ಪತ್ನಿಗೆ ಇರಿದು 224 ತುಂಡು ಮಾಡಿ ನದಿಗೆ ಎಸೆದ ಗಂಡ!

KannadaprabhaNewsNetwork |  
Published : Apr 08, 2024, 01:05 AM ISTUpdated : Apr 08, 2024, 04:32 AM IST
ಲಂಡನ್‌ | Kannada Prabha

ಸಾರಾಂಶ

ಇತ್ತೀಚೆಗೆ ಭಾರತದ ಕೆಲವು ಕಡೆ ಯುವತಿಯರ ದೇಹಗಳನ್ನು ನೂರಾರು ತುಂಡು ಮಾಡಿ ಬಿಸಾಕಿದ ಘಟನೆ ನಡೆದಿದ್ದವು. ಇಂಥ ಘಟನೆ ಈಗ ಬ್ರಿಟನ್‌ನಲ್ಲೂ ಸಂಭವಿಸಿದೆ.

ಲಂಡನ್‌: ಇತ್ತೀಚೆಗೆ ಭಾರತದ ಕೆಲವು ಕಡೆ ಯುವತಿಯರ ದೇಹಗಳನ್ನು ನೂರಾರು ತುಂಡು ಮಾಡಿ ಬಿಸಾಕಿದ ಘಟನೆ ನಡೆದಿದ್ದವು. ಇಂಥ ಘಟನೆ ಈಗ ಬ್ರಿಟನ್‌ನಲ್ಲೂ ಸಂಭವಿಸಿದೆ. ದ್ವೇಷಕ್ಕಾಗಿ ಪತಿಯೇ ತನ್ನ ಮನೆಯ ಬೆಡ್‌ರೂಂನಲ್ಲಿ ಪತ್ನಿಯನ್ನು ಇರಿದು ಸಾಯಿಸಿದ್ದಲ್ಲದೆ, ಆಕೆಯ ದೇಹವನ್ನು 200ಕ್ಕೂ ಹೆಚ್ಚು ತುಂಡು ಮಾಡಿದ್ದ ಹಾಗೂ 1 ವಾರ ಕಾಲ ಅಡುಗೆಮನೆಯ ಎಸಿ ಕೊಠಡಿಯಲ್ಲಿ ಬಚ್ಚಿಟ್ಟಿದ್ದ ಘಟನೆ ಬ್ರಿಟನ್‌ನಲ್ಲಿ ಘಟಿಸಿದೆ.

ಬೆಚ್ಚಿಬೀಳಿಸುವ ಈ ಕೃತ್ಯ ಎಸಗಿದ್ದ ದುರುಳ ಪತಿಗೆ ಈಗ ತಪ್ಪೊಪ್ಪಿಕೊಂಡಿದ್ದು, ಸೋಮವಾರ ಶಿಕ್ಷೆ ಪ್ರಕಟವಾಗಲಿದೆ.

ಮೆಟ್ಸನ್‌ (28) ಎಂಬಾತ ತನ್ನ ಪತ್ನಿ ಬ್ರಾಮ್ಲಿ (26) ಎಂಬಾಕೆಯನ್ನು ಮಾರ್ಚ್‌ 2023ರಲ್ಲಿ ಅಮಾನುಷವಾಗಿ ಕೊಲೆ ಮಾಡಿ ತನ್ನ ಕಿಚನ್‌ನಲ್ಲಿ ತುಂಡು ತುಂಡು ಮಾಡಿ ಪ್ಲಾಸ್ಟಿಕ್‌ ಕವರ್‌ಗಳಲ್ಲಿ ಹಾಕಿ ಬಚ್ಚಿಟ್ಟಿದ್ದ. ಒಂದು ವಾರದ ಬಳಿಕ ಗೆಳೆಯನಿಗೆ 50 ಯೂರೋ (₹4,517) ಹಣ ನೀಡಿ ವೈಥಾಂ ನದಿಯಲ್ಲಿ ಬಿಸಾಡಿದ್ದ. ಮರುದಿನವೇ ಅಲ್ಲಿಂದ 224 ದೇಹದ ತುಂಡುಗಳನ್ನು ಪತ್ತೆಹಚ್ಚಲಾಗಿತ್ತು. ಒಂದು ವರ್ಷದಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಲೇ ಬಂದಿದ್ದ ಆರೋಪಿ ಕೊನೆಗೂ ಶುಕ್ರವಾರ ತಪ್ಪೊಪ್ಪಿಕೊಂಡಿದ್ದು, ಸೋಮವಾರ ಆತನಿಗೆ ಶಿಕ್ಷೆ ಪ್ರಕಟವಾಗಲಿದೆ.

ಪ್ರಕರಣದ ಹಿನ್ನೆಲೆ:

ಈತ ಮೊದಲಿಗೆ ತನ್ನ ಪತ್ನಿಗೆ ಪ್ರಿಯವಾಗಿದ್ದ ಸಾಕುನಾಯಿ, ಬೆಕ್ಕು, ಮೊಲ ಮುಂತಾದವುಗಳನ್ನು ವಾಷಿಂಗ್‌ ಮಷಿನ್‌, ಫ್ರಿಡ್ಜ್‌ ಮುಂತಾದವುಗಳಿಗೆ ಹಾಕಿ ಕ್ರೌರ್ಯ ಮೆರೆದಿದ್ದ. ಇದರಿಂದ ಆಕ್ರೋಶಗೊಂಡಿದ್ದ ಪತ್ನಿ ತನ್ನ ಸಾಕುಮೊಲಗಳ ಜೊತೆ ಓಡಿಹೋಗಿ ಪೊಲೀಸರಿಗೆ ದೂರನ್ನೂ ಸಹ ನೀಡಿದ್ದಳು. ಅಲ್ಲದೆ 16 ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ದಂಪತಿಗೆ ಕೊಲೆ ಸಂಭವಿಸುವ ಕೆಲ ದಿನಗಳ ಹಿಂದೆ ಯಾವುದೋ ಕಾರಣಕ್ಕೆ ಮನಸ್ತಾಪವಿತ್ತು ಎಂದು ಆಕೆಯ ಪೋಷಕರು ಕೋರ್ಟ್‌ ವಿಚಾರಣೆಯ ವೇಳೆ ತಿಳಿಸಿದ್ದರು.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.

Recommended Stories

ಜನಸಂಖ್ಯೆ ಹೆಚ್ಚಳಕ್ಕೆ ಚೀನಾದಲ್ಲಿ ಕಾಂಡೋಮ್‌ ಟ್ಯಾಕ್ಸ್‌
ರಷ್ಯಾ-ಉಕ್ರೇನ್‌ ಯುದ್ಧ ನಿಲ್ಲದಿದ್ದರೆ 3ನೇ ವಿಶ್ವಯುದ್ಧ : ಟ್ರಂಪ್‌ ಎಚ್ಚರಿಕೆ