;Resize=(412,232))
ನವದೆಹಲಿ: ‘ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಮಹಿಳೆಯರ ಬಗ್ಗೆ ಉಲ್ಲೇಖಿಸಿದ್ದಕ್ಕಿಂತ ಜಾಸ್ತಿ (59 ಬಾರಿ) ಕಾಂಗ್ರೆಸ್ ಹೆಸರೆತ್ತಿದರು. ಇದು ಬಿಜೆಪಿಯ ಆದ್ಯತೆ ತೋರಿಸುತ್ತದೆ’ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯವಾಡಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಖರ್ಗೆ, ‘12 ವರ್ಷದ ಆಡಳಿತದಲ್ಲಿ ಹೇಳಿಕೊಳ್ಳುವಂಥದ್ದು ಏನೂ ಇಲ್ಲದ ಕಾರಣ ಹತಾಶರಾಗಿರುವ ಪ್ರಧಾನಿ, ರಾಷ್ಟ್ರವನ್ನುದ್ದೇಶಿಸಿ ಮಾಡಬೇಕಿದ್ದ ಭಾಷಣವನ್ನು ರಾಜಕೀಯ ಭಾಷಣವನ್ನಾಗಿಸಿದರು. ಅದರ ತುಂಬೆಲ್ಲಾ ಕೆಸರೆರಚಾಟ, ಸುಳ್ಳುಗಳೇ ಇದ್ದವು. ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಹೀಗೆ ಮಾಡಿದ್ದು ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಉಪಹಾಸ್ಯ ಮಾಡಿದಂತೆ’ ಎಂದು ಕಿಡಿ ಕಾರಿದ್ದಾರೆ.
ಇದೇ ವೇಳೆ, ‘ಮೋದಿಯವರು 59 ಬಾರಿ ಕಾಂಗ್ರೆಸ್ ಹೆಸರು ಉಲ್ಲೇಖಿಸಿದರೆ, ಸ್ತ್ರೀಯರ ಬಗ್ಗೆ ಕೆಲವೇ ಕೆಲ ಬಾರಿ ಮಾತನಾಡಿದರು. ಅಂದರೆ ಸರಿ ದಾರಿಯಲ್ಲಿರುವ ಕಾಂಗ್ರೆಸ್ ಅವರ ಆದ್ಯತೆಯಾಗಿದೆ ಎಂದಿದ್ದಾರೆ. ಜೊತೆಗೆ ಸದ್ಯ ಇರುವ 543 ಸೀಟುಗಳಲ್ಲೇ ಸ್ತ್ರೀಯರಿಗೆ ಶೇ.33ರಷ್ಟು ಮೀಸಲಾತಿ ಜಾರಿ ಮಾಡುವಂತೆ ಆಗ್ರಹ ಮಾಡಿದ್ದಾರೆ.