ಇರಾನ್‌ ಹಡಗಲ್ಲಿ ಚೀನಾ ಕ್ಷಿಪಣಿ ರಾಸಾಯನಿಕ : ನಿಕ್ಕಿ ಹ್ಯಾಲೆ

KannadaprabhaNewsNetwork |  
Published : Apr 22, 2026, 03:15 AM IST
nikki

ಸಾರಾಂಶ

ಹೋರ್ಮುಜ್‌ ಜಲಸಂಧಿಯಲ್ಲಿ ಅಮೆರಿಕ ವಶಕ್ಕೆ ಪಡೆದುಕೊಂಡಿರುವ ಇರಾನ್‌ನ ಹಡಗಿನಲ್ಲಿ ಕ್ಷಿಪಣಿಗಳಿಗೆ ಬಳಸುವ ರಾಸಾಯನಿಕಗಳಿದ್ದವು. ರಾಸಾಯನಿಕಗಳು ಚೀನಾದಿಂದ ಪೂರೈಕೆಯಾಗುತ್ತಿದ್ದವು’ ಎಂದು ಅಮೆರಿಕದ ರಿಪಬ್ಲಿಕನ್‌ ನಾಯಕಿ ನಿಕ್ಕಿ ಹ್ಯಾಲೆ ಆರೋಪಿಸಿದ್ದಾರೆ. ಆದರೆ ಇದನ್ನು ಚೀನಾ ಸ್ಪಷ್ಟವಾಗಿ ತಳ್ಳಿ ಹಾಕಿದೆ.

ವಾಷಿಂಗ್ಟನ್‌: ’ಹೋರ್ಮುಜ್‌ ಜಲಸಂಧಿಯಲ್ಲಿ ಅಮೆರಿಕ ವಶಕ್ಕೆ ಪಡೆದುಕೊಂಡಿರುವ ಇರಾನ್‌ನ ಹಡಗಿನಲ್ಲಿ ಕ್ಷಿಪಣಿಗಳಿಗೆ ಬಳಸುವ ರಾಸಾಯನಿಕಗಳಿದ್ದವು. ಈ ರಾಸಾಯನಿಕಗಳು ಚೀನಾದಿಂದ ಪೂರೈಕೆಯಾಗುತ್ತಿದ್ದವು’ ಎಂದು ಅಮೆರಿಕದ ರಿಪಬ್ಲಿಕನ್‌ ನಾಯಕಿ ನಿಕ್ಕಿ ಹ್ಯಾಲೆ ಆರೋಪಿಸಿದ್ದಾರೆ. ಆದರೆ ಇದನ್ನು ಚೀನಾ ಸ್ಪಷ್ಟವಾಗಿ ತಳ್ಳಿ ಹಾಕಿದೆ.

ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ನಿಕ್ಕಿ

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ನಿಕ್ಕಿ ಹ್ಯಾಲೆ ಅ‍ವರು, ‘ಏ.18ರಂದು ಅಮೆರಿಕ ವಶಕ್ಕೆ ಪಡೆದಿರುವ ಇರಾನ್‌ ಹಡಗಿನಲ್ಲಿ ರಾಸಾಯನಿಕ ವಸ್ತುಗಳಿದ್ದವು. ಇವು ಕ್ಷಿಪಣಿಗೆ ಬಳಸುವ ರಾಸಾಯನಿಕಗಳಾಗಿದ್ದವು. ಈ ಹಡಗು ಚೀನಾದಿಂದ ಆಗಮಿಸಿತ್ತು’ ಎಂದಿದ್ದಾರೆ.

‘ಇರಾನ್‌ಗೆ ಚೀನಾ ಸೇನಾ ಬೆಂಬಲ ನೀಡುತ್ತಿರುವುದು ಗಂಭೀರ ಕಳವಳದ ವಿಚಾರವಾಗಿದೆ. ಚೀನಾವು ಇರಾನ್‌ ಆಡಳಿತವನ್ನು ಬೆಂಬಲಿಸುವ ಕೆಲಸ ಮಾಡುತ್ತಿದೆ. ಈ ಸತ್ಯವನ್ನು ನಿರ್ಲಕ್ಷಿಸುವಂತಿಲ್ಲ’ ಎಂದು ಹೇಳಿದ್ದಾರೆ.

ಇದು ಸುಳ್ಳು- ಚೀನಾ:

‘ಜಪ್ತಾದ ಇರಾನ್‌ ಹಡಗಿಗೂ ನಮಗೂ ಸಂಬಂಧವಿಲ್ಲ. ಸುಳ್ಳು ಆರೋಪ ಸಲ್ಲದು. ಯಾವುದೇ ದುರುದ್ದೇಶಪೂರಿತ ಸಂಪರ್ಕ ಮತ್ತು ಪ್ರಚಾರವನ್ನು ಚೀನಾ ವಿರೋಧಿಸುತ್ತದೆ’ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಗುವೊ ಜಿಯಾಕುನ್‌ ಸ್ಪಷ್ಟಪಡಿಸಿದ್ದಾರೆ.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.
Read more Articles on

Recommended Stories

ಸಂಧಾನ ಇಲ್ದೆ ಇರಾನ್‌-ಅಮೆರಿಕ ಕದನವಿರಾಮ ಅಂತ್ಯ
ಇರಾನ್‌ ಜತೆ ಡೀಲ್‌ಗೆ ಪಾಕ್‌ಗೆ ಟ್ರಂಪ್?