ಜಪಾನ್ ಪ್ರಧಾನಿ, ಪತ್ನಿಗೆ ಮೋದಿ ವಿಶಿಷ್ಟ ಉಡುಗೊರೆ

KannadaprabhaNewsNetwork |  
Published : Aug 31, 2025, 01:08 AM IST
ಮೋದಿ | Kannada Prabha

ಸಾರಾಂಶ

  ಜಪಾನ್ ಪ್ರವಾಸ ಪೂರ್ಣಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿ ಅಲ್ಲಿನ ಪ್ರಧಾನಿ ಶಿಗೇರು ಇಶಿಬಾ ಅವರಿಗೆ ಅಮೂಲ್ಯ ಹರಳುಗಳಿಂದ ಮಾಡಿದ, ಬೆಳ್ಳಿಯ ಕಡ್ಡಿಗಳನ್ನು ಹೊಂದಿರುವ ರಾಮೆನ್ ಬಟ್ಟಲುಗಳನ್ನು ಹಾಗೂ ಅವರ ಪತ್ನಿಗೆ ವಿಶೇಷ ಪೇಪಿಯರ್ ಮ್ಯಾಚೆ ಪೆಟ್ಟಿಗೆಯಲ್ಲಿ ಪಶ್ಮಿನಾ ಶಾಲನ್ನು ಉಡುಗೊರೆಯಾಗಿ ನೀಡಿದ್ದಾರೆ.

 ನವದೆಹಲಿ :  ಸದ್ಯ ಜಪಾನ್ ಪ್ರವಾಸ ಪೂರ್ಣಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿ ಅಲ್ಲಿನ ಪ್ರಧಾನಿ ಶಿಗೇರು ಇಶಿಬಾ ಅವರಿಗೆ ಅಮೂಲ್ಯ ಹರಳುಗಳಿಂದ ಮಾಡಿದ, ಬೆಳ್ಳಿಯ ಕಡ್ಡಿಗಳನ್ನು ಹೊಂದಿರುವ ರಾಮೆನ್ ಬಟ್ಟಲುಗಳನ್ನು ಹಾಗೂ ಅವರ ಪತ್ನಿಗೆ ವಿಶೇಷ ಪೇಪಿಯರ್ ಮ್ಯಾಚೆ ಪೆಟ್ಟಿಗೆಯಲ್ಲಿ ಪಶ್ಮಿನಾ ಶಾಲನ್ನು ಉಡುಗೊರೆಯಾಗಿ ನೀಡಿದ್ದಾರೆ.

ಇಶಿಬಾ ಅವರಿಗೆ 4 ಚಿಕ್ಕ ಮತ್ತು ಒಂದು ದೊಡ್ಡ ಚಂದ್ರಶಿಲೆಯ ಬಟ್ಟಲನ್ನು ನೀಡಿದ್ದಾರೆ. ಚಂದ್ರಶಿಲೆಯನ್ನು ಆಂಧ್ರಪ್ರದೇಶದ್ದಾಗಿದ್ದು, ದೊಡ್ಡ ಬಟ್ಟಲಿನ ತಳವನ್ನು ರಾಜಸ್ಥಾನದ ಮಕ್ರಾನಾ ಅಮೃತಶಿಲೆಯಿಂದ ತಯಾರಿಸಲಾಗಿದೆ. ಜಪಾನ್‌ನ ಡಾನ್‌ಬುರಿ ಮತ್ತು ಸೋಬಾ ಆಚರಣೆಗಳಿಂದ ಸ್ಫೂರ್ತಿ ಪಡೆದು ಇವುಗಳನ್ನು ವಿನ್ಯಾಸಗೊಳಿಸಲಾಗಿದೆ.

 ಇಶಿಬಾ ಅವರ ಪತ್ನಿಗೆ ನೀಡಿದ ಪಶ್ಮಿನಾ ಶಾಲನ್ನು ಲಡಾಖ್‌ನ ಚಾಂಗ್‌ಥಂಗಿ ಆಡಿನ ಉಣ್ಣೆಯಿಂದ ಕಾಶ್ಮೀರಿ ಕುಶಲಕರ್ಮಿಗಳು ಸಿದ್ಧಪಡಿಸಿದ್ದಾರೆ. ಶಾಲು ಹಾಗೂ ಅದನ್ನು ನೀಡಿದ ಮ್ಯಾಚೆ ಪೆಟ್ಟಿಗೆ ಎರಡೂ ಕಾಶ್ಮೀರದ ಕಲಾತ್ಮಕತೆ, ಪರಂಪರೆಯನ್ನು ಪ್ರತಿನಿಧಿಸುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.
Read more Articles on

Recommended Stories

ಮರುಭೂಮಿ ಸೌದಿಯಲ್ಲಿ ಹಿಮಪಾತ, ಮಳೆ!
ಸಿಡ್ನಿಯಲ್ಲಿ ಇನ್ನೊಂದು ದಾಳಿ ಸಂಚು ವಿಫಲ