ಅತ್ಯಾಚಾರಿಗಳು ಹಾಗೂ ಶಿಶುಕಾಮಿಗಳ ವಿರುದ್ಧ ಕಠಿಣ ಕ್ರಮ : ಅಂತಹ ವ್ಯಕ್ತಿಗಳ ಪುರುಷತ್ವ ಹರಣ

KannadaprabhaNewsNetwork |  
Published : Sep 22, 2024, 01:48 AM ISTUpdated : Sep 22, 2024, 04:17 AM IST
ಇಟಲಿ  | Kannada Prabha

ಸಾರಾಂಶ

ಅತ್ಯಾಚಾರ ಹಾಗೂ ಶಿಶುಕಾಮಿ ಪ್ರಕರಣಗಳಲ್ಲಿ ದೋಷಿಗಳಿಗೆ ರಾಸಾಯನಿಕ ವಿಧಾನದ ಮೂಲಕ ಪುರುಷತ್ವ ಹರಣ ಮಾಡುವ ಕಾಯ್ದೆ ರೂಪಿಸಲು ಇಟಲಿ ಸಂಸದರು ಮುಂದಾಗಿದ್ದಾರೆ. ಈ ಕ್ರಮವನ್ನು ಪ್ರತಿಪಕ್ಷಗಳು ಅಮಾನವೀಯ ಎಂದು ಟೀಕಿಸಿವೆ.

ರೋಮ್‌: ಅತ್ಯಾಚಾರಿಗಳು ಹಾಗೂ ಶಿಶುಕಾಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿರುವ ಇಟಲಿ ಸರ್ಕಾರ, ಅಂತಹ ವ್ಯಕ್ತಿಗಳ ಪುರುಷತ್ವ ಹರಣ ಮಾಡುವ ನಿಟ್ಟಿನಲ್ಲಿ ಮುಂದಡಿ ಇಟ್ಟಿದೆ. ಈ ಸಂಬಂಧ ಕಾಯ್ದೆ ರೂಪಿಸುವ ಸಲುವಾಗಿ ಕರಡು ಶಾಸನ ತಯಾರಿಗೆ ಸಮಿತಿಯೊಂದನ್ನು ರಚನೆ ಮಾಡಲು ಇಟಲಿಯ ಸಂಸದರು ಒಪ್ಪಿಗೆ ನೀಡಿದ್ದಾರೆ.

ಉದ್ದೇಶಿತ ಯೋಜನೆಯ ಪ್ರಕಾರ, ಅತ್ಯಾಚಾರ ಪ್ರಕರಣಗಳಲ್ಲಿ ದೋಷಿ ಎಂದು ಸಾಬೀತಾದವರು ರಾಸಾಯನಿಕ ವಿಧಾನದಡಿ ಪುರುಷತ್ವ ಹರಣ ಮಾಡಿಸಿಕೊಂಡರೆ ಅವರ ಶಿಕ್ಷೆಯನ್ನು ಅಮಾನತಿನಲ್ಲಿಡಲಾಗುತ್ತದೆ ಎಂದು ಹೇಳಲಾಗಿದೆ. ಆದರೆ ಇದೊಂದು ಅಮಾನವೀಯ ಹಾಗೂ ತೀವ್ರಗಾಮಿ ನಡೆಯಾಗಿದೆ ಎಂದು ಪ್ರತಿಪಕ್ಷಗಳು ಟೀಕಿಸಿವೆ.

ಏನಿದು ರಾಸಾಯನಿಕ ಪುರುಷತ್ವ ಹರಣ?:

ಅತಿಯಾದ ಕಾಮಾಸಕ್ತಿ ಹೊಂದುವ ಮೂಲಕ ಅತ್ಯಾಚಾರಿಗಳಾಗಿ ಬದಲಾಗಿರುವವರಿಗೆ ಚುಚ್ಚುಮದ್ದೊಂದನ್ನು ನೀಡಲಾಗುತ್ತದೆ. ಅದು ಕಾಮೋತ್ತೇಜನಕ್ಕೆ ಕಾರಣವಾಗುವ ಟೆಸ್ಟೋಸ್ಟೀರೋನ್‌ ಹಾರ್ಮೋನ್‌ ಉತ್ಪಾದನೆಯನ್ನು ಪ್ರತಿಬಂಧಿಸುತ್ತದೆ. ಇದರಿಂದಾಗಿ ಆ ವ್ಯಕ್ತಿಗೆ ಕಾಮದ ಮೇಲೆ ಆಸಕ್ತಿ ಹೋಗುತ್ತದೆ ಎನ್ನಲಾಗಿದೆ.

ಕೆಲವು ದೇಶಗಳು ಹಾಗೂ ಅಮೆರಿಕದ ಕೆಲವೊಂದು ರಾಜ್ಯಗಳಲ್ಲಿ ಈ ಶಿಕ್ಷೆ ಈಗಾಗಲೇ ಜಾರಿಯಲ್ಲಿದೆ. ಆದರೆ ಅದರ ಪರಿಣಾಮ ಹಾಗೂ ಅದರಿಂದಾಗುವ ಭೌತಿಕ, ಮಾನಸಿಕ ಅಡ್ಡಪರಿಣಾಮಗಳ ಕುರಿತು ಚರ್ಚೆ ನಡೆಯುತ್ತಿದೆ.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.

Recommended Stories

ಮತ್ತಷ್ಟು ತೆರಿಗೆ ಹಾಕುವೆ : ಟೀಕಾಕಾರ ದೇಶಗಳಿಗೆ ಟ್ರಂಪ್‌ ಎಚ್ಚರಿಕೆ
ಕುಖ್ಯಾತ ಡ್ರಗ್ಸ್‌ ದೊರೆ ಹತ್ಯೆಗೆ ಮೆಕ್ಸಿಕೋ ಧಗಧಗ : ಯಾರು ಮಂಚೋ? ಡ್ರಗ್‌ ಲಾರ್ಡ್‌ ಆಗಿದ್ದು ಹೇಗೆ?