ಷರತ್ತಿನ ಸಂಧಾನದತ್ತ ಅಮೆರಿಕ, ಇರಾನ್‌ ಹೆಜ್ಜೆ: 2 ದಿನದ ಗಡುವು

Published : May 07, 2026, 07:53 AM IST
Donald Trump

ಸಾರಾಂಶ

‘ಅಮೆರಿಕವು ಯುದ್ಧವನ್ನು ಕೊನೆಗೊಳಿಸಿ, ಹೋರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯಲು ಇರಾನ್ ಜೊತೆ ಒಪ್ಪಂದ ಮಾಡಿಕೊಳ್ಳಲು ಹತ್ತಿರದಲ್ಲಿದೆ. ಇದಕ್ಕಾಗಿ ಶೀಘ್ರದಲ್ಲೇ ಎರಡೂ ದೇಶಗಳು ತಿಳಿವಳಿಕೆ ಪತ್ರಕ್ಕೆ ಸಹಿ ಹಾಕಲಿವೆ.

 ವಾಷಿಂಗ್ಟನ್‌: ‘ಅಮೆರಿಕವು ಯುದ್ಧವನ್ನು ಕೊನೆಗೊಳಿಸಿ, ಹೋರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯಲು ಇರಾನ್ ಜೊತೆ ಒಪ್ಪಂದ ಮಾಡಿಕೊಳ್ಳಲು ಹತ್ತಿರದಲ್ಲಿದೆ. ಇದಕ್ಕಾಗಿ ಶೀಘ್ರದಲ್ಲೇ ಎರಡೂ ದೇಶಗಳು ತಿಳಿವಳಿಕೆ ಪತ್ರಕ್ಕೆ ಸಹಿ ಹಾಕಲಿವೆ. ಈ ಬಗ್ಗೆ 48 ಗಂಟೆಗಳ ಒಳಗೆ ಇರಾನ್‌ನಿಂದ ಪ್ರತಿಕ್ರಿಯೆ ಬರುವ ನಿರೀಕ್ಷೆಯಿದೆ’ ಎಂದು ಅಮೆರಿಕದ ಇಬ್ಬರು ಅಧಿಕಾರಿಗಳನ್ನು ಉಲ್ಲೇಖಿಸಿ ಅಮೆರಿಕ ಸುದ್ದಿಸಂಸ್ಥೆ ಆ್ಯಕ್ಸಿಯೋಸ್ ಬುಧವಾರ ವರದಿ ಮಾಡಿದೆ.

ಇದರ ಬೆನ್ನಲ್ಲೇ ಟ್ರುತ್‌ ಸೋಷಿಯಲ್‌ನಲ್ಲಿ ಗುಡುಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ‘ಇರಾನ್‌ ಈ ಡೀಲ್‌ಗೆ ಒಪ್ಪಬೇಕು. ಇಲ್ಲದಿದ್ದರೆ ಬಾಂಬ್ ದಾಳಿ ಪ್ರಾರಂಭವಾಗುತ್ತದೆ. ದುಃಖಕರವೆಂದರೆ, ಮೊದಲಿಗಿಂತ ಹೆಚ್ಚಿನ ತೀವ್ರತೆಯಲ್ಲಿ ಇರುತ್ತದೆ’ ಎಂದಿದ್ದಾರೆ. ಇದಕ್ಕೂ ಮುನ್ನ ಅಮೆರಿಕ ವಿದೇಶಾಂಗ ಸಚಿವ ಮಾರ್ಕೊ ರುಬಿಯೊ, ಮಾತನಾಡಿ ‘ಯುದ್ಧ ಕಾರ್ಯಾಚರಣೆ ಮುಗಿದಿದೆ’ ಎಂದಿದ್ದಾರೆ. ಆದರೆ ಭವಿಷ್ಯದಲ್ಲೂ ಯುದ್ಧ ಮಾಡುವುದಿಲ್ಲವೆ ಎಂಬುದಕ್ಕೆ ಉತ್ತರಿಸಲು ನಿರಾಕರಿಸಿದ್ದಾರೆ.

