ಅಮೆರಿಕ ಕಾಲೇಜಲ್ಲಿನ್ನು 5% ಭಾರತೀಯರಿಗಷ್ಟೇ ಪ್ರವೇಶ

Published : Oct 13, 2025, 05:58 AM IST
Trump Travelling Egypt Next Week? US Prez Reveals as Israel-Hamas Ceasefire Talks Continue

ಸಾರಾಂಶ

ಮೊದಲು ಎಚ್‌-1ಬಿ ವೀಸಾ ದರವನ್ನು ಹೆಚ್ಚಿಸುವ ಮೂಲಕ ಅಮೆರಿಕದಲ್ಲಿ ಕೆಲಸ ಮಾಡುವ ಕನಸು ಕಾಣುತ್ತಿದ್ದ ಭಾರತೀಯರ ಪಾಲಿಗೆ ಅದನ್ನು ದುಃಸ್ವಪ್ನವಾಗಿಸಿದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಇದೀಗ ಅಮೆರಿಕದ ಕಾಲೇಜುಗಳಲ್ಲಿ ಜ್ಞಾನಾರ್ಜನೆಯ ಆಸೆ ಹೊತ್ತಿರುವವರಿಗೆ ಶಾಕ್‌ ನೀಡಿದ್ದಾರೆ.

ನವದೆಹಲಿ: ಮೊದಲು ಎಚ್‌-1ಬಿ ವೀಸಾ ದರವನ್ನು ಹೆಚ್ಚಿಸುವ ಮೂಲಕ ಅಮೆರಿಕದಲ್ಲಿ ಕೆಲಸ ಮಾಡುವ ಕನಸು ಕಾಣುತ್ತಿದ್ದ ಭಾರತೀಯರ ಪಾಲಿಗೆ ಅದನ್ನು ದುಃಸ್ವಪ್ನವಾಗಿಸಿದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಇದೀಗ ಅಮೆರಿಕದ ಕಾಲೇಜುಗಳಲ್ಲಿ ಜ್ಞಾನಾರ್ಜನೆಯ ಆಸೆ ಹೊತ್ತಿರುವವರಿಗೆ ಶಾಕ್‌ ನೀಡಿದ್ದಾರೆ.

‘ಅಮೆರಿಕದ ಪ್ರತಿ ಕಾಲೇಜಿನಲ್ಲಿ ಪದವಿಪೂರ್ವ ಹಂತದಲ್ಲಿ ಶೇ.15ರಷ್ಟು ಮಾತ್ರವೇ ವಿದೇಶಿ ವಿದ್ಯಾರ್ಥಿಗಳು ಇರಬೇಕು. ಅದರಲ್ಲಿ ಒಂದು ದೇಶದವರು ಶೇ.5ರ ಮಿತಿಯನ್ನು ಮೀರಬಾರದು’ ಎಂದು ಟ್ರಂಪ್‌ ಸರ್ಕಾರ 9 ಪ್ರಮುಖ ವಿಶ್ವವಿದ್ಯಾಲಯಗಳಿಗೆ ಸುತ್ತೋಲೆ ಹೊರಡಿಸಿದೆ. ಇತ್ತೀಚೆಗೆ ಅಮೆರಿಕದ ವಿವಿಗಳಲ್ಲಿ ದೇಶದ ನಿಲುವಿಗೆ ವಿರುದ್ಧವಾದ ಪ್ಯಾಲೆಸ್ತೀನ್‌ ಹಾಗೂ ತೃತೀಯಲಿಂಗಿಗಳ ಪರ, ಸಮಾನತೆ, ಒಳಗೊಳ್ಳುವಿಕೆ ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಆಗುತ್ತಿರುವ ಪ್ರತಿಭಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಈ ಆದೇಶವನ್ನು ಪಾಲಿಸಿದರೆ ಮಾತ್ರವೇ ಕಾಲೇಜುಗಳಿಗೆ ಸರ್ಕಾರದಿಂದ ನಿಧಿ ಸಿಗಲಿರುವುದರಿಂದ ಬಹುತೇಕ ವಿವಿಗಳು ಅದನ್ನ ಅನುಸರಿಸುವುದರಲ್ಲಿ ಸಂದೇಹವಿಲ್ಲ. ಆದರೆ ಹೆಚ್ಚು ವಿದೇಶಿ ವಿದ್ಯಾರ್ಥಿಗಳನ್ನು ಕಳೆದುಕೊಳ್ಳುವ ಆತಂಕ ತಪ್ಪಿದ್ದಲ್ಲ.

ಭಾರತೀಯರೇ ಹೆಚ್ಚು ಭಾದಿತ:

2024ರ ದತ್ತಾಂಶದ ಪ್ರಕಾರ, ಅಮೆರಿಕದಲ್ಲಿ 2.7 ಲಕ್ಷ ವಿದ್ಯಾರ್ಥಿಗಳಿದ್ದಾರೆ. ಅರ್ಥಾತ್‌, ಒಟ್ಟು ವಿದೇಶಿ ವಿದ್ಯಾರ್ಥಿಗಳ ಪೈಕಿ ಭಾರತೀಯರೇ ಶೇ.28ರಷ್ಟಿದ್ದಾರೆ. ಹೀಗಿರುವಾಗ ಶೇ.5ರ ಮಿತಿ ಜಾರಿಗೆ ಬಂದರೆ, ಶೇ.23ರಷ್ಟು ವಿದ್ಯಾರ್ಥಿಗಳು ಅತಂತ್ರರಾಗುತ್ತಾರೆ. ಬೇರೆ ದೇಶಕ್ಕೆ ಹೋಗುವುದು ಅಥವಾ ಭಾರತಕ್ಕೆ ಮರಳುವುದು ಬಿಟ್ಟರೆ ಮಾರ್ಗವಿಲ್ಲ. ಜತೆಗೆ, ಅಮೆರಿಕದ ಪ್ರತಿಷ್ಠಿತಿ ವಿವಿಗಳಲ್ಲಿ ಶಿಕ್ಷಣ ಪಡೆವ ಕನಸಿರುವವರಿಗೆ ಅದು ಕೈಗೂಡದು.

PREV
Read more Articles on

Recommended Stories

ಇನ್ನು 150 ವರ್ಷ ಬದುಕೋದು ಕಟ್ಟುಕತೆಯಲ್ಲ: ರಷ್ಯಾ ವಿಜ್ಞಾನಿ
ಶಾಂತಿ ಒಪ್ಪಂದಕ್ಕೆ ಅಧಿಕೃತ ಸಹಿ ಇಲ್ಲ : ಹಮಾಸ್‌