೆ

- ಪಹಲ್ಗಾಂನಲ್ಲಿ ಆಗಿದ್ದು ಬಂಡಾಯ ದಾಳಿ. ಅದಕ್ಕೆ ಭಾರತ ಪ್ರತಿಕ್ರಿಯಿಸಿದ್ದರಿಂದ ಪಾಕ್‌ ಜೊತೆಗೆ ಯುದ್ಧ

- ಈ ಯುದ್ಧದಲ್ಲಿ ಚೀನಾದ ಪಾತ್ರ ಜಾಗತಿಕವಾಗಿ ಗಮನ ಸೆಳೆದಿದೆ. ಚೀನಾದ ಅಸ್ತ್ರಗಳನ್ನು ಪಾಕ್‌ ಬಳಸಿದೆ

- ಅಮೆರಿಕದ ವರದಿಗೆ ಕಾಂಗ್ರೆಸ್‌ನಿಂದ ಆಕ್ರೋಶ. ಇದು ರಾಜತಾಂತ್ರಿಕ ಹಿನ್ನಡೆ ಎಂದು ಟೀಕಾಪ್ರಹಾರ

PREV
Read more Articles on

Recommended Stories

ನೇಪಾಳದಲ್ಲಿ ಮತ್ತೆ ಜೆನ್‌ ಝೀ ದಂಗೆ : ಸಭೆಗೆ ಬ್ರೇಕ್‌, ತಡೆ, ಕರ್ಫ್ಯೂ
ಭಾರತಕ್ಕೆ ವಿಮಾನ ತಂತ್ರಜ್ಞಾನವನ್ನೇ ಕೊಡ್ತೀವಿ : ರಷ್ಯಾ!