ಮತ್ತೆ ಇರಾನ್‌ - ಅಮೆರಿಕ ಪರಸ್ಪರ ದಾಳಿ

Published : Jun 29, 2026, 10:44 AM IST
 us iran ceasefire qatar talks strait of hormuz peace deal nuclear dispute

ಸಾರಾಂಶ

ಅಮೆರಿಕ ಹಾಗೂ ಇರಾನ್‌ ನಡುವಿನ ಶಾಂತಿ ಒಪ್ಪಂದ ಪುನಃ ತೂಗುಯ್ಯಾಲೆಯಲ್ಲಿದ್ದು, ಭಾನುವಾರವೂ ಎರಡೂ ದೇಶಗಳು ದಾಳಿ-ಪ್ರತಿದಾಳಿ ಮುಂದುವರಿಸಿವೆ. ಇರಾನ್‌ನ 10 ಕಡೆ ಅಮೆರಿಕ ದಾಳಿ ಮಾಡಿದ್ದರೆ, ಅಮೆರಿಕದ ಮಿತ್ರದೇಶಗಳಾದ ಬಹ್ರೇನ್‌ ಹಾಗೂ ಕುವೈತ್‌ ಮೇಲೆ ಇರಾನ್‌ ಆಕ್ರಮಣಮಾಡಿದೆ.

ಟೆಹ್ರಾನ್‌: ಅಮೆರಿಕ ಹಾಗೂ ಇರಾನ್‌ ನಡುವಿನ ಶಾಂತಿ ಒಪ್ಪಂದ ಪುನಃ ತೂಗುಯ್ಯಾಲೆಯಲ್ಲಿದ್ದು, ಭಾನುವಾರವೂ ಎರಡೂ ದೇಶಗಳು ದಾಳಿ-ಪ್ರತಿದಾಳಿ ಮುಂದುವರಿಸಿವೆ. ಇರಾನ್‌ನ 10 ಕಡೆ ಅಮೆರಿಕ ದಾಳಿ ಮಾಡಿದ್ದರೆ, ಅಮೆರಿಕದ ಮಿತ್ರದೇಶಗಳಾದ ಬಹ್ರೇನ್‌ ಹಾಗೂ ಕುವೈತ್‌ ಮೇಲೆ ಇರಾನ್‌ ಆಕ್ರಮಣಮಾಡಿದೆ.

ಹೋರ್ಮುಜ್‌ ಜಲಸಂಧಿಯಲ್ಲಿ ಸಾಗುತ್ತಿದ್ದ ಪನಾಮಾ ಧ್ವಜ ಹೊಂದಿದ್ದ ಕಿಕು ಹೆಸರಿನ ತೈಲ ಟ್ಯಾಂಕರ್‌ ಮೇಲೆ ಇರಾನ್‌ ದಾಳಿ ನಡೆಸಿದೆ ಎಂದು ಆರೋಪಿಸಿ ಅಮೆರಿಕ ಆ ರಾಷ್ಟ್ರದ ಹಲವು ಪ್ರದೇಶಗಳ ಮೇಲೆ ಶನಿವಾರ ರಾತ್ರಿ ದಾಳಿ ಮಾಡಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಅಮೆರಿಕ ಸೇನೆ, ‘ಕದನವಿರಾಮವನ್ನು ಗೌರವಿಸಲು ಇರಾನ್‌ಗೆ ಒಂದು ಅವಕಾಶ ಕೊಡಬೇಕು ಎಂದುಕೊಂಡಿದ್ದೆವು. ಆದರೆ ಕಿಕು ಮೇಲಿನ ದಾಳಿಯ ಬಳಿಕ ನಿರ್ಧಾರ ಬದಲಿಸಿದೆವು. ಇರಾನ್‌ನ ಕಣ್ಗಾವಲು ಉಪಕರಣಗಳು, ಸಂವಹನ ವ್ಯವಸ್ಥೆ, ವಾಯುರಕ್ಷಣಾ ನೆಲೆ, ಡ್ರೋನ್‌ ಸಂಗ್ರಹಗಾರ ಸೇರಿ 10 ಗುರಿಗಳನ್ನು ಉಡಾಯಿಸಲಾಗಿದೆ’ ಎಂದು ಹೇಳಿದೆ ಹಾಗೂ ಇದರ 38 ಸೆಕೆಂಡುಗಳ ವಿಡಿಯೋವನ್ನು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದೆ.

