ಒಂದೇ ದಿನ ರಷ್ಯಾ ಮೇಲೆ1600 ಡ್ರೋನ್‌ಗಳ ಬಳಸಿ ಉಕ್ರೇನ್‌ ಭೀಕರ ದಾಳಿ!

KannadaprabhaNewsNetwork |  
Published : Sep 21, 2026, 03:45 AM ISTUpdated : Sep 21, 2026, 05:20 AM IST
war

ಸಾರಾಂಶ

4 ವರ್ಷಗಳಿಂದ ನಡೆಯುತ್ತಿರುವ ರಷ್ಯಾ- ಉಕ್ರೇನ್‌ ನಡುವಿನ ಸಂಘರ್ಷ ಏಕಾಏಕಿ ಭಾನುವಾರ ಕಾವು ಪಡೆದಿದೆ. ಉಕ್ರೇನ್‌ ಪಡೆಗಳು ರಷ್ಯಾ ಸಂಸತ್‌ ಚುನಾವಣೆಯ ಕೊನೆಯ ದಿನ 1600 ಡ್ರೋನ್‌ ಬಳಸಿ ಭೀಕರ ದಾಳಿ ನಡೆಸಿವೆ. ಈ ವೇಳೆ ಇಬ್ಬರು ಸಾವನ್ನಪ್ಪಿದ್ದು 20 ಮಂದಿ ಗಾಯಗೊಂಡಿದ್ದಾರೆ.

ಮಾಸ್ಕೋ: 4 ವರ್ಷಗಳಿಂದ ನಡೆಯುತ್ತಿರುವ ರಷ್ಯಾ- ಉಕ್ರೇನ್‌ ನಡುವಿನ ಸಂಘರ್ಷ ಏಕಾಏಕಿ ಭಾನುವಾರ ಕಾವು ಪಡೆದಿದೆ. ಉಕ್ರೇನ್‌ ಪಡೆಗಳು ರಷ್ಯಾ ಸಂಸತ್‌ ಚುನಾವಣೆಯ ಕೊನೆಯ ದಿನ 1600 ಡ್ರೋನ್‌ ಬಳಸಿ ಭೀಕರ ದಾಳಿ ನಡೆಸಿವೆ. ಈ ವೇಳೆ ಇಬ್ಬರು ಸಾವನ್ನಪ್ಪಿದ್ದು 20 ಮಂದಿ ಗಾಯಗೊಂಡಿದ್ದಾರೆ.

ಇದು ರಷ್ಯಾದ ಮೇಲೆ ನಡೆದ ಅತಿ ಭೀಕರ ದಾಳಿ ಅಂತಲೇ ಬಣ್ಣಿಸಲಾಗುತ್ತಿದೆ. ರಾಜಧಾನಿಯ ಮೇಯರ್ ಸೆರ್ಗೆಯ್ ಸೊಬ್ಯಾನಿನ್ ಮಾತನಾಡಿ, 1,600 ಕ್ಕೂ ಹೆಚ್ಚು ಡ್ರೋನ್‌ಗಳನ್ನು ತಡೆಹಿಡಿದು ಹೊಡೆದುರುಳಿಸಲಾಗಿದೆ, ಅವುಗಳಲ್ಲಿ 450 ಮಾಸ್ಕೋವನ್ನು ಗುರಿಯಾಗಿರಿಸಿಕೊಂಡಿದ್ದವು ಎಂದಿದ್ದಾರೆ.

ಈ ದಾಳಿಯಿಂದ ಇಲ್ಲಿ ತೈಲ ಸಂಸ್ಕರಣಾಗಾರ ಮತ್ತು ವಸತಿ ಕಟ್ಟಡಗಳಿಗೆ ಹಾನಿಯಾಗಿವೆ ಎಂದು ರಷ್ಯಾ ಆರೋಪಿಸಿದೆ. ಮೊಬೈಲ್‌ ವಿಡಿಯೋ ದೃಶ್ಯಗಳಲ್ಲಿ ಮೂಲಸೌಕರ್ಯ ಘಟಕಗಳು ಧಗಧಗ ಉರಿಯುತ್ತಿರುವ ದೃಶ್ಯಗಳಿವೆ. ಆದರೆ ಇದುವರೆಗೆ ಉಕ್ರೇನ್‌ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

4 ವರ್ಷಗಳಿಂದ ನಡೆಯುತ್ತಿರುವ ರಷ್ಯಾ- ಉಕ್ರೇನ್‌ ಕದನ ಭಾನುವಾರ ತೀವ್ರ

ರಷ್ಯಾ ಸಂಸತ್‌ ಚುನಾವಣೆಯ ಕಡೆಯ ದಿನ ಶತ್ರು ವಿರುದ್ಧ ಮುಗಿಬಿದ್ದ ಉಕ್ರೇನ್‌

ರಷ್ಯಾದ ವಿವಿಧ ಭಾಗಗಳನ್ನು ಗುರಿಯಾಗಿಸಿ ಒಂದೇ ದಿನ 1600 ಡ್ರೋನ್‌ ದಾಳಿ

ದಾಳಿಯಲ್ಲಿ ತೈಲ ಸಂಸ್ಕರಣಾ ಘಟಕ, ವಸತಿ ಸಮುಚ್ಛಯಗಳಿಗೆ ಬೆಂಕಿ, ಹಾನಿ

ಬಹುತೇಕ ಡ್ರೋನ್‌ ಹೊಡೆದುರುಳಿಸಿದ್ದಾಗಿ ಮಾಹಿತಿ ನೀಡಿದ ರಷ್ಯಾ ಸೇನೆ

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.
Read more Articles on

Recommended Stories

ಸ್ಮಿತ್‌ ಮಚ್ಛರ್‌ ಅವರ ಮೇಲೆ ಕಾಕ್‌ಪಿಟ್‌ನಲ್ಲಿದ್ದ ಕೈಕೊಡಲಿ ಬಳಸಿ ದಾಳಿ
ಸ್ಮಿತ್‌ಗೆ ಇರಿತದ ಸುದ್ದಿ ಮುಟ್ಟಿಸಿದ್ದು 8ರ ಬಾಲಕಿ!