ಹಂದಿ ಹೃದಯ ಕಸಿ ಮಾಡಿಸಿಕೊಂಡಅಮೆರಿಕದ 2ನೇ ವ್ಯಕ್ತಿಯೂ ಸಾವು!

KannadaprabhaNewsNetwork |  
Published : Nov 02, 2023, 01:00 AM IST

ಸಾರಾಂಶ

ಹಂದಿ ಹೃದಯದ ಕಸಿ ಮಾಡಿಕೊಂಡಿದ್ದ ಅಮೆರಿಕದ 2ನೇ ವ್ಯಕ್ತಿಯೂ ಸಹ ಮೃತಪಟ್ಟಿದ್ದಾರೆ.

ಕಸಿ ಮಾಡಿಸಿಕೊಂಡ 40 ದಿನಗಳ ಬಳಿಕ ಮರಣ ಕಳೆದ ವರ್ಷ ಕಸಿ ಮಾಡಿದ್ದ ವ್ಯಕ್ತಿಯೂ ಸಾವು ವಾಷಿಂಗ್ಟನ್‌: ಹಂದಿ ಹೃದಯದ ಕಸಿ ಮಾಡಿಕೊಂಡಿದ್ದ ಅಮೆರಿಕದ 2ನೇ ವ್ಯಕ್ತಿಯೂ ಸಹ ಮೃತಪಟ್ಟಿದ್ದಾರೆ. ಶಸ್ತ್ರಚಿಕಿತ್ಸೆಗೆ ಒಳಗಾದ 40 ದಿನಗಳ ಬಳಿಕ ಈ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಮಾಜಿ ನೌಕಾಧಿಕಾರಿ ಲಾರೆನ್ಸ್‌ ಫಾಸೀಟ್‌ (58) ಮೃತಪಟ್ಟ ವ್ಯಕ್ತಿ. ಇವರು ಹೃದಯ ವೈಫಲ್ಯದಿಂದ ಸಾಯುವ ಸ್ಥಿತಿಯಲ್ಲಿದ್ದಾಗ ಹಂದಿಯ ವಂಶವಾಹಿಗಳನ್ನು ಬಳಸಿ ಉತ್ಪಾದಿಸಲಾದ ಹೃದಯವನ್ನು ಸೆ.20ರಂದು ಕಸಿ ಮಾಡಲಾಗಿತ್ತು. ಮೊದಲ 1 ತಿಂಗಳ ಕಾಲ ಸರಿಯಾಗಿ ಕೆಲಸ ಮಾಡಿದ ಹೃದಯ ಬಳಿಕ ರಕ್ತವನ್ನು ಸ್ವೀಕರಿಸುವುದನ್ನು ನಿಯಂತ್ರಣ ಮಾಡುತ್ತಿತ್ತು. ಹೃದಯ ಕಸಿ ಮಾಡಿದ ಬಳಿಕ ಸುಮಾರು 6 ವಾರಗಳ ಕಾಲ ಇವರು ಬದುಕಿದ್ದರು ಎಂದು ಮೇರಿಲ್ಯಾಂಡ್‌ ಸ್ಕೂಲ್‌ ಆಫ್‌ ಮೆಡಿಸಿನ್‌ ವಿವಿ ಹೇಳಿದೆ. ನಮ್ಮ ಅನುಭವಗಳಿಂದ ನಾವು ಕಲಿಯುತ್ತೇವೆ. ಅದೇ ರೀತಿ ಮಾನವನ ಹೃದಯ ಲಭ್ಯವಿಲ್ಲದಾಗ, ಇತರ ಪ್ರಾಣಿಗಳ ಹೃದಯ ಬಳಕೆ ಮಾಡುವ ಸಂಶೋಧನೆ ಯಶಸ್ವಿಯಾಗಬೇಕು. ಹೀಗಾಗಿ ಈ ಪ್ರಯೋಗಕ್ಕೆ ಒಡ್ಡಿಕೊಳ್ಳುತ್ತೇನೆ ಎಂದು ಲಾರೆನ್ಸ್‌ ಹೇಳಿದ್ದರು ಎಂದು ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ. ಮೇರಿಲ್ಯಾಂಡ್‌ ಆಸ್ಪತ್ರೆಯ ವೈದ್ಯರು ಕಳೆದ ವರ್ಷವೂ ಸಹ ಹಂದಿಯ ಹೃದಯ ಕಸಿ ಮಾಡುವ ಪ್ರಯೋಗವನ್ನು ಕೈಗೊಂಡಿದ್ದರು. ಕಳೆದ ವರ್ಷ ಪ್ರಯೋಗಕ್ಕೆ ಒಳಗಾಗಿದ್ದ ಡೇವಿಡ್‌ ಬೆನೆಟ್‌ 60 ದಿನಗಳ ಬಳಿಕ ಮೃತಪಟ್ಟಿದ್ದರು.

PREV

Recommended Stories

ಪಿಒಕೆನಲ್ಲಿ ಪಹಲ್ಗಾಂ ಉಗ್ರನ ಸಾಂಕೇತಿಕ ಅಂತ್ಯಕ್ರಿಯೆ!
ಶ್ವೇತಭವನ ವಕ್ತಾರೆಯ ತುಟಿ, ಸೌಂದರ್ಯ ಹೊಗಳಿದ ಟ್ರಂಪ್!