ಹೌದು ಇಂಥದ್ದೊಂದು ಆಶ್ಚರ್ಯಕರ ಘಟನೆ ನಡೆದಿರುವುದು ಕೆನಡಾದಲ್ಲಿ. ಬರೋಬ್ಬರಿ 83 ಲಕ್ಷ ರು. ಮೌಲ್ಯದ ಪಟಾಕಿ ಹೊತ್ತೊಯ್ಯುತ್ತಿದ್ದ ಟ್ರಕ್‌ಗೆ ಹಿಂದಿನಿಂದ ವಾಹನವೊಂದು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಆದರೆ ಈ ವೇಳೆ ಪಟಾಕಿಗಳೆಲ್ಲ ಹೊತ್ತಿಕೊಂಡು ಆಕಾಶದೆತ್ತರಕ್ಕೆ ಹೋಗಿ ಬಣ್ಣದ ಬೆಳಕಿನಿಂದ ಚಿತ್ತಾರವಾಗಿ ಕಂಗೊಳಿಸಿವೆ. ಅ.26ರ ರಾತ್ರಿ ಹೆದ್ದಾರಿಯಲ್ಲಿ ಸಂಭ್ರಮದಂತೆ ಕಂಗೊಳಿಸಿದ ಈ ವಿಶೇಷವನ್ನು ನೋಡಲು ಹಲವರು ಸೇರಿದ್ದರು. ಅದೃಷ್ಟವಶಾತ್ ಇಬ್ಬರೂ ಚಾಲಕರು ಪಾರಾಗಿದ್ದಾರೆ.