ಇರಾನ್‌ ಬದಲು ವೆನಿಜುವೆಲಾದಿಂದ ಭಾರತ ತೈಲ ಖರೀದಿ : ಅಧ್ಯಕ್ಷ ಟ್ರಂಪ್‌

Published : Feb 02, 2026, 06:13 AM IST
 Donald Trump

ಸಾರಾಂಶ

‘ಇರಾನ್‌ನ ತೈಲ ಖರೀದಿಗೆ ನಾವು ವಿರೋಧಿಸಿದ್ದರಿಂದ ಭಾರತ ಇನ್ನು ವೆಜಿಜುವೆಲಾದಿಂದ ತೈಲ ಖರೀದಿಸಲಿದೆ’. ಚೀನಾಕ್ಕೆ ಒಳಬರಲು ಸ್ವಾಗತ. ಅದು ನಮ್ಮ ಜೊತೆ ಮಹತ್ವದ ತೈಲ ಒಪ್ಪಂದ ಮಾಡಿಕೊಳ್ಳಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಶನಿವಾರ ಹೇಳಿದ್ದಾರೆ.

ನ್ಯೂಯಾರ್ಕ್‌: ‘ಇರಾನ್‌ನ ತೈಲ ಖರೀದಿಗೆ ನಾವು ವಿರೋಧಿಸಿದ್ದರಿಂದ ಭಾರತ ಇನ್ನು ವೆಜಿಜುವೆಲಾದಿಂದ ತೈಲ ಖರೀದಿಸಲಿದೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಶನಿವಾರ ಹೇಳಿದ್ದಾರೆ.

ಚೀನಾಕ್ಕೆ ಒಳಬರಲು ಸ್ವಾಗತ.

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಚೀನಾಕ್ಕೆ ಒಳಬರಲು ಸ್ವಾಗತ. ಅದು ನಮ್ಮ ಜೊತೆ ಮಹತ್ವದ ತೈಲ ಒಪ್ಪಂದ ಮಾಡಿಕೊಳ್ಳಬಹುದು. ಭಾರತ ಈಗಾಗಲೇ ಒಳಬರುತ್ತಿದೆ. ಇರಾನಿನ ತೈಲ ಖರೀದಿಯನ್ನು ವಿರೋಧಿಸಿದ್ದರಿಂದ, ಭಾರತ ಇರಾನ್‌ ಬದಲು ವೆನಿಜುವೆಲಾದಿಂದ ಖರೀದಿಸಲಿದೆ. ನಾವು ಈಗಾಗಲೇ ಒಪ್ಪಂದ ಮಾಡಿಕೊಂಡಿದ್ದೇವೆ’ ಎಂದಿದ್ದಾರೆ.

ಕಾಂಗ್ರೆಸ್‌ ಟೀಕೆ:

ಟ್ರಂಪ್‌ ಹೇಳಿಕೆ ಮುಂದಿಟ್ಟುಕೊಂಡು ಸರ್ಕಾರವನ್ನು ಟೀಕಿಸಿರುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್, ‘ಆಪರೇಷನ್ ಸಿಂದೂರ ಮತ್ತು ರಷ್ಯಾ ತೈಲ ಖರೀದಿ ನಿಲ್ಲಿಸಿದ್ದಾಗಿ ಟ್ರಂಪ್ ಹೇಳುತ್ತಿದ್ದರು. ಈಗ ಇದನ್ನು ಹೇಳುತ್ತಿದ್ದಾರೆ. ನಮ್ಮ ಸರ್ಕಾರ ಏನು ಮಾಡಿದೆ ಅಥವಾ ಮಾಡಲಿದೆ ಎಂಬುದರ ಕುರಿತು ಟ್ರಂಪ್ ನಮಗೆ ಮಾಹಿತಿಯನ್ನು ನೀಡುತ್ತಲೇ ಇದ್ದಾರೆ’ ಎಂದು ಟೀಕಿಸಿದ್ದಾರೆ.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.
Read more Articles on

Recommended Stories

ಭಾರತ-ಇಯು ಡೀಲ್‌ : ಪಾಕ್‌ ಜವಳಿಗೆ 5 ಲಕ್ಷ ಕೋಟಿ ಶಾಕ್‌
ಈ ಸಲ ವಿನಾಶಕಾರಿ ದಾಳಿ: ಇರಾನ್‌ಗೆ ಟ್ರಂಪ್‌ ಎಚ್ಚರಿಕೆ