ಇಸ್ಲಮಾಬಾದ್: ಅಧ್ಯಕ್ಷೀಯ ಚುನಾವಣೆಯಲ್ಲಿ 255 ಮತಗಳನ್ನು ಪಡೆಯುವ ಮೂಲಕ ಪಾಕಿಸ್ತಾನದ ಅಧ್ಯಕ್ಷರಾಗಿ ಪಿಪಿಪಿ ಪಕ್ಷದ ಆಸಿಫ್ ಅಲಿ ಜರ್ದಾರಿ ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ.
ಉದ್ಯಮಿಯೂ ಆಗಿರುವ ಜರ್ದಾರಿ ಇದಕ್ಕೂ ಮೊದಲು 2008-13ರ ಅವಧಿಯಲ್ಲಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಇವರ ಆಯ್ಕೆಯೊಂದಿಗೆ ಇದೇ ಮೊದಲ ಬಾರಿಗೆ ಪಾಕಿಸ್ತಾನದಲ್ಲಿ ವ್ಯಕ್ತಿಯೊಬ್ಬರು ಎರಡನೇ ಅವಧಿಗೆ ಅಧ್ಯಕ್ಷರ ಪದವಿಯನ್ನು ಅಲಂಕರಿಸಿದಂತಾಗಿದೆ.
ಪಾಕಿಸ್ತಾನದಲ್ಲಿ ಅಧ್ಯಕ್ಷರನ್ನು ಪರೋಕ್ಷ ಚುನಾವಣೆಯ ಮೂಲಕ ಚುನಾವಣಾ ಕಾಲೇಜು ಮತ ಹಾಕುವ ಮೂಲಕ ಆಯ್ಕೆ ಮಾಡಲಿದ್ದು, ಪ್ರಸ್ತುತ ಪಾಕಿಸ್ತಾನ ಸೆನೆಟ್, ನ್ಯಾಷನಲ್ ಅಸೆಂಬ್ಲಿ ಮತ್ತು ಪ್ರಾಂತ್ಯಗಳ ಸದಸ್ಯರನ್ನು ಒಳಗೊಂಡಂತೆ 1109 ಅರ್ಹ ಮತದಾರರರಿದ್ದರು.