ಪಾಕಿಸ್ತಾನ ರಾಜಧಾನಿಯಲ್ಲಿ ಲಷ್ಕರ್ ಎ ತೊಯ್ಬಾ ಉಗ್ರಗಾಮಿ ಸಂಘಟನೆಯ ಕಮಾಂಡರ್‌ ಖಾರಿ ಅಬ್ದುಲ್‌ ಅಜೀಜ್‌ ನಿಗೂಢವಾಗಿ ಸಾವನ್ನಪ್ಪಿದ್ದಾನೆ. ಪಾಕ್‌ನಲ್ಲಿ ನಮ್ಮ ಸಂಘಟನೆಯ ಸುಮಾರು 30 ಮಂದಿ ಸಾವನ್ನಪ್ಪಿದ್ದಾರೆ’ ಎಂದು ಸಾರ್ವಜನಿಕವಾಗಿ ಭಾರತದತ್ತ ಬೊಟ್ಟು ಮಾಡಿದ್ದ

 ಇಸ್ಲಾಮಾಬಾದ್‌: ಪಾಕಿಸ್ತಾನ ರಾಜಧಾನಿಯಲ್ಲಿ ಲಷ್ಕರ್ ಎ ತೊಯ್ಬಾ ಉಗ್ರಗಾಮಿ ಸಂಘಟನೆಯ ಕಮಾಂಡರ್‌ ಖಾರಿ ಅಬ್ದುಲ್‌ ಅಜೀಜ್‌ ನಿಗೂಢವಾಗಿ ಸಾವನ್ನಪ್ಪಿದ್ದಾನೆ.

ಭಾರತದತ್ತ ಬೊಟ್ಟು ಮಾಡಿದ್ದ

ಇತ್ತೀಚೆಗಷ್ಟೇ ಲಷ್ಕರ್‌ನ ಉಗ್ರನೊಬ್ಬ, ‘ಧುರಂಧರ್ ಸಿನಿಮಾ ಶೈಲಿಯಲ್ಲಿ ಅಪರಿಚಿತ ಬಂದೂಕುಧಾರಿಗಳ ಗುಂಡಿಗೆ ಪಾಕ್‌ನಲ್ಲಿ ನಮ್ಮ ಸಂಘಟನೆಯ ಸುಮಾರು 30 ಮಂದಿ ಸಾವನ್ನಪ್ಪಿದ್ದಾರೆ’ ಎಂದು ಸಾರ್ವಜನಿಕವಾಗಿ ಭಾರತದತ್ತ ಬೊಟ್ಟು ಮಾಡಿದ್ದ. ಅದರ ಬೆನ್ನಲ್ಲೇ ಈ ಬೆಳವಣಿಗೆಯಾಗಿದೆ.

ಅಪರಿಚಿತ ರೆಸ್ಟೋರೆಂಟ್‌ ಒಂದರಲ್ಲಿ ಊಟ

ಇಸ್ಲಾಮಾಬಾದ್‌ನ ಅಪರಿಚಿತ ರೆಸ್ಟೋರೆಂಟ್‌ ಒಂದರಲ್ಲಿ ಊಟ ಮುಗಿಸಿಕೊಂಡು ಪ್ರಾರ್ಥನೆ ಸಲ್ಲಿಸಲೆಂದು ಖುಬಾ ಮಸೀದಿಗೆ ಲಷ್ಕರ್‌ ಕಮಾಂಡರ್‌ ಖಾರಿ ಬಂದಿದ್ದ. ಅಲ್ಲಿ ಪ್ರವೇಶದ್ವಾರದಲ್ಲೇ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಆತನ ಸಾವಿಗೆ ನಿಖರ ಕಾರಣ ಪತ್ತೆಯಾಗಿಲ್ಲ.

ಈತ ಜಮ್ಮು-ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಎನ್‌ಕೌಂಟರ್‌ಗೆ ಬಲಿಯಾದ ಉಗ್ರರ ಕುಟುಂಬಗಳಿಗೆ ನೆರವು ನೀಡುವ ಜವಾಬ್ದಾರಿ ಹೊತ್ತಿದ್ದ.