ಇದರ ಬೆನ್ನಲ್ಲೇ ಇರಾನ್‌ನ ಅರೆಸೇನಾಪಡೆಯಾಗಿರುವ ಐಆರ್‌ಜಿಸಿ, ಕುವೈತ್‌ ಮತ್ತು ಬಹ್ರೇನ್‌ ಅನ್ನು ಗುರಿಯಾಗಿಸಿ ಆಕ್ರಮಣ ಮಾಡಿದೆ.

ಟ್ರಂಪ್-ಇರಾನ್‌ ಪರಸ್ಪರ ಸರ್ವನಾಶದ ಎಚ್ಚರಿಕೆ

ತಮ್ಮ ಮಿತ್ರರಾಷ್ಟ್ರಗಳ ಮೇಲೆ ಇರಾನ್‌ ದಾಳಿ ಮಾಡುತ್ತಿದ್ದಂತೆ ಕೆಂಡವಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ‘ಇರಾನ್‌ ಬುದ್ಧಿ ಕಲಿಯುವಂತೆ ಕಾಣಿಸುತ್ತಿಲ್ಲ. ಯುದ್ಧವನ್ನು ಪುನಃ ಆರಂಭಿಸಲು ಅಮೆರಿಕವನ್ನು ಒತ್ತಾಯಿಸಿದರೆ ಇರಾನ್‌ ಅಸ್ತಿತ್ವದಲ್ಲೇ ಇರುವುದಿಲ್ಲ’ ಎಂದು ಕೆಂಡ ಕಾರಿದ್ದಾರೆ.

ಈ ಬೆದರಿಕೆಗೆ ಬಗ್ಗದ ಇರಾನ್‌ ಸೇನೆ, ‘ಹೋರ್ಮುಜ್‌ ತೀರದಲ್ಲಿರುವ ಸಿರಿಕ್ ಮೇಲೆ ಅಮೆರಿಕ ಕುರುಡುದಾಳಿ ಮಾಡಿದ ಮಾತ್ರಕ್ಕೆ ಆ ಜಲಸಂಧಿ ಮೇಲಿನ ನಮ್ಮ ನಿಯಂತ್ರಣ ತಗ್ಗುವುದಿಲ್ಲ. ಬದಲಿಗೆ, ಆ ಮಾರ್ಗವಾಗಿ ಸಾಗುವ ದುಸ್ಸಾಹಸ ಮಾಡುವ ಹಡಗುಗಳಿಗೆ, ನಾವು ವಿಧಿಸಿರುವ ನಿಯಮಗಳನ್ನು ನೆನಪಿಸುತ್ತದೆ. ಗಲ್ಫ್‌ ಭಾಗದಲ್ಲಿರುವ ಅಮೆರಿಕದ ಸೇನಾ ನೆಲೆಗಳು ಮುಂದಿನ ದಿನಗಳಲ್ಲಿ ನರಕದರ್ಶನ ಮಾಡಲಿವೆ’ ಎಂದು ಎಚ್ಚರಿಕೆ ನೀಡಿದೆ.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.
Read more Articles on

Recommended Stories

ಬಿಸಿಗಾಳಿಗೆ ನದಿಗಳೇ ಬಿಸಿ, ಫ್ರಾನ್ಸ್‌ನಲ್ಲಿ 1000 ಸಾವು ! - ಉಷ್ಣಮಾರುತಕ್ಕೆ ತತ್ತರಿಸಿದ ಯುರೋಪ್‌
ತಮ್ಮದೇ ಇಲಾಖೆಯಿಂದ ₹1 ಕೋಟಿ ಸೌತೆಕಾಯಿ ಸಬ್ಸಿಡಿ ಪಡೆದು ಕೇಂದ್ರ ಸಚಿವ ಚೌಧರಿ ವಿವಾದ!