2026ಕ್ಕೆ ಆಸ್ಟ್ರೇಲಿಯಾದ ಕ್ವಾಂಟಸ್‌ ಏರ್‌ಲೈನ್ಸ್‌ನಿಂದ ವಿಶ್ವದ ಸುದೀರ್ಘ ವಿಮಾನಯಾನ ಸೇವೆ ಆರಂಭ

KannadaprabhaNewsNetwork |  
Published : Nov 16, 2024, 12:30 AM ISTUpdated : Nov 16, 2024, 04:09 AM IST
ವಿಮಾನಯಾನ | Kannada Prabha

ಸಾರಾಂಶ

ಆಸ್ಟ್ರೇಲಿಯಾದ ಕ್ವಾಂಟಸ್‌ ಏರ್‌ಲೈನ್ಸ್‌ 2026ರಲ್ಲಿ ವಿಶ್ವದ ಅತಿ ಸುದೀರ್ಘ ವಿಮಾನಯಾನ ಸೇವೆ ಆರಂಭಿಸಲು ನಿರ್ಧರಿಸಿದೆ.

ಪರ್ತ್‌: ಆಸ್ಟ್ರೇಲಿಯಾದ ಕ್ವಾಂಟಸ್‌ ಏರ್‌ಲೈನ್ಸ್‌ 2026ರಲ್ಲಿ ವಿಶ್ವದ ಅತಿ ಸುದೀರ್ಘ ವಿಮಾನಯಾನ ಸೇವೆ ಆರಂಭಿಸಲು ನಿರ್ಧರಿಸಿದೆ. ಸಿಡ್ನಿ- ಲಂಡನ್‌- ನ್ಯೂಯಾರ್ಕ್‌ ನಡುವಿನ ತಡೆ ರಹಿತ ಸಂಚಾರದ ಉದ್ದೇಶ ಇದ್ದು, ಪ್ರಯಾಣಿಕರು 22 ಗಂಟೆಗಳ ಕಾಲ ವಿಮಾನದಲ್ಲಿ ಕೂರಬೇಕಾಗಿ ಬರಲಿದೆ.

ಪ್ರಾಜೆಕ್ಟರ್‌ ಸನ್‌ರೈಸ್‌ ಹೆಸರಿನ ಈ ಯೋಜನೆಯಲ್ಲಿ ಪ್ರಯಾಣಿಕರು ತಮ್ಮ ಒಂದೇ ಪ್ರಯಾಣದ ವೇಳೆ 2 ಸೂರ್ಯೋದಯ ವಿಕ್ಷಣೆಯ ಅವಕಾಶ ಪಡೆಯುತ್ತಾರೆ. ಈ ತಡೆರಹಿತ ಸೇವೆಯು, ಸಂಚಾರದ ಒಟ್ಟಾರೆ ಅವಧಿಯನ್ನು 4 ಗಂಟೆಗಳಷ್ಟು ಕಡಿತಗೊಳಿಸಲಿದೆ.

ಇದು ಪ್ರಸ್ತುತ ಸಿಂಗಾಪುರ ಏರ್‌ಲೈನ್ಸ್‌ ಸಿಂಗಾಪುರ ಮತ್ತು ಜಾನ್‌ ಎಫ್‌ ಕೆನಡಿ ವಿಮಾನ ನಿಲ್ದಾಣದ ನಡುವೆ ವಿಶ್ವದ ಅತಿಸುದೀರ್ಘ ವಿಮಾನಯಾನ ಸೇವೆ ನೀಡುತ್ತಿದೆ. ಈ ಮಾರ್ಗ ಕ್ರಮಿಸಲು 18 ಗಂಟೆ ಬೇಕಾಗುತ್ತದೆ.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.

Recommended Stories

ಆಸ್ಟ್ರೇಲಿಯಾದಲ್ಲಿ ಯಹೂದಿಗಳ ನರಮೇಧ!
ಜನಸಂಖ್ಯೆ ಹೆಚ್ಚಳಕ್ಕೆ ಚೀನಾದಲ್ಲಿ ಕಾಂಡೋಮ್‌ ಟ್ಯಾಕ್ಸ್‌