ಚೀನಾದಲ್ಲಿ ಮತ್ತೆ ವೈರಸ್‌ ಸೋಂಕು: ಭಾರಿ ಸಾವು? - ಶವಾಗಾರಗಳು ಫುಲ್‌, ಸ್ಮಶಾನದಲ್ಲೂ ಜಾಗವಿಲ್ಲ

Published : Jan 03, 2025, 06:35 AM IST
Fourth Person dies as human to human transfer new China virus

ಸಾರಾಂಶ

ಇಡೀ ವಿಶ್ವವನ್ನೇ ಸ್ತಬ್ಧಗೊಳಿಸಿದ್ದ ಕೊರೋನಾ ವೈರಸ್‌ ಹಾವಳಿ ಕಾಣಿಸಿಕೊಂಡ ಸರಿಯಾಗಿ 5 ವರ್ಷಗಳ ಬಳಿಕ ಚೀನಾದಲ್ಲಿ ಮತ್ತೆ ಹಲವು ವೈರಸ್‌ಗಳು ವ್ಯಾಪಕವಾಗಿ ಹಬ್ಬಿವೆ ಎಂಬ ಆತಂಕಕಾರಿ ಸುದ್ದಿಯೊಂದು ಹೊರಬಿದ್ದಿದೆ.

ಬೀಜಿಂಗ್‌: ಇಡೀ ವಿಶ್ವವನ್ನೇ ಸ್ತಬ್ಧಗೊಳಿಸಿದ್ದ ಕೊರೋನಾ ವೈರಸ್‌ ಹಾವಳಿ ಕಾಣಿಸಿಕೊಂಡ ಸರಿಯಾಗಿ 5 ವರ್ಷಗಳ ಬಳಿಕ ಚೀನಾದಲ್ಲಿ ಮತ್ತೆ ಹಲವು ವೈರಸ್‌ಗಳು ವ್ಯಾಪಕವಾಗಿ ಹಬ್ಬಿವೆ ಎಂಬ ಆತಂಕಕಾರಿ ಸುದ್ದಿಯೊಂದು ಹೊರಬಿದ್ದಿದೆ. ಕಳೆದ ಕೆಲ ದಿನಗಳಿಂದ ಚೀನಾದಲ್ಲಿ ಇನ್‌ಫ್ಲೂಯೆನ್ಜಾ ಎ, ಎಚ್‌ಎಂಪಿವಿ, ಮೈಕೋಪ್ಲಾಸ್ಮಾ ನ್ಯುಮೋನಿಯಾ ಮತ್ತು ಕೋವಿಡ್‌ 19 ವೈರಸ್ ವ್ಯಾಪಕವಾಗಿ ಹಬ್ಬಿದೆ ಎಂದು ವರದಿಗಳು ತಿಳಿಸಿವೆ.

ವೈರಸ್‌ ವ್ಯಾಪಕವಾಗಿ ಹಬ್ಬಿರುವ ಕಾರಣ, ದೇಶದ ಹಲವು ಭಾಗಗಳಲ್ಲಿ ಆಸ್ಪತ್ರೆಗಳು ಸೋಂಕಿತರಿಂದ ತುಂಬಿ ತುಳುಕುತ್ತಿವೆ. ವೈರಸ್‌ ಸೋಂಕಿನಿಂದಾಗಿ ಭಾರೀ ಪ್ರಮಾಣದಲ್ಲಿ ಸಾವು ಸಂಭವಿಸಿದ್ದು, ಶವಾಗಾರ ಮತ್ತು ಸ್ಮಶಾನಗಳಲ್ಲೂ ಜಾಗ ಇಲ್ಲದಂತಾಗಿದೆ. ಸೋಂಕು ತಡೆಗೆ ಈಗಾಗಲೇ ಚೀನಾ ಸರ್ಕಾರ ಆರೋಗ್ಯ ತುರ್ತುಪರಿಸ್ಥಿತಿ ಘೋಷಿಸಿದೆ ಎಂಬ ಕುರಿತಾದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ.

ಆದರೆ ಇಂಥ ಸುದ್ದಿಗಳ ಕುರಿತು ಇದುವರೆಗೂ ಚೀನಾ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಜೊತೆಗೆ ಇದನ್ನು ನಿರಾಕರಿಸಿಯೂ ಇಲ್ಲ. ಈ ಹಿಂದೆ ಕೋವಿಡ್‌ ಕಾಣಿಸಿಕೊಂಡಾಗಲೂ ಚೀನಾ ಇದೇ ರೀತಿಯಲ್ಲಿ ವರ್ತಿಸಿತ್ತು. ಹೀಗಾಗಿ ಚೀನಾದ ವರ್ತನೆ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.

ಈ ನಡುವೆ ‘ನ್ಯುಮೋನಿಯಾ ಸೇರಿದಂತೆ ಉಸಿರಾಟ ಸಂಬಂಧಿ ಸಮಸ್ಯೆಗಳ ಮೇಲೆ ನಿಗಾ ವಹಿಸಲಾಗುತ್ತಿದೆ. ಕೊರೋನಾ ಸಂದರ್ಭದಲ್ಲಿ ಉಂಟಾದ ಅವ್ಯವಸ್ಥೆಯ ಪರಿಸ್ಥಿತಿ ಮತ್ತೆ ನಿರ್ಮಾಣವಾಗುವುದನ್ನು ತಡೆಯುವ ಸಲುವಾಗಿ ಸೂಕ್ತ ಮಾರ್ಗಸೂಚಿ ರಚಿಸಲು ಸಿದ್ಧತೆ ನಡೆಯುತ್ತಿದೆ. ಇದರ ಭಾಗವಾಗಿ, ರಾಷ್ಟ್ರೀಯ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಆಯೋಗ, ಈ ರೋಗದ ವರದಿ, ನಿಯಂತ್ರಣ ಹಾಗೂ ತಡೆಗಟ್ಟುವಿಕೆ ಏಜೆನ್ಸಿ ಸ್ಥಾಪಿಸಲು ಮತ್ತು ಸಿಸಿಟಿವಿ ಅಳವಡಿಸಲು ನಿರ್ಧರಿಸಿದೆ ಎಂದು ’ ಎಂದು ರಾಯಿಟರ್ಸ್‌ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಎಚ್‌ಎಂಪಿವಿ ಲಕ್ಷಣಗಳೇನು?:

ಈ ಸೋಂಕು ತಗುಲಿದ ವ್ಯಕ್ತಿಯಲ್ಲಿ ಜ್ವರ ಹಾಗೂ ಕೊರೋನಾದ ಸೌಮ್ಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

PREV

Recommended Stories

ಭಾರತ ಮೇಲೆ ಮತ್ತಷ್ಟು ತೆರಿಗೆ : ಟ್ರಂಪ್‌ ಬೆದರಿಕೆ
ಪಿಒಕೆನಲ್ಲಿ ಪಹಲ್ಗಾಂ ಉಗ್ರನ ಸಾಂಕೇತಿಕ ಅಂತ್ಯಕ್ರಿಯೆ!