23 ಲಕ್ಷ ರು. ಕೊಟ್ಟರೆ ಇನ್ನು ಯುಎಇ ಪೌರತ್ವ ಸಿಗುತ್ತೆ! ಹೊಸ ಗೋಲ್ಡ್‌ ವೀಸಾ ಯೋಜನೆ ಘೋಷಣೆ

Published : Jul 08, 2025, 06:33 AM IST
uae golden visa for nurse teachers and youtube

ಸಾರಾಂಶ

ಕೊಲ್ಲಿ ದೇಶ ಯುಎಇ ತನ್ನ ಗೋಲ್ಡನ್‌ ವೀಸಾ ನೀತಿಯಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಹೀಗಾಗಿ ಕೇವಲ 23 ಲಕ್ಷ ರು. ನೀಡಿ ಅರ್ಹ ಭಾರತೀಯರು ಸುಲಭವಾಗಿ ಯುಎಇ ದೇಶದ ಪೌರತ್ವ ಪಡೆಯಬಹುದಾಗಿದೆ.

ದುಬೈ: ಕೊಲ್ಲಿ ದೇಶ ಯುಎಇ ತನ್ನ ಗೋಲ್ಡನ್‌ ವೀಸಾ ನೀತಿಯಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಹೀಗಾಗಿ ಕೇವಲ 23 ಲಕ್ಷ ರು. ನೀಡಿ ಅರ್ಹ ಭಾರತೀಯರು ಸುಲಭವಾಗಿ ಯುಎಇ ದೇಶದ ಪೌರತ್ವ ಪಡೆಯಬಹುದಾಗಿದೆ.

ಈ ಹಿಂದೆ ಕನಿಷ್ಠ 4.7 ಕೋಟಿ ಮೌಲ್ಯದ ಆಸ್ತಿ ಖರೀದಿ ಇಲ್ಲವೇ ಹೂಡಿಕೆ ಮಾಡಿದವರಿಗೆ ಇದ್ದ ಗೋಲ್ಡ್‌ ವೀಸಾ ನೀಡಲಾಗುತ್ತಿತ್ತು. ಆ ನೀತಿಯನ್ನು ಇದೀಗ ಸರಳಗೊಳಿಸಲಾಗಿದೆ. ಅದರನ್ವಯ ವಿಜ್ಞಾನಿಗಳು, ಶಿಕ್ಷಕರು ಮತ್ತು ವಿಶ್ವವಿದ್ಯಾಲಯದ ಅಧ್ಯಾಪಕರು, 15ಕ್ಕಿಂತ ಹೆಚ್ಚು ವರ್ಷಗಳ ಅನುಭವ ಹೊಂದಿರುವ ದಾದಿಯರು, 25 ವರ್ಷಕ್ಕಿಂತ ಮೇಲ್ಪಟ್ಟ ಹಾಗೂ ಮಾನ್ಯತೆ ಪಡೆದ ಯೂಟ್ಯೂಬರ್‌, ಪಾಡ್‌ಕಾಸ್ಟರ್‌, ಡಿಜಿಟಲ್ ಕ್ರಿಯೇಟರ್‌, ಇ-ಸ್ಪೋರ್ಟ್ಸ್ ವೃತ್ತಿಪರರು ಸೇರಿದಂತೆ ಹತ್ತು ಹಲವು ಉದ್ಯೋಗಗಳಲ್ಲಿ ತೊಡಗಿರುವವರಿಗೆ ಯುಎಇ ವಾಸದ ಅವಕಾಶ ಸಿಗಲಿದೆ. ಜತೆಗೆ, 23.30 ಲಕ್ಷ ರು. ಪಾವತಿಸಿದರೆ ಭಾರತೀಯರು ಆಮರಣಾಂತ ಯುಎಇಯಲ್ಲೇ ನೆಲೆಬಹುದಾಗಿದೆ.

ಹೊಸ ಗೋಲ್ಡ್‌ ವೀಸಾದ ಪ್ರಯೋಗಕ್ಕೆ ಭಾರತ, ಬಾಂಗ್ಲಾದೇಶವನ್ನು ಆಯ್ಕೆ ಮಾಡಲಾಗಿದೆ. ಅರ್ಜಿದಾರರ ಪರಿಶೀಲನೆಯ ಹೊಣೆಯನ್ನು ರಾಯದ್ ಗ್ರೂಪ್‌ಗೆ ವಹಿಸಲಾಗಿದೆ. ಇಲ್ಲಿ ಮೊದಲು ಅರ್ಜಿದಾರರ ಹಿನ್ನೆಲೆ, ಅವರ ವಿರುದ್ಧ ಇರಬಹುದಾದ ಅಕ್ರಮ ಹಣ ವರ್ಗಾವಣೆ ಅಥವಾ ಕ್ರಿಮಿನಲ್‌ ಅಪರಾಧಗಳು, ಸಾಮಾಜಿಕ ಜಾಲತಾಣ ಖಾತೆ ಪರಿಶೀಲಿಸಿ ಬಳಿಕ ಅರ್ಜಿ ಅಂಗೀಕರಿಸಲಾಗುವುದು. 

PREV
Read more Articles on