ರಷ್ಯಾದ ಆರ್ಥಿಕ ಶಕ್ತಿಯನ್ನು ಕುಂಠಿತಗೊಳಿಸುವ ಉದ್ದೇಶದಿಂದ ಜಾರಿಗೆ ತರಲಾದ ‘ರಷ್ಯಾ ನಿರ್ಬಂಧ ಮಸೂದೆ’ಗೆ ಅಮೆರಿಕ ಸಂಸತ್ತು ತಿದ್ದುಪಡಿ ತಂದಿದೆ. ಇದರಲ್ಲಿ, ರಷ್ಯಾದಿಂದ ತೈಲ ಖರೀದಿಸುವ ದೇಶಗಳ ಮೇಲೆ ಶೇ.500ರಷ್ಟು ವಿಧಿಸಲಾಗುತ್ತಿದ್ದ ತೆರಿಗೆಯನ್ನು, ಶೇ.100ಕ್ಕೆ ಇಳಿಸುವ ಪ್ರಸ್ತಾವ ಮಾಡಲಾಗಿದೆ.
ವಾಷಿಂಗ್ಟನ್ : ರಷ್ಯಾದ ಆರ್ಥಿಕ ಶಕ್ತಿಯನ್ನು ಕುಂಠಿತಗೊಳಿಸುವ ಉದ್ದೇಶದಿಂದ ಜಾರಿಗೆ ತರಲಾದ ‘ರಷ್ಯಾ ನಿರ್ಬಂಧ ಮಸೂದೆ’ಗೆ ಅಮೆರಿಕ ಸಂಸತ್ತು ತಿದ್ದುಪಡಿ ತಂದಿದೆ. ಇದರಲ್ಲಿ, ರಷ್ಯಾದಿಂದ ತೈಲ ಖರೀದಿಸುವ ದೇಶಗಳ ಮೇಲೆ ಶೇ.500ರಷ್ಟು ವಿಧಿಸಲಾಗುತ್ತಿದ್ದ ತೆರಿಗೆಯನ್ನು, ಶೇ.100ಕ್ಕೆ ಇಳಿಸುವ ಪ್ರಸ್ತಾವ ಮಾಡಲಾಗಿದೆ. ಇದು ಅಂಗೀಕಾರಗೊಂಡರೆ, ಭಾರತ ಹಾಗೂ ಚೀನಾಕ್ಕೆ ದೊಡ್ಡ ನಿರಾಳತೆ ತರುವ ಸಾಧ್ಯತೆ ಇದೆ.
4 ವರ್ಷದಿಂದ ಉಕ್ರೇನ್ ವಿರುದ್ಧ ರಷ್ಯಾ ಸಮರ
ಕಳೆದ 4 ವರ್ಷದಿಂದ ಉಕ್ರೇನ್ ವಿರುದ್ಧ ರಷ್ಯಾ ಸಮರ ನಡೆಸುತ್ತಿದೆ. ರಷ್ಯಾದ ಆರ್ಥಿಕತೆಯನ್ನು ಕುಂಠಿತಗೊಳಿಸಿದರೆ, ಯುದ್ಧ ನಿಲ್ಲಿಸಬಹುದು ಎಂಬ ಲೆಕ್ಕಾಚಾರದಲ್ಲಿ ಅಮೆರಿಕ ಕೆಲವು ಕಠಿಣ ನಿರ್ಬಂಧಗಳನ್ನು ಜಾರಿಗೆ ತಂದಿತ್ತು. ಅದರಲ್ಲಿ ರಷ್ಯಾದಿಂದ ತೈಲ ಖರೀದಿಸುವ ದೇಶಗಳ ಮೇಲೆ ಶೇ.500ರಷ್ಟು ಕಠಿಣ ತೆರಿಗೆ ವಿಧಿಸುವುದೂ ಸೇರಿತ್ತು. ಇದೀಗ ಆ ತೆರಿಗೆಯನ್ನು ಶೇ.100ಕ್ಕೆ ಇಳಿಸಲು ಪ್ರಸ್ತಾವಿಸಲಾಗಿದೆ. ಇದು ಜಾರಿಗೆ ಬಂದರೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಶೇ.100ರವರೆಗೆ ತೆರಿಗೆ ವಿಧಿಸುವ ಅಧಿಕಾರ ಸಿಗಲಿದೆ.
ಯಾರಿಗೆ ಲಾಭ?:
ಚೀನಾ, ಭಾರತ, ಸ್ಲೊವಾಕಿಯಾ, ಹಂಗರಿ ಮತ್ತು ಅಜರ್ಬೈಜಾನ್ ರಷ್ಯಾದಿಂದ ತೈಲ ಖರೀದಿಸುವ ಅಗ್ರ ದೇಶಗಳಾದರೆ, ಚೀನಾ, ಫ್ರಾನ್ಸ್, ಜಪಾನ್, ಹಂಗರಿ ಮತ್ತು ಬೆಲ್ಜಿಯಂ ಹೆಚ್ಚು ಅನಿಲ ಖರೀದಿಸುವ ದೇಶಗಳು. ತೆರಿಗೆಯನ್ನು ಇಳಿಸಿದರೆ ಭಾರತ ಸೇರಿದಂತೆ ಈ ದೇಶಗಳಿಗೆ ಲಾಭವಾಗಲಿದೆ.