ಟ್ರಂಪ್‌ ಮತ್ತೊಮ್ಮೆ ತೆರಿಗೆ ಪ್ರಹಾರ

KannadaprabhaNewsNetwork |  
Published : Sep 27, 2025, 02:00 AM ISTUpdated : Sep 27, 2025, 05:32 AM IST
ಷರೀಫ್‌ ಟ್ರಂಪ್‌ ಮುನೀರ್‌ | Kannada Prabha

ಸಾರಾಂಶ

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಇದೀಗ ಹೊಸ ತೆರಿಗೆ ಪ್ರಹಾರ ನಡೆಸಿದ್ದಾರೆ. ಬ್ರ್ಯಾಂಡೆಡ್‌ ಮತ್ತು ಪೇಟೆಂಟ್‌ ಪಡೆದಿರುವ ಔಷಧಗಳ ಆಮದಿನ ಮೇಲೆ ಶೇ.100 ತೆರಿಗೆ ವಿಧಿಸುವುದಾಗಿ ಘೋಷಿಸಿದ್ದಾರೆ.

 ವಾಷಿಂಗ್ಟನ್‌/ನವದೆಹಲಿ :  ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಇದೀಗ ಹೊಸ ತೆರಿಗೆ ಪ್ರಹಾರ ನಡೆಸಿದ್ದಾರೆ. ಬ್ರ್ಯಾಂಡೆಡ್‌ ಮತ್ತು ಪೇಟೆಂಟ್‌ ಪಡೆದಿರುವ ಔಷಧಗಳ ಆಮದಿನ ಮೇಲೆ ಶೇ.100 ತೆರಿಗೆ ವಿಧಿಸುವುದಾಗಿ ಘೋಷಿಸಿದ್ದಾರೆ.

ಇದರ ಜತೆಗೆ ಅಡುಗೆಮನೆ ಶೆಲ್ಫ್‌ನಂಥ ಕಿಚನ್‌ ಕ್ಯಾಬಿನೆಟ್‌ಗಳು ಮತ್ತು ಬಾತ್‌ರೂಮ್‌ ವ್ಯಾನಿಟೀಸ್‌ (ಸಿಂಕ್‌ ಅಥವಾ ಬೇಸಿನ್‌ ಅಳವಡಿಸಲು ಬಳಸುವ ಕ್ಯಾಬಿನೆಟ್‌) ಮೇಲೆ ಶೇ.50 ಹಾಗೂ ಅಲಂಕಾರಿಕ ಪೀಠೋಪಕರಣಗಳ ಮೇಲೆ ಶೇ.30 ಹಾಗೂ ಬೃಹತ್‌ ಟ್ರಕ್‌ಗಳ ಆಮದಿನ ಶೇ.25ರಷ್ಟು ತೆರಿಗೆ ವಿಧಿಸುವುದಾಗಿ ಘೋಷಿಸಿದ್ದಾರೆ. ಈ ಹೊಸ ತೆರಿಗೆಯು ಅ.1ರಿಂದಲೇ ಅನುಷ್ಠಾನಕ್ಕೆ ಬರಲಿದೆ.

ಈಗಾಗಲೇ ಶೇ.50ರಷ್ಟು ತೆರಿಗೆ, ಎಚ್‌1ಬಿ ವೀಸಾ ಶುಲ್ಕ ಹೆಚ್ಚಳ ಕ್ರಮದಿಂದ ಭಾರತಕ್ಕೆ ಬಿಸಿ ಮುಟ್ಟಿಸಿದ್ದ ಟ್ರಂಪ್‌ ಅವರ ಈ ಹೊಸ ಸುಂಕ ಘೋಷಣೆ, ಭಾರತದ ಔಷಧ ಉದ್ಯಮ ಹಾಗೂ ಷೇರುಪೇಟೆಯಲ್ಲಿ ತಲ್ಲಣದ ವಾತಾವರಣ ಸೃಷ್ಟಿಸಿದೆ. ಏಕೆಂದರೆ 2024ರಲ್ಲಿ 2.47 ಲಕ್ಷ ಕೋಟಿ ರು. ಮೌಲ್ಯದ ಔಷಧವನ್ನು ವಿದೇಶಗಳಿಗೆ ಭಾರತ ರಫ್ತು ಮಾಡಿದ್ದು, ಇದರಲ್ಲಿ ಶೇ.31 ಅಥವಾ 77,138 ಕೋಟಿ ರು. ಮೌಲ್ಯದ ಔಷಧಗಳನ್ನು ಅಮೆರಿಕಕ್ಕೇ ಕಳುಹಿಸಿಕೊಟ್ಟಿತ್ತು.

