;Resize=(412,232))
ಟೆಹ್ರಾನ್: ಮತ್ತಷ್ಟು ಕಠಿಣ ದಾಳಿ ಕುರಿತಾದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆಗೆ ತಿರುಗೇಟು ನೀಡಿರುವ ಇರಾನ್, ‘ನಮ್ಮ ಮೇಲೆ ಮತ್ತೇನಾದರೂ ದಾಳಿ ಮುಂದುವರೆಸಿದರೆ ನಾವು ಕೂಡ ಹಿಂದೆಂದೂ ಕಾಣದಂಥ ಪ್ರತಿಕ್ರಿಯೆ ನೀಡಲಿದ್ದೇವೆ. ಜೊತೆಗೆ ಇಂಥ ದಾಳಿಯು ಇಂಧನ ಮೂಲಸೌಕರ್ಯಗಳು ಮತ್ತು ಮಾರುಕಟ್ಟೆಯನ್ನೇ ಧ್ವಂಸಮಾಡಲಿದೆ’ ಎಂದು ಕಟು ನುಡಿಗಳಲ್ಲಿ ಎಚ್ಚರಿಸಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಇರಾನ್ ಸಂಸತ್‌ನ ಸ್ಪೀಕರ್ ಮತ್ತು ಅಮೆರಿಕ ಜೊತೆಗಿನ ಸಂಧಾನಕಾರರಾಗಿರುವ ಮೊಹಮ್ಮದ್ ಬಾಗೆರ್ ಘಾಲಿಬಾಫ್, ‘ಅಮೆರಿಕ ದಾಳಿ ಮುಂದುವರೆಸಿದರೆ ಅದು, ಒಂದೋ ತೈಲ ಹಾಗೂ ಅನಿಲ ಎಲ್ಲರಿಗೂ ಸಿಗಬೇಕು ಇಲ್ಲವೇ ಯಾರಿಗೂ ಸಿಗಬಾರದು ಎಂಬಂಥ ಪರಿಸ್ಥಿತಿಗೆ ಕಾರಣವಾಗಲಿದೆ.
ಆಗ ನಾವು ನೀಡುವ ತಿರುಗೇಟು ಅಮೆರಿಕದ ಆರ್ಥಿಕತೆ ಹಲವು ವರ್ಷಗಳ ಕಾಲ ಸಂಕಷ್ಟದಲ್ಲಿ ಸಿಕ್ಕಿಬೀಳುವ ಸಂದರ್ಭವನ್ನು ಸೃಷ್ಟಿಸಲಿದೆ. ಅಮೆರಿಕದ ಪ್ರಚೋದನಾಕಾರಿ ನಿರ್ಧಾರಗಳು ಕೊನೆಯಿಲ್ಲದ ಕೆಸರಿನ ಕೊಳವನ್ನು ಸೃಷ್ಟಿಸುತ್ತಿವೆ. ಕೊನೆಗೆ ಅದರಲ್ಲಿ ಅಮೆರಿಕ ವರ್ಷಗಳ ಕಾಲ ಸಿಕ್ಕಿಹಾಕಿಕೊಳ್ಳಬೇಕಾಗುತ್ತದೆ. ಬೇರೆಯದೇ ಇರಾನ್ ಅನ್ನು ನೋಡಬೇಕಾಗುತ್ತದೆ’ ಎಂದು ಗುರುವಾರ ಕಟು ಎಚ್ಚರಿಕೆ ನೀಡಿದ್ದಾರೆ.