- ಭೀಕರ ದಾಳಿಯ ಎಚ್ಚರಿಕೆ ನಡುವೆ ದಿಢೀರ್ ದಾಳಿ ಸ್ಥಗಿತ- ಸತತ ಯುದ್ಧದ ಕಾರಣ ಕ್ಷಿಪಣಿ, ಡ್ರೋನ್ ಸಂಗ್ರಹ ಖಾಲಿಕದನವಿರಾಮ ಹೊರತಾಗಿಯೂ ಇತ್ತೀಗೆ ಹೋರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಮೇಲೆ ಇರಾನ್ ದಾಳಿ
ಇದರಿಂದ ಆಕ್ರೋಶಗೊಂಡ ಅಮೆರಿಕ. ಇರಾನ್‌ನ ಮೂಲಸೌಕರ್ಯಗಳ ಮೇಲೆ 13 ದಿನಗಳಿಂದ ಸತತ ದಾಳಿಜೊತೆಗೆ ಜಲಸಂಧಿಯಲ್ಲಿ ಹಡಗಿನ ಮೇಲೆ ದಾಳಿ ನಡೆಸಿದರೆ ಮತ್ತಷ್ಟು ಭೀಕರ ದಾಳಿ ಎಚ್ಚರಿಕೆ ನೀಡಿದ್ದ ಟ್ರಂಪ್
ಆದರೆ ಇದೀಗ ದಿಢೀರನೆ ದಾಳಿಗೆ ಸ್ಥಗಿತಕ್ಕೆ ಅಧ್ಯಕ್ಷ ಟ್ರಂಪ್. ಶಸ್ತ್ರಾಸ್ತ್ರ ಕೊರತೆ ಕಾರಣ ಈ ನಿರ್ಧಾರ ಪ್ರಕಟಸತತ 5 ತಿಂಗಳ ದಾಳಿಯ ಪರಿಣಾಮ ಅಮೆರಿಕದ ಪ್ರಮುಖ ಕ್ಷಿಪಣಿ, ಡ್ರೋನ್‌ಗಳ ಸಂಗ್ರಹ ಬಹುತೇಕ ಖಾಲಿ
ಹೀಗಾಗಿ ಮಾತುಕತೆಯ ಹೆಸರಲ್ಲಿ ದಾಳಿ ಸ್ಥಗಿತಕ್ಕೆ ಟ್ರಂಪ್ ಸೂಚನೆ: ಅಮೆರಿಕದ ಹಲವು ಮಾಧ್ಯಮ ವರದಿ
---
ವಾಷಿಂಗ್ಟನ್: ಸತತ 13 ದಿನಗಳ ಬಳಿಕ ಇರಾನ್ ಮೇಲಿನ ದಾಳಿಗೆ ಅಮೆರಿಕ ಅಲ್ಪವಿರಾಮ ಹಾಕಿದೆ. ಅಮೆರಿಕದ ಕ್ಷಿಪಣಿ ದಾಸ್ತಾನು ಕ್ಷೀಣಿಸುತ್ತಿರುವುದು ಹಾಗೂ ಮಧ್ಯ ಪ್ರಾಚ್ಯ ಸಂಘರ್ಷ ಇನ್ನಷ್ಟು ವಿಸ್ತರಣೆಗೊಳ್ಳುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ.ಇರಾನ್ ಮೇಲೆ ಅಮೆರಿಕವು ಸತತ 2 ವಾರಗಳಿಂದ ನಿರಂತರ ದಾಳಿ ನಡೆಸುತ್ತಿತ್ತು ಆದರ ದಾಳಿ ನಡೆಸದಂತೆ ಟ್ರಂಪ್ ಶುಕ್ರವಾರ ಸೂಚನೆ ನೀಡಿದ್ದಾರೆ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಕದನ ನಿಲ್ಲಿಸಲಾಗಿದೆ. ಕೆಲ ಮೂಲಗಳ ಪ್ರಕಾರ ಇರಾನ್ ಜತೆಗೆ ಮಾತುಕತೆಗೆ ಅನುವು ಮಾಡಿಕೊಡಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ. ಆದರೆ ಇನ್ನು ಕೆಲವು ಮೂಲಗಳು ಕ್ಷಿಪಣಿ ಸಂಗ್ರಹ ಕುಸಿತದ ಕಾರಣ ನೀಡಿವೆ.
ಕುಸಿತಗೊಂಡ ಕ್ಷಿಪಣಿ ಸಂಗ್ರಹ:ಇರಾನ್ ಮೇಲಿನ ದಾಳಿಯಿಂದಾಗಿ ಅಮೆರಿಕದ ಕ್ಷಿಪಣಿಗಳ ಸ್ಟಾಕ್ ತೀವ್ರ ಕುಸಿತಗೊಂಡಿದೆ. ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಅಳವಡಿಸಲಾಗಿರುವ ಪೇಟ್ರಿಯಾಟ್ ಇಂಟರ್‌ಸೆಪ್ಟರ್ ಕ್ಷಿಪಣಿಗಳು ಮತ್ತು ವಾಯು ರಕ್ಷಣಾ ವ್ಯವಸ್ಥೆಗೆ ಇದರಿಂದ ಅಪಾಯದ ಆತಂಕ ಎದುರಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
‘ಕಡಿಮೆ ವೆಚ್ಚದ ಡ್ರೋನ್‌ಗಳನ್ನು ಬಳಸಿ ಇರಾನ್ ದಾಳಿ ನಡೆಸುತ್ತಿರುವುದು ಅಮೆರಿಕದ ಪಾಲಿಗೆ ತಲೆನೋವಾಗಿ ಪರಿಣಮಿಸಿದೆ. ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿರುವ ಅಮೆರಿಕ ಹಾಗೂ ಮಿತ್ರರಾಷ್ಟ್ರಗಳ ಸೇನಾ ನೆಲೆಗಳು ಕ್ಷಿಪಣಿಗಳ ಕೊರತೆಯು ಗಂಭೀರ ಅಪಾಯ ತಂದೊಡ್ಡುವ ಆತಂಕ ಎದುರಾಗಿದೆರೆ’ ಎಂದು ವರದಿ ಹೇಳಿದೆ.ಪತ್ರಿಕೆಯೊಂದರ ಪ್ರಕಾರ, ಈಗಾಗಲೇ ಅಮೆರಿಕವು 1,200ಕ್ಕೂ ಹೆಚ್ಚು ಪ್ಯಾಟ್ರಿಯಾಟ್ ಇಂಟರ್‌ಸೆಪ್ಟರ್ ಕ್ಷಿಪಣಿಗಳನ್ನು ಇರಾನ್ ವಿರುದ್ಧ ಬಳಸಿದೆ.