;Resize=(412,232))
ನ್ಯೂಯಾರ್ಕ್: ಇರಾನ್ ವಿರುದ್ಧ ಸಮರ ಸಾರಿದ್ದ ಅಮೆರಿಕಕ್ಕೂ ಇದೀಗ ಇಂಧನ ಬೆಲೆ ಏರಿಕೆ ಬಿಸಿ ತಟ್ಟಿದೆ. ವಿಶ್ವದ ಅತಿದೊಡ್ಡ ತೈಲೋತ್ಪನ್ನ ರಾಷ್ಟ್ರಗಳಲ್ಲಿ ಒಂದಾಗಿರುವ ಅಮೆರಿಕದಲ್ಲಿಯೂ ಗ್ಯಾಸೋಲಿನ್ ದರ ಪ್ರತಿ ಗ್ಯಾಲನ್‌ಗೆ 4.02 ಡಾಲರ್‌ಗೆ ಏರಿಕೆಯಾಗಿದೆ.
ಇದು ಕಳೆದ 4 ವರ್ಷಗಳಲ್ಲೇ ಗ್ಯಾಸೋಲಿನ್‌ನ ಗರಿಷ್ಠ ಮೊತ್ತವಾಗಿದೆ. ಮಾಪನದಲ್ಲಿ 3.78 ಲೀಟರ್‌ಗೆ ಒಂದು ಗ್ಯಾಲನ್ ಎಂದು ಹೇಳಲಾಗುತ್ತದೆ. ಯುದ್ಧ ಆರಂಭಕ್ಕೂ ಮುನ್ನ ಪ್ರತಿ ಗ್ಯಾಲನ್‌ಗೆ 3 ಡಾಲರ್ ಇದ್ದಿದ್ದು, ಒಂದು ತಿಂಗಳ ಅವಧಿಯಲ್ಲಿ 4.02 ಡಾಲರ್ ದಾಟಿದೆ.
ಒಂದು ಕಡೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ‘ನಮ್ಮಲ್ಲಿ ಸಾಕಷ್ಟು ತೈಲ, ಅನಿಲವಿದೆ. ವಿಶ್ವಕ್ಕೇ ಅದನ್ನು ಹಂಚಬಲ್ಲೆವು’ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದರೆ, ಇನ್ನೊಂದೆಡೆ ಅಮೆರಿಕದಲ್ಲೇ ತೈಲ ದರ ಏರಿಕೆ ಆಗುತ್ತಿರುವುದು ಅವರು ವೈಫಲ್ಯ ಮುಚ್ಚಿಡುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿ.
ಅಮೆರಿಕ ಬಳಿ ಸಾಕಷ್ಟು ತೈಲ ಇದೆ. ಸಂಕಷ್ಟಕ್ಕೆ ಒಳಗಾದವರು ಬಂದು ಖರೀದಿಸಬಹುದು. ಆದರೆ ಹೋರ್ಮುಜ್‌ಗೇ ಹೋಗಿ ತೈಲ ಕೊಳ್ಳುತ್ತೇವೆ ಎನ್ನುವವರು, ಅಲ್ಲೇ ಹೋಗಿ ಕೊಳ್ಳಬಹುದು. ಅವರ ರಕ್ಷಣೆಗೆ ನಾವು ಧಾವಿಸಲ್ಲ.