ಸಂಧಾನ ಮಾತುಕತೆ ಮಧ್ಯೆಯೇ ಇರಾನಿಗೆ ಟ್ರಂಪ್‌ ಡಬಲ್‌ ಬೆದರಿಕೆ

Published : Jun 22, 2026, 06:55 AM IST
trump warns iran

ಸಾರಾಂಶ

ಲೆಬನಾನ್‌ ಮೇಲೆ ದಾಳಿ ಮಾಡುವ ಮೂಲಕ ಅಮೆರಿಕ ಮತ್ತು ಇರಾನ್‌ ನಡುವೆ ಏರ್ಪಟ್ಟಿರುವ ಶಾಂತಿ ಒಪ್ಪಂದವನ್ನು ಇಸ್ರೇಲ್‌ ಉಲ್ಲಂಘಿಸುತ್ತಿದೆ ಎಂಬ ಆರೋಪಗಳ ನಡುವೆ, ಹಿಜ್ಬುಲ್ಲಾಗಳನ್ನು ನಿಯಂತ್ರಿಸದಿದ್ದರೆ ಇರಾನ್‌ ಮೇಲೆ ಭಾರೀ ಆಕ್ರಮಣ ಮಾಡುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆರೋಪಿಸಿದ್ದಾರೆ

 ವಾಷಿಂಗ್ಟನ್‌: ಲೆಬನಾನ್‌ ಮೇಲೆ ದಾಳಿ ಮಾಡುವ ಮೂಲಕ ಅಮೆರಿಕ ಮತ್ತು ಇರಾನ್‌ ನಡುವೆ ಏರ್ಪಟ್ಟಿರುವ ಶಾಂತಿ ಒಪ್ಪಂದವನ್ನು ಇಸ್ರೇಲ್‌ ಉಲ್ಲಂಘಿಸುತ್ತಿದೆ ಎಂಬ ಆರೋಪಗಳ ನಡುವೆ, ಹಿಜ್ಬುಲ್ಲಾಗಳನ್ನು ನಿಯಂತ್ರಿಸದಿದ್ದರೆ ಇರಾನ್‌ ಮೇಲೆ ಭಾರೀ ಆಕ್ರಮಣ ಮಾಡುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆರೋಪಿಸಿದ್ದಾರೆ. ಅಲ್ಲದೆ, ಮುಂದಿನ ಸುತ್ತಿನ ಒಪ್ಪಂದ ಏರ್ಪಡದಿದ್ದರೆ ಹೋರ್ಮುಜ್‌ ಜಲಸಂಧಿ ಮೇಲೆ ನಿಯಂತ್ರಣ ಹೇರಿ ಟೋಲ್‌ ಸಂಗ್ರಹಿಸುತ್ತೇವೆ ಎಂದಿದ್ದಾರೆ.

ಇರಾನ್‌-ಅಮೆರಿಕ ನಡುವೆ ಮುಂದಿನ ಸುತ್ತಿನ ಸಂಧಾನ ಸಭೆ ಸ್ವಿಜರ್ಲೆಂಡ್‌ನಲ್ಲಿ ಭಾನುವಾರ ಆರಂಭ ಆಗಿರುವ ನುಡುವೆಯೇ ಅವರ ಈ ಬೆದರಿಕೆ ಬಂದಿದೆ.

ಟ್ರುತ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, ‘ಲೆಬನಾನ್‌ನಲ್ಲಿರುವ ತಮ್ಮ ಬೆಂಬಲಿತ ಗುಂಪುಗಳು ನಮಗೆ ಹಾನಿ ಮಾಡದಂತೆ ಇರಾನ್‌ ತಡೆಯಬೇಕು. ಇಲ್ಲದಿದ್ದರೆ ನಾವು ಇರಾನ್‌ ಮೇಲೆ ಕಳೆದ ವಾರ ಮಾಡಿದಂತೆ ಭೀಕರ ದಾಳಿ ಮಾಡುತ್ತೇವೆ’ ಎಂದು ಬರೆದಿದ್ದಾರೆ.

ಅತ್ತ ಮಾಧ್ಯಮಗಳ ಜತೆ ಮಾತನಾಡಿದ ಅಧ್ಯಕ್ಷ, ‘ಇರಾನ್‌ ಜತೆ ಒಪ್ಪಂದ ಏರ್ಪಡದಿದ್ದರೆ ನಾವು ಹೋರ್ಮುಜ್‌ಅನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತೇವೆ. ಆ ಮಾರ್ಗದಲ್ಲಿ ಸಾಗುವ ಹಡಗುಗಳಿಂದ ಟೋಲ್‌ ಕೂಡ ಸಂಗ್ರಹ ಮಾಡುತ್ತೇವೆ. ಹೋರ್ಮುಜ್‌ ದಾಟುವ ಶೇ.20ರಷ್ಟು ತೈಲವನ್ನೂ ನಾವೇ ಇಟ್ಟುಕೊಳ್ಳುತ್ತೇವೆ’ ಎಂದು ಹೇಳಿದ್ದಾರೆ.

