ಸಾಮರಸ್ಯಕ್ಕೆ ಧಕ್ಕೆ ಕಾರಣ:ನೇಪಾಳದಲ್ಲಿ ಚೀನಾದ ಟಿಕ್‌ ಟಾಕ್‌ ನಿಷೇಧ ಜಾರಿ

KannadaprabhaNewsNetwork | Updated : Nov 14 2023, 01:16 AM IST

ಸಾರಾಂಶ

ಕಠ್ಮಂಡು: ಸಾಮಾಜಿಕ ಸಾಮರಸ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತಿದೆ ಎಂಬುದನ್ನು ಉಲ್ಲೇಖಿಸಿ ಚೀನಾದ ಪ್ರಮುಖ ಸಾಮಾಜಿಕ ಜಾಲತಾಣ ‘ಟಿಕ್‌ ಟಾಕ್‌’ ಅನ್ನು ದೇಶಾದ್ಯಂತ ನಿಷೇಧಿಸುವುದಾಗಿ ನೇಪಾಳ ಸರ್ಕಾರ ಸೋಮವಾರ ಘೋಷಿಸಿದೆ.

ಕಠ್ಮಂಡು: ಸಾಮಾಜಿಕ ಸಾಮರಸ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತಿದೆ ಎಂಬುದನ್ನು ಉಲ್ಲೇಖಿಸಿ ಚೀನಾದ ಪ್ರಮುಖ ಸಾಮಾಜಿಕ ಜಾಲತಾಣ ‘ಟಿಕ್‌ ಟಾಕ್‌’ ಅನ್ನು ದೇಶಾದ್ಯಂತ ನಿಷೇಧಿಸುವುದಾಗಿ ನೇಪಾಳ ಸರ್ಕಾರ ಸೋಮವಾರ ಘೋಷಿಸಿದೆ.

ಅಮೆರಿಕ, ಬ್ರಿಟನ್‌ ಮತ್ತು ಭಾರತ ಸೇರಿದಂತೆ ಹಲವು ದೇಶಗಳ ಬಳಿಕ ಇದೀಗ ನೇಪಾಳ ಟಿಕ್‌ ಟಾಕ್‌ ನಿಷೇಧಿಸಿದೆ. ದ್ವೇಷ ಭಾಷಣ ಪ್ರವೃತ್ತಿಯನ್ನು ಪ್ರೋತ್ಸಾಹಿಸುತ್ತಿದೆ ಎಂದು ಆರೋಪಿಸಿ ಟಿಕ್‌ ಟಾಕ್‌ ವಿರುದ್ಧ ನೇಪಾಳದ ಬಹುದೊಡ್ಡ ವರ್ಗವು ದೂಷಿಸಿತ್ತು. ಅಲ್ಲದೇ ಕಳೆದ 4 ಷರ್ವಗಳಲ್ಲಿ ಟಿಕ್‌ ಟಾಕ್‌ನಲ್ಲಿ 1,647 ಸೈಬರ್‌ ಅಪರಾಧಗಳು ನಡೆದಿದ್ದವು. ಹೀಗಾಗಿ ಸಂಸತ್ತಿನಲ್ಲಿ ಟಿಕ್‌ ಟಾಕ್‌ ನಿಷೇಧದ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ನೇಪಾಳದ ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವೆ ರೇಖಾ ಶರ್ಮಾ ತಿಳಿಸಿದ್ದಾರೆ. 2020ರಲ್ಲಿ ಭಾರತ ಟಿಕ್‌ ಟಾಕ್‌ ಸೇರಿದಂತೆ ಚೀನಾದ 59 ಆ್ಯಪ್‌ಗಳನ್ನು ನಿಷೇಧಿಸಿತ್ತು.

Share this article