ಭಾರತೀಯ ನೌಕಾಪಡೆಯಿಂದ 19 ಪಾಕಿಸ್ತಾನಿಗಳ ರಕ್ಷಣೆ

KannadaprabhaNewsNetwork |  
Published : Jan 31, 2024, 02:17 AM IST
ಪಾಕಿಸ್ತಾನಿಯರ ರಕ್ಷಣೆ | Kannada Prabha

ಸಾರಾಂಶ

ಕಡಲ್ಗಳ್ಳರ ವಿರುದ್ಧ ಭಾರತ ಸಮರ ಮುಂದುವರಿಕೆ ಮಾಡಿದ್ದು, ಪಾಕಿಸ್ತಾನದ ಮೀನುಗಾರರನ್ನು ಭಾರತೀಯ ನೌಕಾಪಡೆ ಸುಮಿತ್ರಾ ರಕ್ಷಿಸಿದೆ.

ನವದೆಹಲಿ: ಸೊಮಾಲಿಯಾದ ಪೂರ್ವ ತೀರದಲ್ಲಿ ಕಡಲ್ಗಳ್ಳರ ದಾಳಿಗೆ ತುತ್ತಾಗಿದ್ದ ಮೀನುಗಾರಿಕೆ ಹಡಗಿನಲ್ಲಿದ್ದ 19 ಮಂದಿ ಪಾಕಿಸ್ತಾನಿ ಮೀನುಗಾರರನ್ನು ನೌಕಾಪಡೆಯ ಐಎಸ್‌ಎಸ್‌ ಸುಮಿತ್ರಾ ನೌಕೆ ರಕ್ಷಿಸಿದೆ.

ಇರಾನ್‌ ಒಡೆತನದ ಅಲ್‌ ನಯೀಮಿ ಹಡಗಿನ ಮೇಲೆ ಮಂಗಳವಾರ ಸೊಮಾಲಿಯಾ ಕಡಲ್ಗಳ್ಳರು ದಾಳಿ ಮಾಡಿದ್ದರು. ಈ ವೇಳೆ ರಕ್ಷಣಾ ಕಾರ್ಯಾಚರಣೆ ಕೈಗೊಂಡ ಭಾರತದ ನೌಕೆ ಮೀನುಗಾರರನ್ನು ರಕ್ಷಣೆ ಮಾಡಿದೆ. ಸೋಮಾಲಿಯಾ ಮತ್ತು ಏಡನ್ ಕೊಲ್ಲಿಯಲ್ಲಿ ಕಡಲ್ಗಳ್ಳರ ದಾಳಿಯಿಂದ ಹಡಗುಗಳನ್ನು ರಕ್ಷಣೆ ಮಾಡಲು ಐಎನ್‌ಎಸ್‌ ಸುಮಿತ್ರಾ ನೌಕೆಯಲ್ಲಿ ಭಾರತೀಯ ನೌಕಾಪಡೆ ನಿಯೋಜನೆ ಮಾಡಿದೆ. ‘ಐಎಸ್‌ಎಸ್‌ ಸುಮಿತ್ರಾ ಹಡಗು ಕಳೆದ 2 ದಿನಗಳಲ್ಲಿ 2 ಇರಾನ್‌ ಹಡಗುಗಳನ್ನು ಕಡಲ್ಗಳ್ಳರಿಂದ ರಕ್ಷಿಸಿದ್ದು, 17 ಇರಾನ್‌ ಮತ್ತು 19 ಮಂದಿ ಪಾಕಿಸ್ತಾನದವರು ಸೇರಿ 36 ಮಂದಿಯನ್ನು ರಕ್ಷಿಸಿದೆ. ಮತ್ತೊಮ್ಮೆ ಭಾರತೀಯ ನೌಕಾಪಡೆ ಈ ಪ್ರದೇಶದಲ್ಲಿ ರಕ್ಷಣೆ ಒದಗಿಸುವ ತಮ್ಮ ಕ್ಷಮತೆಯನ್ನು ಸಾಬೀತು ಮಾಡಿದೆ ಎಂದು ಭಾರತೀಯ ನೌಕಾಪಡೆಯ ಕಮಾಂಡರ್‌ ವಿವೇಕ್‌ ಮಾಧ್ವಾಲ್‌ ಹೇಳಿದ್ದಾರೆ.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.

Recommended Stories

ಕ್ಸಿಗೆ 100 ಅಡಿ ಉದ್ದದ ಕೆಂಪು ಹಾಸು ಹಾಕಿ ಟ್ರಂಪ್‌ ಸ್ವಾಗತ
ಚೀನಾಕ್ಕೆ ಭಾರತ ಉತ್ಪನ್ನ ರಫ್ತು ಶೇ.40ರಷ್ಟು ಹೆಚ್ಚಳ!