;Resize=(412,232))
ಟೆಹ್ರಾನ್: ಹೋರ್ಮುಜ್ ಜಲಸಂಧಿಯನ್ನು ದಾಟುತ್ತಿದ್ದ ಭಾರತದ ಹಡಗಿನ ಮೇಲೆ ಶನಿವಾರ ಇರಾನ್ ಗುಂಡಿನ ದಾಳಿ ನಡೆಸಿದ ವೇಳೆ ಹಡಗಿನ ಚಾಲಕ ಮತ್ತು ಇರಾನ್ ಯೋಧರ ನಡುವೆ ನಡೆದ ದೂರವಾಣಿ ಸಂಭಾಷಣೆಯ ಆಡಿಯೋ ಭಾನುವಾರ ಬಿಡುಗಡೆಯಾಗಿದೆ
ಅದರಲ್ಲಿ ಹಡಗಿನ ನಾವಿಕ, ‘ನಮಗೆ ಹೋಗಲು ನೀವು ಈಗಾಗಲೇ ಅನುಮತಿ ನೀಡಿದ್ದೀರಿ. ಗುಂಡು ಹಾರಿಸಬೇಡಿ. ಏಕೆ ಹಾರಿಸುತ್ತಿದ್ದೀರಿ?’ ಎಂದು ಇರಾನ್ ಅರೆಸೇನಾಪಡೆಯಾದ ರೆವಲ್ಯೂಷನರಿ ಗಾರ್ಡ್ಸ್‌ನ ಯೋಧರ ಜೊತೆ ಮಾತುಕತೆ ನಡೆಸಿದ ವಿವರಗಳಿವೆ.
ಆಡಿಯೋದಲ್ಲಿ ‘ಸೆಪಾ ನೇವಿ. ಸೆಪಾ ನೇವಿ. ಇದು ಮೋಟಾರ್ ಟ್ಯಾಂಕರ್ ಸನ್‌ಮಾರ್ ಹೆರಾಲ್ಡ್. ನೀವು ನನಗೆ ಹೋಗಲು ಕ್ಲಿಯರೆನ್ಸ್ ನೀಡಿದ್ದೀರಿ. ನನ್ನ ಹೆಸರು ನಿಮ್ಮ ಲಿಸ್ಟ್‌ನಲ್ಲಿ ಎರಡನೇದು. ನೀವು ಈಗ ಗುಂಡು ಹಾರಿಸುತ್ತಿದ್ದೀರಿ. ನನಗೆ ಹಿಂದಕ್ಕೆ ತಿರುಗಲು ಅವಕಾಶ ಕೊಡಿ’ ಎನ್ನುವುದನ್ನು ಕೇಳಬಹುದು.
ನವದೆಹಲಿ: ಹೋರ್ಮುಜ್ ಜಲಸಂಧಿ ಬಳಿ ಶನಿವಾರ ಭಾರತದ ಹಡಗಿನ ಮೇಲೆ ನಡೆದ ದಾಳಿ ಉದ್ದೇಶಪೂರ್ವಕ ಅಲ್ಲ. ಸಂವಹನ ಕೊರತೆಯಿಂದಾಗಿ ಈ ಘಟನೆ ಸಂಭವಿಸಿದೆ ಎಂದು ಇರಾನ್ ಸ್ಪಷ್ಟನೆ ನೀಡಿದೆ.
ಶನಿವಾರದ ಘಟನೆ ಬೆನ್ನಲ್ಲೇ ಭಾರತದ ವಿದೇಶಾಂಗ ಸಚಿವಾಲಯವು, ನವದೆಹಲಿಯಲ್ಲಿನ ಇರಾನ್ ರಾಯಭಾರಿಯನ್ನು ಕರೆಸಿ ತನ್ನ ಅಸಮಾಧಾನ ವ್ಯಕ್ತಪಡಿಸಿತ್ತು. ಈ ವೇಳೆ ‘ಭಾರತದತ್ತ ಹೊರಟಿದ್ದ 21 ಹಡಗುಗಳ ಕುರಿತು ಮೊದಲೇ ಪಟ್ಟಿ ನೀಡಿ ಅವುಗಳ ಸುಗಮ ಸಂಚಾರಕ್ಕೆ ಅವಕಾಶ ಕೋರಲಾಗಿತ್ತು. ಇದರ ಹೊರತಾಗಿಯೂ ಅವುಗಳ ಮೇಲೆ ದಾಳಿಯ ಪರಿಣಾಮ ಅವು ವಾಪಸ್ ತೆರಳುವಂತಾಯಿತು’ ಎಂದು ಹಿರಿಯ ಅಧಿಕಾರಿಗಳು ಪ್ರಸ್ತಾಪ ಮಾಡಿದ್ದಾರೆ. ಆಗ, ‘ಇದು ಉದ್ದೇಶಪೂರ್ವಕವಲ್ಲ. ಸಂವಹನ ಕೊರತೆಯಿಂದ ದಾಳಿ ಆಗಿದೆ’ ಎಂದು ರಾಯಭಾರಿ ಉತ್ತರಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಭಾರತ, ‘ಈ ಹಂತದಲ್ಲಿ ಹಡಗುಗಳ ಸಂಚಾರಕ್ಕೆ ಅನುಮತಿ ನೀಡುವ ಮೊದಲು ಒಮ್ಮೆ ನಿಮ್ಮ ಕೇಂದ್ರ ಕಚೇರಿಯ ಜೊತೆ ಸಂವಹನ ನಡೆಸಿ. ಬಳಿಕವಷ್ಟೇ ಅನುಮತಿ ನೀಡಿ. ಇದರಿಂದ ಗೊಂದಲ ತಪ್ಪುತ್ತದೆ’ ಎಂದು ಇರಾನ್ ರಾಯಭಾರಿಗೆ ಸಲಹೆ ನೀಡಿದೆ