ಒಪ್ಪಂದ ಏನು?:

‘ಎರಡೂ ಕಡೆಯವರು ಯುದ್ಧವನ್ನು ಕೊನೆಗೊಳಿಸಲು ಮತ್ತು ಹೆಚ್ಚು ವಿವರವಾದ ಪರಮಾಣು ಮಾತುಕತೆಗಳಿಗೆ ಚೌಕಟ್ಟನ್ನು ರೂಪಿಸಲು 1 ಪುಟದ ಒಪ್ಪಂದ ಪತ್ರಕ್ಕೆ ಒಪ್ಪಿಗೆ ಸೂಚಿಸುವ ಹಂತಕ್ಕೆ ಬಂದಿದ್ದಾರೆ. ಈ ಒಪ್ಪಂದವು, ಇರಾನ್ ಪರಮಾಣು ಸಂಸ್ಕರಣೆಯನ್ನು ನಿಲ್ಲಿಸುವ ಮತ್ತು ಅಮೆರಿಕವು ತಾನು ಹಿಡಿದಿಟ್ಟುಕೊಂಡಿರುವ ಇರಾನ್‌ನ ಶತಕೋಟಿ ಡಾಲರ್‌ಗಳಷ್ಟು ಹಣವನ್ನು ಬಿಡುಗಡೆ ಮಾಡುವ ಅಂಶಗಳನ್ನು ಒಳಗೊಂಡಿರಲಿದೆ’ ಎಂದು ಆಕ್ಸಿಯೋಂ ವರದಿ ತಿಳಿಸಿದೆ.

ಪ್ರಾಜೆಕ್ಟ್‌ ಫ್ರೀಡಂ ಸ್ಥಗಿತ:

‘ಹೋರ್ಮುಜ್‌ನಲ್ಲಿ ಸಂಚರಿಸುವ ಎಲ್ಲಾ ಹಡಗುಗಳಿಗೆ ನೀಡಿದ್ದ ರಕ್ಷಣೆಯನ್ನು (ಪ್ರಾಜೆಕ್ಟ್‌ ಫ್ರೀಡಂ) ಪಾಕಿಸ್ತಾನದ ಮನವಿಯ ಮೇರೆಗೆ ಸ್ಥಗಿತಗೊಳಿಸಿದ್ದೇವೆ. ಇರಾನ್‌ ಜತೆ ಮಾತುಕತೆ ಪ್ರಗತಿ ಸಾಧಿಸಿರುವ ಕಾರಣ ಈ ಕ್ರಮ ಜರುಗಿಸಿದ್ದೇವೆ. ಆದರೆ ಹೋರ್ಮುಜ್‌ ಮೇಲೆ ವಿಧಿಸಿರುವ ನಿರ್ಬಂಧ ಮುಂದುವರಿಯುತ್ತದೆ’ ಎಂದೂ ಟ್ರಂಪ್‌ ಹೇಳಿದ್ದಾರೆ.

ಹೋರ್ಮುಜ್‌ ಮೇಲಿನ ನಿಯಂತ್ರಣಕ್ಕಾಗಿ ಅಮೆರಿಕ ಮತ್ತು ಇರಾನ್‌ ನಡುವೆ ಜಟಾಪಟಿ ಮುಂದುವರಿಯುತ್ತಿರುವ ನಡುವೆಯೇ, ಜಲಸಂಧಿಯ ಮೂಲಕ ಸಂಚರಿಸುವ ಎಲ್ಲ ದೇಶಗಳ ಹಡಗುಗಳಿಗೆ ರಕ್ಷಣೆ ನೀಡುವುದಾಗಿ ಅಮೆರಿಕ ಘೋಷಿಸಿತ್ತು. ಈ ಮೂಲಕ ಇರಾನ್‌ಗೆ ನೇರಾನೇರ ಸಡ್ಡು ಹೊಡೆದಿತ್ತು. ಇದು ಶಾಂತಿ ಸಂಧಾನಕ್ಕೆ ಅಡ್ಡಿ ಆಗಿತ್ತು.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.
Read more Articles on

Recommended Stories

ಕೊರೋನಾ ರೀತಿ ‘ಹಂಟು ವೈರಸ್‌’ ಪತ್ತೆ: ಸೋಂಕಿಗೆ 3 ಬಲಿ
ಸಿಎನ್‌ಎನ್‌ ಸಂಸ್ಥಾಪಕ ಟೆಡ್‌ ಟರ್ನರ್‌ ನಿಧನ