ಭಾರತದ ಮೇಲೆ ಶೇ.100 ತೆರಿಗೆ ಹಾಕಿ: ಇಯುಗೆ ಟ್ರಂಪ್‌

Published : Sep 11, 2025, 05:03 AM IST
 Donald Trump

ಸಾರಾಂಶ

ಒಂದು ಕಡೆ ವ್ಯಾಪಾರ ಒಪ್ಪಂದದ ವಿಚಾರದಲ್ಲಿ ಭಾರತದ ಜತೆ ಮೆತ್ತಗಾದಂತೆ ವರ್ತಿಸುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು, ಮತ್ತೊಂದು ಕಡೆ ಭಾರತದ ವಿರುದ್ಧ ಶೇ.100ರಷ್ಟು ತೆರಿಗೆ ವಿಧಿಸಿ ಎಂದು ಯುರೋಪಿಯನ್‌ ಯೂನಿಯನ್‌ಗೆ ಹೇಳಿದ್ದಾರೆ

ವಾಷಿಂಗ್ಟನ್‌: ಒಂದು ಕಡೆ ವ್ಯಾಪಾರ ಒಪ್ಪಂದದ ವಿಚಾರದಲ್ಲಿ ಭಾರತದ ಜತೆ ಮೆತ್ತಗಾದಂತೆ ವರ್ತಿಸುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು, ಮತ್ತೊಂದು ಕಡೆ ಭಾರತದ ವಿರುದ್ಧ ಶೇ.100ರಷ್ಟು ತೆರಿಗೆ ವಿಧಿಸಿ ಎಂದು ಯುರೋಪಿಯನ್‌ ಯೂನಿಯನ್‌ಗೆ ಹೇಳಿದ್ದಾರೆ ಎಂದು ಅಮೆರಿಕದ ಫೈನಾನ್ಷಿಯಲ್‌ ಟೈಮ್ಸ್‌ ಪತ್ರಿಕೆ ವರದಿ ಮಾಡಿದೆ.

‘ಉಕ್ರೇನ್‌ ಜತೆಗೆ ಯುದ್ಧದಲ್ಲಿ ನಿರತ ರಷ್ಯಾದಿಂದ ತೈಲ ಖರೀದಿಸುತ್ತಿರುವ ಚೀನಾ ಮತ್ತು ಭಾರತದ ಮೇಲೆ ಶೇ.100ರಷ್ಟು ತೆರಿಗೆ ಹಾಕಲು ನಾವು ಸಿದ್ಧರಿದ್ದೇವೆ. ಆದರೆ ಈ ವಿಚಾರದಲ್ಲಿ ನೀವೂ ಕೈಜೋಡಿಸಬೇಕು ಎಂದು ಯುರೋಪಿಯನ್‌ ಯೂನಿಯನ್‌ನ ಮುಖಂಡರನ್ನು ಅವರು ಮಂಗಳವಾರ ಸಭೆಯೊಂದರಲ್ಲಿ ಆಗ್ರಹಿಸಿದರು. ಈ ಮೂಲಕ ಅಮೆರಿಕದ ರೀತಿ ಯುರೋಪಿಯನ್‌ ರಾಷ್ಟ್ರಗಳು ಕೂಡ ಭಾರತ ಮತ್ತು ಚೀನಾ ವಿರುದ್ಧ ತೆರಿಗೆ ವಿಧಿಸಬೇಕು ಎಂದು ಒತ್ತಾಯಿಸಿದರು’ ಎಂದು ವರದಿ ಹೇಳಿದೆ.

ಅಮೆರಿಕ ಹಾಗೂ ಯುರೋಪಿಯನ್‌ ಯೂನಿಯನ್‌ನ ಹಿರಿಯ ಅಧಿಕಾರಿಗಳು ಉಕ್ರೇನ್‌ ಯುದ್ಧ ವಿಚಾರವಾಗಿ ವಾಷಿಂಗ್ಟನ್‌ನಲ್ಲಿ ಸಭೆ ನಡೆಸುತ್ತಿದ್ದಾಗ ವಿಡಿಯೋ ಕಾನ್ಫರೆನ್ಸ್‌ ಮೂಲಕ ಮಾತನಾಡಿದ ಟ್ರಂಪ್‌ ಅವರು ಇಂಥದ್ದೊಂದು ಬೇಡಿಕೆ ಇಟ್ಟಿದ್ದಾರೆ ಎಂದು ಹೇಳಲಾಗಿದೆ.