ಶಾಂತಿ ಸ್ಥಾಪನೆಯ ಅಂತಿಮ ಒಪ್ಪಂದಕ್ಕಾಗಿ ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಅಮೆರಿಕ ಮತ್ತು ಇರಾನ್‌ ಕಡೆಯವರು ಸ್ವಿಜರ್ಲೆಂಡ್‌ಗೆ ತೆರಳಿರುವ ಹೊತ್ತಿನಲ್ಲೇ ಟ್ರಂಪ್‌ ಕಡೆಯಿಂದ ಬಂದಿರುವ ಈ ಎಚ್ಚರಿಕೆ, ಮಧ್ಯಪ್ರಾಚ್ಯವನ್ನು ಮತ್ತೆ ಉದ್ವಿಗ್ನ ಮಾಡುವುದಕ್ಕೆ ಬರೆದ ಮುನ್ನುಡಿಯಂತಿದೆ.

 ಮೂರೂವರೆ ತಿಂಗಳಿನಿಂದ ಬಿಕ್ಕಟ್ಟು ಬಗೆಹರಿಸಲು ಸ್ವಿಜರ್ಲೆಂಡ್‌ನಲ್ಲಿ ಸಂಧಾನ ಸಭೆ ಆಯೋಜನೆ

- ಇದರ ನಡುವೆಯೇ ಇರಾನ್‌ಗೆ ಕಠಿಣ ಪದ ಬಳಸಿ ಎರಡು ಎಚ್ಚರಿಕೆಗಳನ್ನು ನೀಡಿದ ಡೊನಾಲ್ಡ್‌ ಟ್ರಂಪ್‌

- ಇಸ್ರೇಲ್‌ ಮೇಲೆ ದಾಳಿ ನಡೆಸುತ್ತಿರುವ ಹಿಜ್ಬುಲ್ಲಾ ಉಗ್ರರನ್ನು ಇರಾನ್‌ ನಿಯಂತ್ರಿಸದಿದ್ದರೆ ಮತ್ತೆ ದಾಳಿ

- ಮುಂದಿನ ಸುತ್ತಿನ ಒಪ್ಪಂದಕ್ಕೆ ಒಪ್ಪಿಕೊಳ್ಳದಿದ್ದರೆ ಹೋರ್ಮುಜ್‌ ಜಲಸಂಧಿ ಮೇಲೆ ನಿಯಂತ್ರಣ ಹೇರುತ್ತೇವೆ

- ಟ್ರಂಪ್‌ರಿಂದ 2 ಎಚ್ಚರಿಕೆ. ಸಂಧಾನ ಮಾತುಕತೆ ಮಧ್ಯೆಯೇ ನೀಡಿದ ಬೆದರಿಕೆಯ ಬಗ್ಗೆ ಭಾರಿ ಚರ್ಚೆ

- ಈವರೆಗೂ ಅಮೆರಿಕ ಅಧ್ಯಕ್ಷರ ಎಚ್ಚರಿಕೆಗೆ ಯಾವುದೇ ಉತ್ತರ ಕೊಟ್ಟಿಲ್ಲ ಇರಾನ್‌ ಸರ್ಕಾರದ ಪ್ರಮುಖರು

ಯುದ್ಧ ಗೆದ್ದಿದ್ದು ಇರಾನ್‌: 92% ಇಸ್ರೇಲ್‌ ಜನರು!

ಜೆರುಸಲೇಂ: ಅಮೆರಿಕ- ಇರಾನ್‌ ಐತಿಹಾಸಿಕ ಶಾಂತಿ ಒಪ್ಪಂದದಿಂದಾಗಿ 3 ತಿಂಗಳ ಸಂಘರ್ಷಕ್ಕೇನೋ ಕೊನೆ ಬಿದ್ದಿದೆ. ಆದರೆ ಈ ಯುದ್ಧದಲ್ಲಿ ಇರಾನ್‌ ಮೇಲುಗೈ ಸಾಧಿಸಿದೆ ಎಂದು ಇರಾನ್‌ ಮೇಲೆ ಅಮೆರಿಕದ ಜತೆಗೂಡಿ ದಾಳಿ ನಡೆಸಿದ್ದ ಇಸ್ರೇಲ್‌ನ ಶೇ.92ರಷ್ಟು ನಾಗರಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹುಗೆ ಮುಜುಗರ ಸೃಷ್ಟಿಸಿದೆ.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.
Read more Articles on

Recommended Stories

ಮತ್ತೆ ಟ್ರಂಪ್‌-ಮೆಲೋನಿ ಜಟಾಪಟಿ
ಇಸ್ರೇಲ್‌-ಹಿಜ್ಬುಲ್ಲಾ ನಡುವೆಯೂ ಕದನ ವಿರಾಮ