ಟ್ರಂಪ್‌ ಹೋರ್ಮುಜ್‌ ದಿಗ್ಬಂಧನ ಶೀಘ್ರ ವಾಪಸ್‌?

KannadaprabhaNewsNetwork |  
Published : Apr 21, 2026, 03:00 AM IST
Donald Trump

ಸಾರಾಂಶ

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಪಾಕಿಸ್ತಾನ ಸೇನಾ ಮುಖ್ಯಸ್ಥ ಆಸಿಂ ಮುನೀರ್‌ ಜತೆಗೆ ದೂರವಾಣಿ ಮೂಲಕ ಹೋರ್ಮುಜ್ ಜಲಸಂಧಿ ಬಿಕ್ಕಟ್ಟಿನ ಮಾತುಕತೆ ನಡೆಸಿದ್ದಾರೆ. ಇದರ ಫಲವಾಗಿ ಸದ್ಯದಲ್ಲೇ ಹೋರ್ಮುಜ್‌ ಜಲಸಂಧಿ ಮೇಲಿನ ದಿಗ್ಬಂಧನ ವಾಪಸ್‌ ಪಡೆಯುವ ಘೋಷಣೆ ಮಾಡುವ ನಿರೀಕ್ಷೆ

 ವಾಷಿಂಗ್ಟನ್‌/ಇಸ್ಲಾಮಾಬಾದ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಪಾಕಿಸ್ತಾನ ಸೇನಾ ಮುಖ್ಯಸ್ಥ ಆಸಿಂ ಮುನೀರ್‌ ಜತೆಗೆ ದೂರವಾಣಿ ಮೂಲಕ ಹೋರ್ಮುಜ್ ಜಲಸಂಧಿ ಬಿಕ್ಕಟ್ಟಿನ ಮಾತುಕತೆ ನಡೆಸಿದ್ದಾರೆ. ಇದರ ಫಲವಾಗಿ ಸದ್ಯದಲ್ಲೇ ಹೋರ್ಮುಜ್‌ ಜಲಸಂಧಿ ಮೇಲಿನ ದಿಗ್ಬಂಧನ ವಾಪಸ್‌ ಪಡೆಯುವ ಘೋಷಣೆ ಮಾಡುವ ನಿರೀಕ್ಷೆ ಇದೆ.

ಅಮೆರಿಕ ಮತ್ತು ಇರಾನ್‌ ನಡುವಿನ ಶಾಂತಿ ಮಾತುಕತೆ

ಅಮೆರಿಕ ಮತ್ತು ಇರಾನ್‌ ನಡುವಿನ ಶಾಂತಿ ಮಾತುಕತೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿರುವ ಆಸೀಂ ಮುನೀರ್‌ ಅವರು, ‘ಹೋರ್ಮುಜ್‌ ಜಲಸಂಧಿ ಮೇಲೆ ಅಮೆರಿಕ ಹೇರಿರುವ ದಿಗ್ಬಂಧನವು ಇರಾನ್‌-ಅಮೆರಿಕ ಶಾಂತಿ ಮಾತುಕತೆಗೆ ಅಡ್ಡಿ ಮಾಡುತ್ತಿದೆ’ ಎಂದು ತಿಳಿಸಿದ್ದಾರೆ. ಇದಕ್ಕೆ ಟ್ರಂಪ್‌ ಪ್ರತಿಕ್ರಿಯಿಸಿ, ‘ನಿಮ್ಮ ಸಲಹೆ ಪರಿಶೀಲಿಸುವೆ’ ಎಂದು ಉತ್ತರಿಸಿದರು ಎಂದು ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಇರಾನ್‌ನ ನಿಯೋಗ ಮತ್ತು ಅವರ ಕಳವಳ ಕುರಿತು ಪ್ರಸ್ತಾಪಿಸಿದ್ದಾರೆ

ಟ್ರಂಪ್‌ ಜತೆಗಿನ ಮಾತುಕತೆ ವೇಳೆ ಆಸೀಂ ಮುನೀರ್‌ ಅವರು ಇರಾನ್‌ನ ನಿಯೋಗ ಮತ್ತು ಅವರ ಕಳವಳ ಕುರಿತು ಪ್ರಸ್ತಾಪಿಸಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಹೋರ್ಮುಜ್‌ ಜಲಸಂಧಿ ಮೇಲೆ ಅಮೆರಿಕದ ನೌಕಾಸೇನೆಯು ಇರಾನ್‌ನ ಹಡಗುಗಳ ಓಡಾಟಕ್ಕೆ ದಿಗ್ಬಂಧನ ಹೇರಿದೆ.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.
Read more Articles on

Recommended Stories

ಅರ್ಧ ತಾಸು ಭಾಷಣದಲ್ಲಿ 59 ಸಲ ಕಾಂಗ್ರೆಸ್‌ ಎಂದ ಮೋದಿ: ಖರ್ಗೆ
ಅನುಮತಿ ನೀಡಿ ಭಾರತದ ಹಡಗಿಗೆ ಇರಾನ್‌ ಗುಂಡೇಟು!