ಆದರೆ ‘ಬ್ರ್ಯಾಂಡೆಡ್‌ ಮತ್ತು ಪೇಟೆಂಟ್‌ ಪಡೆದಿರುವ ಔಷಧಗಳ ಮೇಲಷ್ಟೇ ಟ್ರಂಪ್‌ ಶೇ.100ರಷ್ಟು ತೆರಿಗೆ ಹಾಕಿದ್ದಾರೆ. ಭಾರತ ಹೆಚ್ಚಾಗಿ ಜೆನರಿಕ್‌ ಔಷಧಗಳನ್ನು ರಫ್ತು ಮಾಡುತ್ತದೆ. ಹೀಗಾಗಿ ಭಾರತದ ಮೇಲೆ ದೊಡ್ಡ ಪರಿಣಾಮ ಆಗಲ್ಲ’ ಎಂದು ಫಾರ್ಮಾಸ್ಯುಟಿಕಲ್ಸ್‌ ಎಕ್ಸ್‌ಪೋರ್ಟ್‌ ಪ್ರಮೋಷನ್ ಕೌನ್ಸಿಲ್‌ ಆಫ್‌ ಇಂಡಿಯಾದ ಅಧ್ಯಕ್ಷ ನಮಿತ್‌ ಜೋಶಿ ತಿಳಿಸಿದ್ದಾರೆ.

ಅಮೆರಿಕದಲ್ಲೇ ನಿರ್ಮಿಸಲಿ- ಟ್ರಂಪ್‌:

‘ಅ.1ರಿಂದಲೇ ಜಾರಿಗೆ ಬರುವಂತೆ ವಿದೇಶದಿಂದ ಆಮದು ಮಾಡಿಕೊಳ್ಳಲಾಗುವ ಬ್ರ್ಯಾಂಡೆಡ್‌ ಮತ್ತು ಪೇಟೆಂಟ್‌ ಪಡೆದಿರುವ ಔಷಧಿಗಳ ಮೇಲೆ ಶೇ.100ರಷ್ಟು ತೆರಿಗೆ ವಿಧಿಸಲಾಗುವುದು. ಔಷಧ ಉತ್ಪಾದನಾ ಕಂಪನಿಗಳು ಅಮೆರಿಕದಲ್ಲೇ ತಮ್ಮ ಉತ್ಪಾದನಾ ಘಟಕ ಸ್ಥಾಪಿಸಿದರೆ ತೆರಿಗೆ ಉಳಿಸಬಹುದು’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ತಮ್ಮ ಸಾಮಾಜಿಕ ಜಾಲತಾಣವಾದ ಟ್ರುಥ್‌ ಸೋಷಿಯಲ್‌ನಲ್ಲಿ ತಿಳಿಸಿದ್ದಾರೆ.

ಭಾರತಕ್ಕೇನು ಪರಿಣಾಮ?

- ಔಷಧಕ್ಕೆ ಟ್ರಂಪ್‌ ಹೇರಿರುವ ತೆರಿಗೆಯಿಂದ ಭಾರತಕ್ಕಾಗುವ ಪರಿಣಾಮದ ಬಗ್ಗೆ ಮಿಶ್ರ ಪ್ರತಿಕ್ರಿಯೆ ಇದೆ

- 77000 ಕೋಟಿ ರು.ನಷ್ಟು ಔಷಧವನ್ನು ಭಾರತ ರಫ್ತು ಮಾಡುವುದರಿಂದ ನಷ್ಟವಾಗುತ್ತದೆ: ಒಂದು ವಾದ- ಭಾರತ ಕಳಿಸುವುದು ಜೆನರಿಕ್‌ ಔಷಧಗಳನ್ನು. ಅದಕ್ಕೆ ತೆರಿಗೆ ಇಲ್ಲ. ಏನೂ ಆಗದು: ಮತ್ತೊಂದು ವಾದ

PREV
Read more Articles on

Recommended Stories

ಅಮೆರಿಕದಿಂದ ಅನ್ಮೋಲ್‌ ಬಿಷ್ಣೋಯಿ ಭಾರತಕ್ಕೆ ಗಡೀಪಾರು
ವಿದ್ಯಾರ್ಥಿ ದಂಗೆ ಹತ್ತಿಕ್ಕಿದ ಕೇಸಲ್ಲಿ ಬಾಂಗ್ಲಾ ಮಾಜಿ ಪ್ರಧಾನಿಗೆ ಗಲ್ಲು