ನಮ್ಮ ಪಕ್ಷ ಗೆದ್ರೆ 5000 ಡಾಲರ್‌ ದುಡ್ಡು: ಈಗ ಟ್ರಂಪ್‌ ಗ್ಯಾರಂಟಿ!

Published : Sep 11, 2026, 10:09 AM IST
Donald Trump

ಸಾರಾಂಶ

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಇದೀಗ ಹೊಸ ‘ಗ್ಯಾರಂಟಿ’ಯೊಂದನ್ನು ಘೋಷಿಸಿದ್ದಾರೆ. ನವೆಂಬರ್‌ನಲ್ಲಿ ನಡೆಯಲಿರುವ ಅಮೆರಿಕ ಕಾಂಗ್ರೆಸ್ (ಸಂಸತ್‌) ಮಧ್ಯಂತರ ಚುನಾವಣೆಯಲ್ಲಿ ರಿಪಬ್ಲಿಕನ್‌ ಪಕ್ಷವು ಮೇಲ್ಮನೆ ಮತ್ತು ಕೆಳಮನೆಯಲ್ಲಿ ಬಹುಮತಗಳಿಸಿದರೆ ಅಮೆರಿಕದ ಪ್ರತಿಯೊಬ್ಬ ವಯಸ್ಕರಿಗೂ 5 ಸಾವಿರ ಡಾಲರ್‌ (4.77 ಲಕ್ಷ ರು.) ನೀಡುವುದಾಗಿ ಪ್ರಕಟಿಸಿದ್ದಾರೆ.

ವಾಷಿಂಗ್ಟನ್‌: ಕರ್ನಾಟಕ ಸೇರಿದಂತೆ ಭಾರತದ ಚುನಾವಣೆಗಳ ಮಾದರಿಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಇದೀಗ ಹೊಸ ‘ಗ್ಯಾರಂಟಿ’ಯೊಂದನ್ನು ಘೋಷಿಸಿದ್ದಾರೆ. ನವೆಂಬರ್‌ನಲ್ಲಿ ನಡೆಯಲಿರುವ ಅಮೆರಿಕ ಕಾಂಗ್ರೆಸ್ (ಸಂಸತ್‌) ಮಧ್ಯಂತರ ಚುನಾವಣೆಯಲ್ಲಿ ರಿಪಬ್ಲಿಕನ್‌ ಪಕ್ಷವು ಮೇಲ್ಮನೆ ಮತ್ತು ಕೆಳಮನೆಯಲ್ಲಿ ಬಹುಮತಗಳಿಸಿದರೆ ಅಮೆರಿಕದ ಪ್ರತಿಯೊಬ್ಬ ವಯಸ್ಕರಿಗೂ 5 ಸಾವಿರ ಡಾಲರ್‌ (4.77 ಲಕ್ಷ ರು.) ನೀಡುವುದಾಗಿ ಪ್ರಕಟಿಸಿದ್ದಾರೆ.

ಕಾರ್ಪೊರೇಟ್‌ ಕಂಪನಿಯೊಂದು ಷೇರುದಾರರಿಗೆ ನೀಡುವ ಲಾಭಾಂಶದ ರೂಪದಲ್ಲಿ ಈ ಹಣ ಪಾವತಿಸುವುದಾಗಿ ಟ್ರಂಪ್‌ ಗುರುವಾರ ಹೇಳಿಕೊಂಡಿದ್ದಾರೆ.

ಆದರೆ ಬಳಿಕ ಈ ಕುರಿತು ಸ್ಪಷ್ಟನೆ ನೀಡಿರುವ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್‌ ಅವರು, ‘ಈ ಹಣ ಶ್ರೀಮಂತರಿಗೆ ನೀಡುವುದಿಲ್ಲ. ಜತೆಗೆ, ಅಮೆರಿಕವು ವಿಧಿಸುವ ಸುಂಕದ ಮೂಲಕ ಸಂಗ್ರಹಿಸಿದ ಆದಾಯದಿಂದ ಪಾವತಿಸಲಾಗುವುದು’ ಎಂದಿದ್ದಾರೆ. ಆದರೆ, ಟ್ರಂಪ್‌ ಘೋಷಿಸಿರುವ 5 ಸಾವಿರ ಡಾಲರ್‌ ಕೊಡುಗೆಯ ಒಟ್ಟಾರೆ ಮೊತ್ತ ಸುಂಕದ ಆದಾಯವನ್ನೂ ಮೀರಲಿದೆ ಎಂದು ಹೇಳಲಾಗಿದೆ.

ಹಣ ಹೊಂದಿಕೆ ಕಷ್ಟ:

ಟ್ರಂಪ್‌ ಈ ಘೋಷಣೆ ನಿಜವಾಗಿಯೂ ಕಾರ್ಯರೂಪಕ್ಕೆ ಬಂದರೆ ಅಮೆರಿಕದ ಖಜಾನೆಗೆ 95 ಲಕ್ಷ ಕೋಟಿ ರು. ಹೊರೆಬೀಳಲಿದೆ. ಈಗಾಗಲೇ ಅಮೆರಿಕವು 171 ಲಕ್ಷ ಕೋಟಿ ರು.ನಷ್ಟು ವಾರ್ಷಿಕ ಬಜೆಟ್‌ ಕೊರತೆ ಎದುರಿಸುತ್ತಿದೆ.

ಅಮೆರಿಕದ ರಾಷ್ಟ್ರೀಯ ಸಾಲವು ಇದೇ ಮೊದಲ ಬಾರಿಗೆ ₹3,81,600 ಲಕ್ಷ ಕೋಟಿ ತಲುಪಿದೆ. ಇದೀಗ ಪ್ರತಿ ವ್ಯಕ್ತಿಗೂ 5 ಸಾವಿರ ಡಾಲರ್‌ ನೀಡುವ ಘೋಷಣೆಯಿಂದ ಬಜೆಟ್‌ ಮೇಲಿನ ಹೊರೆ ಮತ್ತಷ್ಟು ಏರಿಕೆಯಾಗಲಿದೆ ಎಂದು ಹೇಳಲಾಗಿದೆ.

ಅಮೆರಿಕದಲ್ಲಿ ಗ್ಯಾರಂಟಿ ಭರಾಟೆ:

ಇತ್ತೀಚೆಗೆ ನ್ಯೂಯಾರ್ಕ್‌ ಮೇಯರ್‌ ಸ್ಥಾನಕ್ಕೆ ಚುನಾವಣೆ ನಡೆದಾಗ ಮೇಯರ್‌ ಅಭ್ಯರ್ಥಿ ಮಮ್ದಾನಿ ಕೆಲವು ಪುಕ್ಕಟೆ ಭರವಸೆ ನೀಡಿದ್ದರು. ಇದೀಗ ಟ್ರಂಪ್‌ ಆ ಹಾದಿ ಹಿಡಿದಿದ್ದಾರೆ.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.
Read more Articles on

Recommended Stories

ಪೋರ್ನೋಗ್ರಫಿಗೆ ಸಕ್ರಮಕ್ಕೆ ಉಕ್ರೇನ್‌ ಚಿಂತನೆ
ಅಕ್ಕ ಸಮ್ಮೇಳನ ಕನ್ನಡದ ನೆನಪುಗಳ ಹಬ್ಬ : ಡಿಕೆಶಿ