ಇರಾನ್‌ ಜನತಾ ದಂಗೆ ದೇಶವ್ಯಾಪಿ, ಎಲ್ಲೆಡೆ ಕಿಚ್ಚು! ಒಂದೇ ದಿನ 200 ಪ್ರತಿಭಟನಾಕಾರರ ಹತ್ಯೆ?

Published : Jan 11, 2026, 07:47 AM IST
Iran

ಸಾರಾಂಶ

ಇರಾನ್‌ ಸರ್ವೋಚ್ಚ ನಾಯಕ ಖಮೇನಿ ಅವರ ಇಸ್ಲಾಮಿಕ್‌ ಆಡಳಿತದ ವಿರುದ್ಧದ ಜನತಾ ದಂಗೆ ಶನಿವಾರ 13 ದಿನ ಪೂರೈಸಿದ್ದು, ಕಿಚ್ಚು ದೇಶವ್ಯಾಪಿಯಾಗಿದೆ. ಅನೇಕ ಸರ್ಕಾರಿ ಕಟ್ಟಡಗಳಿಗೆ ಜನ ಬೆಂಕಿ ಹಾಕಿದ್ದಾರೆ. ‘ನಗರಗಳನ್ನು ವಶ ಮಾಡಿಕೊಳ್ಳಿ’ ಎಂದು ಗಡೀಪಾರಾಗಿರುವ ಖಮೇನಿ ವಿರೋಧಿ ಯುವರಾಜ ರೆಜಾ ಪಹ್ಲವಿ ಕರೆ   

 ಟೆಹ್ರಾನ್‌: ಇರಾನ್‌ ಸರ್ವೋಚ್ಚ ನಾಯಕ ಖಮೇನಿ ಅವರ ಇಸ್ಲಾಮಿಕ್‌ ಆಡಳಿತದ ವಿರುದ್ಧದ ಜನತಾ ದಂಗೆ ಶನಿವಾರ 13 ದಿನ ಪೂರೈಸಿದ್ದು, ಕಿಚ್ಚು ದೇಶವ್ಯಾಪಿಯಾಗಿದೆ. ಅನೇಕ ಸರ್ಕಾರಿ ಕಟ್ಟಡಗಳಿಗೆ ಜನ ಬೆಂಕಿ ಹಾಕಿದ್ದಾರೆ. ‘ನಗರಗಳನ್ನು ವಶ ಮಾಡಿಕೊಳ್ಳಿ’ ಎಂದು ಗಡೀಪಾರಾಗಿರುವ ಖಮೇನಿ ವಿರೋಧಿ ಯುವರಾಜ ರೆಜಾ ಪಹ್ಲವಿ ಕರೆ ನೀಡಿದ್ದಾರೆ.

 ಇರಾನ್‌: ಒಂದೇ ದಿನ 200 ಪ್ರತಿಭಟನಾಕಾರರ ಹತ್ಯೆ? 

ಟೆಹ್ರಾನ್‌: ಪರಮೋಚ್ಛ ಧಾರ್ಮಿಕ ನಾಯಕ ಆಯತೊಲ್ಲಾ ಖೊಮೇನಿ ನೇತೃತ್ವದ ಸರ್ಕಾರದ ವಿರುದ್ಧ ಇರಾನ್‌ನಲ್ಲಿ ಕಳೆದ 2 ವಾರಗಳಿಂದ ನಡೆಯುತ್ತಿರುವ ಹೋರಾಟ ಭಾರೀ ಹಿಂಸಾರೂಪ ಪಡೆದಿದ್ದು, ಭದ್ರತಾ ಪಡೆಗಳ ಗುಂಡಿಗೆ ಗುರುವಾರ ರಾತ್ರಿ ಒಂದೇ ದಿನ 200ಕ್ಕೂ ಹೆಚ್ಚು ಪ್ರತಿಭಟನಾಕಾರರು ಬಲಿಯಾಗಿದ್ದಾರೆ. 

ಪ್ರತಿಭಟನೆ ಹತ್ತಿಕ್ಕಲು ಸರ್ಕಾರ ನಡೆಸಿದ ಅಮಾನವೀಯ ಕ್ರಮ

ಇದು ಪ್ರತಿಭಟನೆ ಹತ್ತಿಕ್ಕಲು ಸರ್ಕಾರ ನಡೆಸಿದ ಅಮಾನವೀಯ ಕ್ರಮ ಎಂದು ವರದಿಗಳು ಹೇಳಿವೆ. ಕೇವಲ ಟೆಹ್ರಾನ್‌ ನಗರದ 6 ಆಸ್ಪತ್ರೆಗಳಲ್ಲಿ ಗುರುವಾರ ರಾತ್ರಿ 217 ಜನರ ಶವಗಳು ಸಂಗ್ರಹವಾಗಿದ್ದವು. ಎಲ್ಲಾ ದೇಹಗಳ ಮೇಲೂ ಗುಂಡಿನ ಏಟಿತ್ತು ಎಂದು ಹೆಸರು ಹೇಳಬಯಸದ ವೈದ್ಯರು ಮಾಹಿತಿ ನೀಡಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಅಮೆರಿಕದ ಟೈಮ್‌ ಮ್ಯಾಗಜಿನ್‌ ವರದಿ ಮಾಡಿದೆ.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.
Read more Articles on

Recommended Stories

ಭಾರತದ ಮೇಲೆ ದಾಳಿಗಾಗಿ 1000 ಉಗ್ರರು ರೆಡಿ: ಅಜರ್‌
ಉತ್ತಮ ಸೇವೆ: ಬೆಂಗ್ಳೂರಿನ ಸ್ವಾತಿಗೆ ವಿಶ್ವಸಂಸ್ಥೆ ಗೌರವ