ಮುನೀರ್ ಡಬಲ್‌ ಗೇಮ್‌ ಕಾರಣ ಸಂಧಾನಕ್ಕೆ ಬಾರದ ಇರಾನ್?

Published : Apr 23, 2026, 08:07 AM IST
 Asim Munir

ಸಾರಾಂಶ

ಇರಾನ್-ಅಮೆರಿಕ ನಡುವಿನ 2ನೇ ಸುತ್ತಿನ ಸಂಧಾನ ಸಭೆ ನಡೆಯದೇ ಇರಲು ಪಾಕ್ ಸೇನಾ ಮುಖ್ಯಸ್ಥ ಫೀ। ಮಾ। ಅಸೀಂ ಮುನೀರ್ ಅವರ ಡಬಲ್‌ ಗೇಮ್‌ ಕಾರಣ. ಅವರು ಅತ್ತ ಇರಾನ್ ಜತೆ ಚೆನ್ನಾಗಿದ್ದುಕೊಂಡೂ ಅಮೆರಿಕ ಪರ ವಾಲಿದ್ದರು.

 ಇಸ್ಲಾಮಾಬಾದ್: ಇರಾನ್-ಅಮೆರಿಕ ನಡುವಿನ 2ನೇ ಸುತ್ತಿನ ಸಂಧಾನ ಸಭೆ ನಡೆಯದೇ ಇರಲು ಪಾಕ್ ಸೇನಾ ಮುಖ್ಯಸ್ಥ ಫೀ। ಮಾ। ಅಸೀಂ ಮುನೀರ್ ಅವರ ಡಬಲ್‌ ಗೇಮ್‌ ಕಾರಣ. ಅವರು ಅತ್ತ ಇರಾನ್ ಜತೆ ಚೆನ್ನಾಗಿದ್ದುಕೊಂಡೂ ಅಮೆರಿಕ ಪರ ವಾಲಿದ್ದರು. ಇದು ಇರಾನ್‌ ಕೋಪಕ್ಕೆ ಕಾರಣವಾಗಿ, ಆ ದೇಶ ಸಂಧಾನಕ್ಕೆ ಬರಲಿಲ್ಲ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮವೊಂದು ವರದಿ ಮಾಡಿದೆ.

ಇರಾನ್‌ನ ಸರ್ಕಾರದ ಪ್ರಮುಖರನ್ನು ಇತ್ತೀಚೆಗೆ ಭೇಟಿ ಮಾಡಿದ್ದ ಮುನೀರ್‌

ಇರಾನ್‌ನ ಸರ್ಕಾರದ ಪ್ರಮುಖರನ್ನು ಇತ್ತೀಚೆಗೆ ಭೇಟಿ ಮಾಡಿದ್ದ ಮುನೀರ್‌, ‘ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜತೆ ನಿಮ್ಮ ಬೇಡಿಕೆಗಳ ಬಗ್ಗೆ ಮಾತನಾಡುವೆ. ಇರಾನ್‌ಗೆ ಅನುಕೂಲಕರ ಆಗುವ ನಿರ್ಣಯಕ್ಕೆ ಯತ್ನಿಸುವೆ’ ಎಂದು ಭರವಸೆ ನೀಡಿದ್ದರು. ಆ ಪ್ರಕಾರ ಮುನೀರ್ ಅವರಿಗೆ ಇರಾನ್‌ ತನ್ನ ಬೇಡಿಕೆಗಳ ಪಟ್ಟಿ ನೀಡಿತ್ತು.

ಬೇಡಿಕೆಯ ಪಟ್ಟಿಯನ್ನು ಮುನೀರ್‌ ಅಮೆರಿಕಕ್ಕೆ ರವಾನಿಸಲೇ ಇಲ್ಲ

ಆದರೆ, ಈ ಬೇಡಿಕೆಯ ಪಟ್ಟಿಯನ್ನು ಮುನೀರ್‌ ಅಮೆರಿಕಕ್ಕೆ ರವಾನಿಸಲೇ ಇಲ್ಲ ಎಂದು ಗೊತ್ತಾಗಿದೆ. ಹೀಗಾಗಿಯೇ ಮುನೀರ್‌ ಮೇಲೆ ಇರಾನ್‌ಗೆ ನಂಬಿಕೆಯೇ ಹೊರಟು ಹೋಗಿದೆ ಎಂದು ಉನ್ನತ ಮೂಲಗಳು ಹೇಳಿವೆ ಎಂದು ಮಾಧ್ಯಮ ವರದಿ ಹೇಳಿದೆ.

 

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.
Read more Articles on

Recommended Stories

ಭಾರತದ ಹಡಗು ಸೇರಿ 3 ಹಡಗು ಮೇಲೆ ಇರಾನ್‌ ದಾಳಿ
ಡೀಲ್‌ ಆಗ್ದಿದ್ರೆ ಇರಾನ್‌ ಧ್ವಂಸ ಎಂದಿದ್ದ ಎಂದಿದ್ದ ಟ್ರಂಪ್‌ ದಿಢೀರ್‌ ಥಂಡಾ!