ಜೆರುಸಲೇಂ: ಗಾಜಾ಼ದಲ್ಲಿ ನಾಗರಿಕರನ್ನು ಹತ್ಯೆಗೈಯ್ಯುವ ಮೂಲಕ ಅಂತಾರಾಷ್ಟ್ರೀಯ ಸಮುದಾಯದಿಂದ ಕಟುಟೀಕೆಗೆ ಗುರಿಯಾಗಿದ್ದ ಇಸ್ರೇಲ್ ಸೇನೆ ಇದೀಗ ತನ್ನ ಸೇನಾಪಡೆಗಳನ್ನು ಕ್ರಮೇಣ ಹಿಂಪಡೆಯಲು ಆರಂಭಿಸಿದೆ. ಹೀಗಾಗಿ ಇನ್ನು ಜನವಸತಿ ಪ್ರದೇಶಗಳ ಬದಲು ಉಗ್ರರ ಅಡಗುತಾಣಗಳ ಮೇಲಷ್ಟೇ ಇಸ್ರೇಲ್ ಗಮನ ಕೇಂದ್ರೀಕರಿಸುವ ಸಾಧ್ಯತೆ ಇದೆ.ಈ ಕುರಿತು ಮಾಹಿತಿ ನೀಡಿದ ಸೇನಾ ವಕ್ತಾರ ಡೇನಿಯಲ್ ಹಗಾರಿ, ‘ಉತ್ತರ ಗಾಜಾ಼ದಲ್ಲಿ ಬಹುತೇಕ ಭಾಗವನ್ನು ನಾವು ವಶಕ್ಕೆ ಪಡೆದಿದ್ದು, ಅಲ್ಲಿಂದ ನಮ್ಮ ಸೇನಾ ಪಡೆಗಳನ್ನು ಹಿಂಪಡೆಯಲು ನಿರ್ಧರಿಸಿದ್ದೇವೆ. ಇದರ ಭಾಗವಾಗಿ ಮೊದಲ ಹಂತದಲ್ಲಿ 5 ಬ್ರಿಗೇಡ್‌ಗಳಲ್ಲಿರುವ ಸಾವಿರಕ್ಕೂ ಅಧಿಕ ಟ್ರೂಪ್‌ಗಳನ್ನು ಹಿಂಪಡೆಯಲಾಗುವುದು. ಇದರಲ್ಲಿ ಬಹುತೇಕ ಮೀಸಲು ಪಡೆ ಯೋಧರಿದ್ದು’ ಎಂದರು.
‘ಇಸ್ರೇಲ್ ಆರ್ಥಿಕ ಸ್ಥಿತಿ ಕೊಂಚ ಹದಗೆಡುತ್ತಿರುವುದರಿಂದ ಅವರು ತಮ್ಮ ಎಂದಿನ ಕೆಲಸದಲ್ಲಿ ತೊಡಗಿಕೊಳ್ಳಲಿದ್ದಾರೆ’ ಎಂದೂ ಅವರು ಸ್ಪಷ್ಟಪಡಿಸಿದರು. ಈ ಮೂಲಕ ಇಸ್ರೇಲ್ ಕೇವಲ ಉಗ್ರರ ತಾಣಗಳನ್ನು ಮಾತ್ರ ಗುರಿಯಾಗಿಸಿಕೊಂಡು ದಾಳಿ ನಡೆಸಲು ಸಜ್ಜಾಗಿದೆ ಎನ್ನಲಾಗಿದೆ.
ಈ ನಡುವೆ ಭಾನುವಾರ ಗಾಜಾ಼ ಪಟ್ಟಿಯಲ್ಲಿ 156 ಜನರ ಹತ್ಯೆ ಆಗಿರುವುದಾಗಿ ಆರೋಗ್ಯ ಸಚಿವಾಲಯ ಘೋಷಿಸಿದೆ.ದ.ಕೊರಿಯಾ ಪ್ರತಿಪಕ್ಷ ನಾಯಕ ಲೀ ಕತ್ತು ಕೊಯ್ದು ಹತ್ಯೆ ಯತ್ನಸಿಯೋಲ್ (ದ.ಕೊರಿಯಾ): ದಕ್ಷಿಣ ಕೊರಿಯಾದ ಪ್ರತಿಪಕ್ಷ ನಾಯಕ ಲೀ-ಜೆ-ಮ್ಯಂಗ್ ಅವರ ಹತ್ಯೆ ಯತ್ನ ನಡೆದಿದ್ದು, ಅನಾಮಿಕ ವ್ಯಕ್ತಿಯೊಬ್ಬ ಚಾಕುವಿನಿಂದ ಲೀ ಅವರ ಕತ್ತುಕೊಯ್ದ ಘಟನೆ ನಗರದಲ್ಲಿ ನಡೆದಿದೆ.
ಇತ್ತ ಲೀ ಅವರಿಗೆ ನಗರದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಸಿಯೋಲ್ ನಗರಕ್ಕೆ ಸ್ಥಳಾಂತರಿಸಲಾಗಿದೆ.2022ರಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಕೇವಲ ಶೇ.0.7 ಮತಪ್ರಮಾಣದಿಂದ ಸೋತ ನಂತರ ಆಡಳಿತ ಪಕ್ಷವನ್ನು ಹಲವು ವಿಷಯಗಳಲ್ಲಿ ಲೀ ಅವರು ಕಟುವಾಗಿ ಟೀಕಿಸಿ ಗಮನ ಸೆಳೆದಿದ್ದಾರೆ.ಜಪಾನ್‌ನಲ್ಲಿ ಸಿಲುಕಿದ್ದ ಜ್ಯೂ.ಎನ್‌ಟಿಆರ್ ತವರಿಗೆ ಸುರಕ್ಷಿತವಾಗಿ ವಾಪಸ್
ಈ ನಡುವೆ ಆರ್‌ಆರ್‌ಆರ್ ಚಿತ್ರದ ನಿರ್ದೇಶಕ ರಾಜಮೌಳಿ ಸಹ ಜಪಾನ್‌ನಲ್ಲಿ ತೊಂದರೆಗೊಳಗಾದವರಿಗೆ ಸಾಂತ್ವನ ಹೇಳಿ ಟ್ವೀಟ್ ಮಾಡಿದ್ದಾರೆ.