ನಾವು ಶೇ.100ರಷ್ಟು ತೆರಿಗೆ ಹೇರಲು ಸಿದ್ಧವಾಗಿದ್ದೇವೆ. ಆದರೆ, ನಮ್ಮ ರೀತಿಯೇ ಯುರೋಪಿಯನ್‌ ಪಾಲುದಾರರೂ ಭಾರತ ಮತ್ತು ಚೀನಾ ಮೇಲೆ ಪ್ರತಿ ತೆರಿಗೆ ಹಾಕಬೇಕಿದೆ ಎಂದು ಟ್ರಂಪ್‌ ಕೇಳಿದ್ದಾಗಿ ಅಮೆರಿಕದ ಅಧಿಕಾರಿಗಳನ್ನು ಉಲ್ಲೇಖಿಸಿ ಫೈನಾನ್ಷಿಯಲ್‌ ಟೈಮ್ಸ್‌ ಪತ್ರಿಕೆ ವರದಿ ಮಾಡಿದೆ.

ಚೀನಾದವರು ರಷ್ಯಾದಿಂದ ತೆರಿಗೆ ಖರೀದಿ ನಿಲ್ಲಿಸುವವರೆಗೂ ನಾವು ಭಾರೀ ತೆರಿಗೆ ವಿಧಿಸೋಣ. ಆಗ ರಷ್ಯಾಗೆ ತೈಲ ಮಾರಾಟ ಮಾಡಲು ಹೆಚ್ಚಿನ ಅವಕಾಶವೇ ಉಳಿಯುವುದಿಲ್ಲ ಎಂದು ಟ್ರಂಪ್‌ ಹೇಳಿದ್ದಾಗಿ ಅಮೆರಿಕದ ಅಧಿಕಾರಿಗಳ ಮೂಲಗಳು ತಿಳಿಸಿವೆ ಎಂದು ಪತ್ರಿಕೆ ಹೇಳಿದೆ.

ಈಗಾಗಲೇ ಭಾರತದ ಮೇಲೆ ಅಮೆರಿಕವು ಶೇ.50ರಷ್ಟು ತೆರಿಗೆ ವಿಧಿಸಿದೆ. ಆದರೆ ಭಾರತ ಮಾತ್ರ ಈ ತೆರಿಗೆಗೆ ಕ್ಯಾರೇ ಅನ್ನದೆ ರಷ್ಯಾದಿಂದ ತೈಲ ಖರೀದಿ ಮುಂದುವರಿಸಿದೆ. ಜತೆಗೆ, ಯುರೋಪಿಯನ್‌ ರಾಷ್ಟ್ರಗಳು, ಟರ್ಕಿ, ಚೀನಾ ಕೂಡ ರಷ್ಯಾದಿಂದ ತೈಲ, ಗ್ಯಾಸ್‌ ಖರೀದಿಸುತ್ತಿವೆ. ಸ್ವತಃ ಅಮೆರಿಕ ಕೂಡ ರಷ್ಯಾ ಜತೆಗೆ ವ್ಯಾಪಾರ ವಹಿವಾಟು ನಡೆಸುತ್ತಿದೆ. ಹೀಗಿದ್ದಾಗ ನಮ್ಮ ಮೇಲಷ್ಟೇ ಯಾಕೆ ತೆರಿಗೆ ಎಂದು ಭಾರತ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ಈ ತೆರಿಗೆಯು ಭಾರತ ಮತ್ತು ಅಮೆರಿಕದ ನಡುವಿನ ಎರಡು ದಶಗಳ ಸಂಬಂಧ ಹದಗೆಡಿಸಿದೆ.

PREV
Read more Articles on

Recommended Stories

ಎಲ್ಲೆಡೆ ಅರಾಜಕತೆ, ಭಯವಾಗ್ತಿದೆ: ಬೆಂಗಳೂರು ಪ್ರವಾಸಿಗಳ ಅಳಲು
ಮೋದಿ ಜತೆ ಮಾತನಾಡಲು ಉತ್ಸುಕ: ಟ್ರಂಪ್‌