ಮತ್ತೊಬ್ಬ ಹಮಾಸ್‌ ಕಮಾಂಡರ್‌ ಹತ್ಯೆ

KannadaprabhaNewsNetwork |  
Published : Oct 16, 2023, 01:45 AM IST

ಸಾರಾಂಶ

ವೈಮಾನಿಕ ದಾಳಿಯಲ್ಲಿ ಉಗ್ರ ಬಿಲ್ಲಾಲ್‌ ಅಲ್‌-ಖೆದ್ರಾ ಖತಂ

ಟೆಲ್‌ ಅವಿವ್‌: ಕಳೆದ ವಾರ ತನ್ನ ನೆಲದ ಮೇಲೆ ಏಕಾಏಕಿ ದಾಳಿ ಮಾಡಿ 1,300ಕ್ಕೂ ಹೆಚ್ಚು ಜನ ಅಮಾಯಕರನ್ನು ಹತ್ಯೆಗೈದ ಹಮಾಸ್‌ ಭಯೋತ್ಪಾದಕರ ತಂಡವನ್ನು ಮುನ್ನಡೆಸಿದ್ದ ಮೂರನೇ ಉಗ್ರಗಾಮಿ ನಾಯಕನನ್ನು ಹತ್ಯೆ ಮಾಡಿರುವುದಾಗಿ ಇಸ್ರೇಲ್‌ ಸೇನೆ ಹೇಳಿದೆ. ಶನಿವಾರವಷ್ಟೇ ದಾಳಿಯನ್ನು ಮುನ್ನಡೆಸಿದ್ದ ಇಬ್ಬರು ಹಮಾಸ್‌ ಕಮಾಂಡರ್‌ಗಳನ್ನು ಇಸ್ರೇಲ್‌ ಹತ್ಯೆ ಮಾಡಿತ್ತು. ‘ನಾವು ನಡೆಸಿದ ವೈಮಾನಿಕ ದಾಳಿಯಲ್ಲಿ ಹಮಾಸ್‌ ಕಮಾಂಡರ್‌ ಬಿಲ್ಲಾಲ್‌ ಅಲ್‌-ಖೆದ್ರಾ ಸಾವನ್ನಪ್ಪಿದ್ದಾನೆ. ಇಸ್ರೇಲ್‌ ನಗರಗಳಾದ ಕಿಬ್ಬುಟ್ಜ್‌ ನಿರಿಮ್‌ ಮತ್ತು ನಿರ್‌ ಓಜ್‌ಗಳ ಮೇಲಿನ ದಾಳಿಯಲ್ಲಿ ಪ್ರಮುಖನಾಗಿದ್ದ’ ಎಂದು ಇಸ್ರೇಲ್‌ ಹೇಳಿದೆ.

PREV

Recommended Stories

ಪಿಒಕೆನಲ್ಲಿ ಪಹಲ್ಗಾಂ ಉಗ್ರನ ಸಾಂಕೇತಿಕ ಅಂತ್ಯಕ್ರಿಯೆ!
ಶ್ವೇತಭವನ ವಕ್ತಾರೆಯ ತುಟಿ, ಸೌಂದರ್ಯ ಹೊಗಳಿದ ಟ್ರಂಪ್!