ತವರಲ್ಲೇ ಭಾರತ ಸಂಜಾತೆ ನಿಕ್ಕಿ ಹ್ಯಾಲೆಗೆ ಸೋಲು: ಟ್ರಂಪ್‌ಗೆ ಜಯ

KannadaprabhaNewsNetwork |  
Published : Feb 26, 2024, 01:32 AM ISTUpdated : Feb 26, 2024, 01:06 PM IST
ನಿಕ್ಕಿ ಹ್ಯಾಲೆ | Kannada Prabha

ಸಾರಾಂಶ

ಅಮೆರಿಕ ಅಧ್ಯಕ್ಷೀಯ ಆಂತರಿಕ ಚುನಾವಣೆಯಲ್ಲಿ ಭಾರತೀಯ ಸಂಜಾತೆ ನಿಕ್ಕಿ ಹ್ಯಾಲೆಗೆ ತವರು ರಾಜ್ಯವಾದ ಕ್ಯಾರೋಲಿನಾದಲ್ಲೇ ಸೋಲುಂಟಾಗಿದೆ.

ನ್ಯೂಯಾರ್ಕ್‌: ರಿಪಬ್ಲಿಕನ್‌ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಆಯ್ಕೆಗೆ ನಡೆಯುತ್ತಿರುವ ಪಕ್ಷದ ಆಂತರಿಕ ಚುನಾವಣೆಯಲ್ಲಿ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಬಹುದೊಡ್ಡ ಗೆಲುವು ಸಿಕ್ಕಿದೆ.

ತಮ್ಮ ಪ್ರತಿಸ್ಪರ್ಧಿ, ಭಾರತೀಯ ಮೂಲದ ನಿಕ್ಕಿ ಹ್ಯಾಲೆ ಅವರನ್ನು ಟ್ರಂಪ್‌, ನಿಕ್ಕಿ ಅವರ ತವರು ರಾಜ್ಯ ಕ್ಯಾರೋಲಿನಾದಲ್ಲೇ ಸೋಲಿಸಿದ್ದಾರೆ.

ಹೀಗಾಗಿ ಮುಂದಿನ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರೆಟ್‌ ಪಕ್ಷದ ಅಭ್ಯರ್ಥಿ ಜೋ ಬೈಡೆನ್‌ ವಿರುದ್ಧ ಟ್ರಂಪ್‌ ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿಯಾಗುವುದು ಬಹುತೇಕ ಖಚಿತ ಎನ್ನಲಾಗಿದೆ.

ತಮ್ಮ ವಿರುದ್ಧ ಸ್ಪರ್ಧಿಸಿದ್ದ ಎಲ್ಲಾ ಅಭ್ಯರ್ಥಿಗಳನ್ನು ಟ್ರಂಪ್‌ ಅವರ ತವರು ಕ್ಷೇತ್ರದಲ್ಲೇ ಸೋಲಿಸುವ ಮೂಲಕ ತಮ್ಮ ಪ್ರಾಬಲ್ಯವನ್ನು ತೋರಿಸಿದ್ದಾರೆ.

ಒಂದು ವೇಳೆ ಟ್ರಂಪ್‌ ಆಯ್ಕೆ ಖಚಿತವಾದರೆ ಇದು ಅವರ ಮೂರನೇ ಸ್ಪರ್ಧೆಯಾಗಲಿದೆ.

PREV

Recommended Stories

ಪಿಒಕೆನಲ್ಲಿ ಪಹಲ್ಗಾಂ ಉಗ್ರನ ಸಾಂಕೇತಿಕ ಅಂತ್ಯಕ್ರಿಯೆ!
ಶ್ವೇತಭವನ ವಕ್ತಾರೆಯ ತುಟಿ, ಸೌಂದರ್ಯ ಹೊಗಳಿದ ಟ್ರಂಪ್!