ಐಬಿಎಂನಲ್ಲಿ ವಜಾ ಪರ್ವ: ಹಲವು ನೌಕರರ ವಜಾ

KannadaprabhaNewsNetwork |  
Published : Mar 15, 2024, 01:45 AM ISTUpdated : Mar 16, 2024, 03:04 PM IST
ಐಬಿಎಂ | Kannada Prabha

ಸಾರಾಂಶ

ಐಬಿಎಂನಲ್ಲಿ ಶೇ.30ರಷ್ಟು ನೌಕರರನ್ನು ವಜಾ ಮಾಡಿ ಅವರ ಕೆಲಸವನ್ನು ಕೃತಕ ಬುದ್ಧಿಮತ್ತೆಯ ಮೂಲಕ ಮಾಡಿಸಲು ಕಂಪನಿ ತೀರ್ಮಾನಿಸಿದೆ ಎನ್ನಲಾಗಿದೆ.

ಮುಂಬೈ: ಜಗತ್ತಿನ ಖ್ಯಾತ ಐಟಿ ಕಂಪನಿಗಳಲ್ಲಿ ಒಂದಾದ ಐಬಿಎಂ ಉದ್ಯೋಗ ಕಡಿತಕ್ಕೆ ಮುಂದಾಗಿದೆ. ಈ ನಿರ್ಧಾರವನ್ನು ಕೇವಲ 7 ನಿಮಿಷಗಳ ಕಾಲ ನಡೆದ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮಾರ್ಕೆಟಿಂಗ್‌ ಹಾಗೂ ಕಮ್ಯುನಿಕೇಷನ್‌ ವಿಭಾಗದಲ್ಲಿ ಉದ್ಯೋಗಿಗಳನ್ನು ಕಡಿತಗೊಳಿಸಲಿದೆ. ಆದರೆ ಎಷ್ಟು ಪ್ರಮಾಣದಲ್ಲಿ ನೌಕರರು ವಜಾ ಆಗಿದ್ದಾರೆ ಎಂಬ ಅಂಕಿ-ಅಂಶ ಬಹಿರಂಗಪಡಿಸಿಲ್ಲ.

ಕೆಲವು ಆಂತರಿಕೆ ಮಾಹಿತಿಗಳ ಪ್ರಕಾರ ಕಂಪನಿಯ ಶೇ.30ರಷ್ಟು ಹುದ್ದೆಗಳನ್ನು ಕೃತಕ ಬುದ್ಧಿಮತ್ತೆ ಭರ್ತಿ ಮಾಡಲಿದೆ. ಹೀಗಾಗಿ ಈ ಸ್ಥಾನದಲ್ಲಿರುವ ಉದ್ಯೋಗಿಗಳನ್ನು ತೆಗೆದುಹಾಕಲು ಕಂಪನಿ ನಿರ್ಧರಿಸಿದೆ.ಕಳೆದ ವರ್ಷ ಐಬಿಎಂ ಸಿಇಒ ಅರವಿಂದ್‌ ಕೃಷ್ಣ ಹೊಸದಾಗಿ ನೇಮಕ ಮಾಡಿಕೊಳ್ಳುವುದನ್ನು ಸ್ವಲ್ಪ ಮಟ್ಟಿಗೆ ನಿಲ್ಲಿಸಲಾಗುವುದು ಎಂದು ಹೇಳಿದ್ದರು.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.

Recommended Stories

ಕ್ಸಿಗೆ 100 ಅಡಿ ಉದ್ದದ ಕೆಂಪು ಹಾಸು ಹಾಕಿ ಟ್ರಂಪ್‌ ಸ್ವಾಗತ
ಚೀನಾಕ್ಕೆ ಭಾರತ ಉತ್ಪನ್ನ ರಫ್ತು ಶೇ.40ರಷ್ಟು ಹೆಚ್ಚಳ!