‘ಧುರಂಧರ್‌’ಗೆ ಹೆದರಿ ಬಿಲ ಸೇರಿದ ಪಾಕ್‌ನ ಉಗ್ರರು

Published : Nov 16, 2026, 06:52 AM IST
terrorists

ಸಾರಾಂಶ

ಅಜ್ಞಾತ ಬಂದೂಕುಧಾರಿಗಳ ಹತ್ಯೆಯ ಭೀತಿಯ ಹಿನ್ನೆಲೆಯಲ್ಲಿ, ಲಷ್ಕರ್-ಎ-ತೊಯ್ಬಾ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ಹಾಗೂ ಜೈಷ್‌-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಸೇರಿದಂತೆ ಪ್ರಮುಖ ಉಗ್ರರು ಪಾಕಿಸ್ತಾನ ಸರ್ಕಾರದ ಸಹಾಯದಿಂದ ರಹಸ್ಯ ಮತ್ತು ಸುರಕ್ಷಿತ ತಾಣಗಳಿಗೆ ಸ್ಥಳಾಂತರವಾಗಿದ್ದಾರೆ

ಇಸ್ಲಾಮಾಬಾದ್‌: ಅಜ್ಞಾತ ಬಂದೂಕುಧಾರಿಗಳ ಹತ್ಯೆಯ ಭೀತಿಯ ಹಿನ್ನೆಲೆಯಲ್ಲಿ, ಲಷ್ಕರ್-ಎ-ತೊಯ್ಬಾ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ಹಾಗೂ ಜೈಷ್‌-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಸೇರಿದಂತೆ ಪ್ರಮುಖ ಉಗ್ರರು ಪಾಕಿಸ್ತಾನ ಸರ್ಕಾರದ ಸಹಾಯದಿಂದ ರಹಸ್ಯ ಮತ್ತು ಸುರಕ್ಷಿತ ತಾಣಗಳಿಗೆ ಸ್ಥಳಾಂತರವಾಗಿದ್ದಾರೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.

ಇತ್ತೀಚಿನ ವರ್ಷಗಳಲ್ಲಿ ‘ಧುರಂಧರ್‌’ಗಳ ಕೈವಾಡದಿಂದಾಗಿ ಭಾರತಕ್ಕೆ ಬೇಕಾಗಿದ್ದ ಅನೇಕ ಕುಖ್ಯಾತ ಉಗ್ರರು ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಇದು ಪಾಕಿಸ್ತಾನದ ಗುಪ್ತಚರ ಹಾಗೂ ಭದ್ರತಾ ವಲಯದಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದ್ದು, ಉಗ್ರರಲ್ಲೂ ಅತೀವ ಜೀವಭಯವನ್ನು ಉಂಟುಮಾಡಿದೆ.

ಯಾರು ಎಲ್ಲಿ ಶಿಫ್ಟ್?:

‘ಧುರಂಧರ್‌’ಗಳ ಭಯದಿಂದಾಗಿ ಹಫೀಜ್ ಸಯೀದ್‌ನನ್ನು ಲಾಹೋರ್‌ನ ಜೋಹರ್ ಟೌನ್ ಪ್ರದೇಶದಿಂದ ರಾವಲ್ಪಿಂಡಿಯಲ್ಲಿರುವ ಪಾಕ್‌ ಸೇನಾ ಪ್ರಧಾನ ಕಚೇರಿಯ ಸಮೀಪದ ಗ್ಯಾರಿಸನ್ ಮೈದಾನ ಪ್ರದೇಶಕ್ಕೆ ವರ್ಗಾಯಿಸಲಾಗಿದೆ.

ಮಸೂದ್ ಅಜರ್‌ನನ್ನು ಸಿಂಧ್ ಪ್ರಾಂತ್ಯದ ನವಾಬ್‌ಶಾಹ್‌ನಲ್ಲಿರುವ ಸುರಕ್ಷಿತ ತಾಣದಲ್ಲಿ ರಕ್ಷಿಸಿಡಲಾಗಿದೆ. ಇವರಿಬ್ಬರೂ ಈಗ ಪಾಕ್‌ನ ಗುಪ್ತಚರ ಸಂಸ್ಥೆ ಐಎಸ್‌ಐ ನಿರ್ವಹಿಸುವ, ಬಿಗಿ ಭದ್ರತೆಯಿರುವ ಸುರಕ್ಷಿತ ತಾಣಗಳಲ್ಲಿ ತಂಗಿದ್ದಾರೆ ಎನ್ನಲಾಗಿದೆ.

ಕೇವಲ ಆಡಿಯೋ ಸಂದೇಶ

ಸಯೀದ್ ಲಷ್ಕರ್ ಸದಸ್ಯರನ್ನು ಖುದ್ದಾಗಿ ಭೇಟಿಯಾಗುವುದನ್ನು ನಿಲ್ಲಿಸಿದ್ದಾನೆ ಮತ್ತು ಈಗ ಅವರೊಂದಿಗೆ ಕೇವಲ ಆಡಿಯೋ ಸಂದೇಶಗಳ ಮೂಲಕ ಮಾತ್ರ ಮಾತನಾಡುತ್ತಾನೆ. ಅವನ ಭದ್ರತೆಯನ್ನು ಬಿಗಿಗೊಳಿಸಲಾಗಿದ್ದು, ಓಡಾಟದ ಮೇಲೆ ಕಠಿಣ ನಿರ್ಬಂಧಗಳನ್ನು ವಿಧಿಸಲಾಗಿದೆ ಎಂದು ತಿಳಿದುಬಂದಿದೆ.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.
Read more Articles on

Recommended Stories

ಎನ್‌ವಿಡಿಯಾ ಸಿಇಒ ರೇಸಲ್ಲಿ 3 ಭಾರತೀಯರು ಸೇರಿ 11 ಮಂದಿ
ಮೈಕ್ರೊಸಾಫ್ಟ್‌ ಸಮಸ್ಯೆ: 75 ದೇಶದ 14 ಕೋಟಿ ಬಳಕೆದಾರರ ಪರದಾಟ