ಇಮ್ರಾನ್ ಖಾನ್‌ಗೆ 10 ವರ್ಷ ಜೈಲು

KannadaprabhaNewsNetwork |  
Published : Jan 31, 2024, 02:17 AM ISTUpdated : Jan 31, 2024, 12:51 PM IST
ಇಮ್ರಾನ್‌ ಖಾನ್‌ | Kannada Prabha

ಸಾರಾಂಶ

ರಾಜತಾಂತ್ರಿಕ ರಹಸ್ಯಗಳನ್ನು ಬಹಿರಂಗಗೊಳಿಸಿದ್ದ ಸೈಫರ್‌ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ಗೆ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

ಇಸ್ಲಾಮಾಬಾದ್‌: ರಾಷ್ಟ್ರದ ರಾಜತಾಂತ್ರಿಕ ರಹಸ್ಯಗಳನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಿದ ಪ್ರಕರಣದಲ್ಲಿ (ಸೈಫರ್‌ ಪ್ರಕರಣ) ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಮತ್ತು ತೆಹ್ರೀಕ್‌ ಇ ಇನ್ಸಾಫ್‌ ಪಕ್ಷದ ಉಪಾಧ್ಯಕ್ಷ ಷಾ ಮಹಮ್ಮೂದ್‌ ಖುರೇಷಿ ಅವರಿಗೆ ತಲಾ 10 ವರ್ಷ ಜೈಲುಶಿಕ್ಷೆ ವಿಧಿಸಲಾಗಿದೆ.

 ಪ್ರಸ್ತುತ ಇಮ್ರಾನ್‌ ಖಾನ್‌ ಸೆರೆವಾಸ ಅನುಭವಿಸುತ್ತಿರುವ ರಾವಲ್ಪಿಂಡಿಯ ಅಡಿಯಾಲಾ ಕಾರಾಗೃಹದಲ್ಲಿ ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಪೀಠದ ನ್ಯಾ. ಅಬ್ದುಲ್‌ ಹಸ್ನತ್‌ ಜುಲ್ಕರ್‌ನೈನ್‌, ಇಬ್ಬರಿಗೂ ತಲಾ 10 ವರ್ಷಗಳ ಕಾಲ ಜೈಲುಶಿಕ್ಷೆ ವಿಧಿಸಿದರು.

ಏನಿದು ಪ್ರಕರಣ?
ಇಮ್ರಾನ್‌ ಖಾನ್‌ ಅವರು ಮಾ.27, 2022ರಂದು ಸಾರ್ವಜನಿಕ ಸಮಾರಂಭದಲ್ಲಿ ಸರ್ಕಾರಿ ದಾಖಲೆಯೊಂದನ್ನು ಬಹಿರಂಗವಾಗಿ ಪ್ರದರ್ಶಿಸಿ, ‘ಅಮೆರಿಕ ಸರ್ಕಾರವು ತಮ್ಮ ನೇತೃತ್ವದ ಪಾಕಿಸ್ತಾನ ಸರ್ಕಾರವನ್ನು ಉರುಳಿಸಲು ಹುನ್ನಾರ ನಡೆಸುತ್ತಿದೆ’ ಎಂದು ಆರೋಪಿಸಿದ್ದರು. 

ಸರ್ಕಾರಿ ದಾಖಲೆಯನ್ನು ಈ ರೀತಿ ಬಹಿರಂಗವಾಗಿ ಪ್ರದರ್ಶಿಸಿದ್ದು ವಿವಾದಕ್ಕೀಡಾಗಿತ್ತು,

ಇದಕ್ಕೂ ಮೊದಲು ಅವರಿಗೆ ತೋಶಾಖಾನಾ ಪ್ರಕರಣದಲ್ಲಿ 3 ವರ್ಷ ಜೈಲುಶಿಕ್ಷೆ ವಿಧಿಸಲಾಗಿತ್ತು. ಆದರೆ ಬಳಿಕ ಆ ಶಿಕ್ಷೆಗೆ ತಡೆಯಾಗಿತ್ತು.

PREV

Recommended Stories

ಯುದ್ಧದಲ್ಲಿ ಪರಸ್ಪರರಿಗೆ ಸಹಕಾರ : ಪಾಕಿಸ್ತಾನ - ಸೌದಿ ಅರೇಬಿಯಾ ಸಹಿ
ಪಾಕ್‌ ವಿರುದ್ಧ ಗೆದ್ದು ಪಹಲ್ಗಾಂ ಸಂತ್ರಸ್ತರು, ಸೇನೆಗೆ ಅರ್ಪಿಸಿದ ಭಾರತ ಕ್ರಿಕೆಟ್‌ ತಂಡ!